ಬೆಂಗಳೂರು: 4 ತಿಂಗಳ ಸಂಬಳ ಕೊಡದಿದ್ದಕ್ಕೆ ತಾನು ಕೆಲಸ ಮಾಡುತ್ತಿದ್ದ ಮಾಲೀಕನ ಮನೆಯಲ್ಲೇ ಸಿದ್ದು ಎಂಬಾತ ಚಿನ್ನಾಭರಣ ಕಳ್ಳತನ ಮಾಡಿದ ಘಟನೆ ಬೆಂಗಳೂರಿನ ಬೆಳ್ಳಂದೂರಿನಲ್ಲಿ ನಡೆದಿದೆ. ಖಾಸಗಿ ಕಂಪನಿಯಲ್ಲಿ ಕೆಲಸ ಬಿಟ್ಟಿದ್ದ ಆರೋಪಿ ಸಿದ್ದು, ಅರುಂಧತಿ ಮಿಶ್ರಾ ಎಂಬುವರ ಬಳಿ ಕಾರು ಚಾಲಕನಾಗಿ ಸೇರಿದ್ದ.
ಆದರೆ, ಅರುಂಧತಿ ಬಳಿಯೂ ಆರೋಪಿ ಸಿದ್ದು ಕೆಲಸ ಬಿಟ್ಟಿದ್ದರಿಂದ 4 ತಿಂಗಳ ಸಂಬಳ ಕೊಟ್ಟಿರಲಿಲ್ಲ. ಹೀಗಾಗಿ, ಮನೆಯಲ್ಲಿ ಯಾರೂ ಇಲ್ಲದನ್ನೂ ಗಮನಿಸಿದ ಆರೋಪಿ, ನಕಲಿ ಕೀ ಬಳಸಿ ಕಳ್ಳತನ ಕೃತ್ಯ ಎಸಗಿದ್ದ. ಸದ್ಯ ಆರೋಪಿಯನ್ನು ಬೆಳ್ಳಂದೂರು ಪೊಲೀಸರು ಬಂಧಿಸಿದ್ದು, 682 ಗ್ರಾಂ ಚಿನ್ನಾಭರಣ ಜಪ್ತಿ ಮಾಡಿದ್ದಾರೆ. ಘಟನೆ ಸಂಬಂಧ ಪ್ರಕರಣ ದಾಖಲಾಗಿದೆ.