ಹುಬ್ಬಳ್ಳಿ ;- ಜೈನಮುನಿಗಳ ಕೊಲೆ ಪ್ರಕರಣದ ಹಿಂದೆ ಷಡ್ಯಂತ್ರ ಇದೆ ಎಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.
ಬೆಳಗಾವಿಯಲ್ಲಿ ಮಾತನಾಡಿದ ಅವರು, ಕೇವಲ ದುಡ್ಡಿಗೋಸ್ಕರ ಕೊಲೆ ಮಾಡಿದ್ದಾರೆಂದು ನನಗೇನು ಅನಿಸಲ್ಲ. ಈ ಕೊಲೆ ಪ್ರಕರಣದ ಹಿಂದೆ ಷಡ್ಯಂತ್ರ ಇದೆ, ಅದನ್ನು ಬೇಧಿಸಬೇಕು. ಕೊಲೆ ಆರೋಪಿಗಳ ಮನೆಗಳಿಗೂ ಬಹಿಷ್ಕಾರ ಹಾಕಬೇಕು. ಆ ಮನೆಯ ತಂದೆ, ತಾಯಿ, ಅಣ್ಣ, ತಮ್ಮ ಎಲ್ಲರಿಗೂ ಗೊತ್ತಾಗಬೇಕು.
ನನ್ನ ಮನೆಯವರು ಹೀಗೆ ಮಾಡಿದ್ರೆ ನಮಗೂ ಶಿಕ್ಷೆ ಆಗುತ್ತೆ ಅಂತಾ ಆ ಮನೆಯವರಿಗೂ ಗೊತ್ತಾಗಬೇಕು. ತಂದೆ, ತಾಯಿ ಮಗನಿಗೆ ಇದೇ ರೀತಿ ಶಿಕ್ಷಣ ಕೊಟ್ಟಿದ್ದೀರಾ? ಸಾಲ ಎಲ್ಲರೂ ಕೊಡ್ತಾರೆ, ವಾಪಸ್ ಕೇಳುವಂತದ್ದು ಧರ್ಮ ಎಲ್ಲರೂ ಕೇಳ್ತಾರೆ. ಪೂಜ್ಯ ಸಂತರಿಗೆ ಶ್ರದ್ಧಾಂಜಲಿ ಅರ್ಪಣೆ ಮಾಡಲು ಬಂದಿದ್ದೇವೆ. ಇದೊಂದು ಅತ್ಯಂತ ದುರದೃಷ್ಟಕರವಾದಂತಹ ಘಟನೆ. ಮಾನವೀಯತೆ, ಮನುಷ್ಯತ್ವ ಎಲ್ಲಿವರೆಗೆ ತಲುಪಿದೆ. ಯಾರನ್ನು ಹೊಡೀತಿದ್ದಾರೆ, ನಡೆಯಬೇಕಾದರೆ ಇರುವೆ ತುಳಿಯಲಾರದಂತ ಸಂತ. ಜೈನಮುನಿ ಅಹಿಂಸಾ ಪರಮೋ ಧರ್ಮ ಅಂತಾ ಹೇಳಿದವರು. ಅವರನ್ನೇ ಪ್ರಾಣಿಗಳನ್ನು ಕತ್ತರಿಸುವ ಮಾದರಿಯಲ್ಲಿ ಸಂತನ ಹತ್ಯೆಗೈದಿದ್ದಾರೆ. ಅಂತಹ ಮಾನಸಿಕತೆ ವಿರುದ್ಧ ನಾವೆಲ್ಲ ಹೋರಾಟ ಮಾಡಬೇಕಿದೆ ಎಂದು ಶ್ರೀರಾಮಸೇನೆ ಮುಖ್ಯಸ್ಥ ಮುತಾಲಿಕ್ ಆಕ್ರೋಶ ಹೊರ ಹಾಕಿದ್ರು.