ಬೆಂಗಳೂರು : ರಾಜ್ಯಪಾಲರು ರೈತರ ಆತ್ಮಹತ್ಯೆ ಕಡಿಮೆ ಅಂತಾರೆ. 800ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಿಎಂ ಸಿದ್ದರಾಮಯ್ಯ ಕ್ಷೇತ್ರದಲ್ಲೇ ಹೆಚ್ಚು ಆತ್ಮಹತ್ಯೆಯಾಗಿವೆ ಎಂದು ಶಾಸಕ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಆರೋಪಿಸಿದರು.
ವಿಧಾನಸಭೆಯಲ್ಲಿ ರಾಜ್ಯಪಾಲರ ಭಾಷಣದ ಮೇಲೆ ಮಾತನಾಡಿದ ಅವರು, ಪರಿಹಾರಕ್ಕಾಗಿ ರೈತರ ಆತ್ಮಹತ್ಯೆ ಎಂದು ಸಚಿವರು ಬೇಜವಾಬ್ದಾರಿ ಹೇಳಿಕೆಗಳನ್ನ ಕೊಡುತ್ತಾರೆ. ಕೃಷಿ ಸಾಲಮನ್ನಾಕ್ಕೆ ರೈತರು ಭಾವಿಸ್ತಾರೆ ಅಂತಾರೆ. ರೈತರಿಗೆ ಅಪಮಾನವನ್ನು ಮಾಡುತ್ತಿದ್ದಾರೆ ಎಂದು ಬೇಸರಿಸಿದರು.
ಲೋಡ್ ಶೆಡ್ಡಿಂಗ್ ನಿಂದ ರೈತರು ಪರದಾಡುತ್ತಿದ್ದಾರೆ. ರೈತರ ಪರ ಸರ್ಕಾರ ಅಂತ ಹೇಳುತ್ತಾರೆ. ಹಾಲಿನ ದರ ಹೆಚ್ಚಳ ಮಾಡುತ್ತಾರೆ. ರೈತರ ಪ್ರೋತ್ಸಾಹ ಧn ಕಡಿತ ಮಾಡುತ್ತಾರೆ. ಗ್ರಾಹಕರಿಗೆ ಬೆಲೆ ಏರಿಕೆ ಶಾಕ್ ಕೊಡುತ್ತಾರೆ. ಕೊಟ್ಟ ಭರವಸೆ ಯಾವುದೂ ಈಡೇರಿಲ್ಲ ಎಂದು ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ವಿಜಯೇಂದ್ರ ಗುಡುಗಿದರು.