ಬೆಂಗಳೂರು:– ಸಂವಿಧಾನ ಬದಲಾವಣೆ ಮಾಡುವ ಸಂಚು ನಡೆಯುತ್ತಿದೆ ಎಂದು AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು,ಸಂವಿಧಾನಕ್ಕೆ ತಿಲಾಂಜಲಿ ಹಾಡಬೇಕು ಅಂತ ಒಳಗಿಂದಲೇ ಪ್ರಯತ್ನ ನಡೆದಿದೆ. ಕೆಲವು ಜನರು ನಮ್ಮೊಳಗೆ ಜಗಳ ಹಚ್ಚಬೇಕು ಅಂತಾ ಹೊರಟಿದ್ದಾರೆ. ಇಡಿ ದುರುಪಯೋಗ ಆಗುತ್ತಿದೆ. ಶಾಸಕರನ್ನು ಖರೀದಿ ಮಾಡುತ್ತಿದ್ದಾರೆ. ರಾಜ್ಯಗಳನ್ನು ತಮ್ಮ ಕೈಗೆ ತೆಗೆದುಕೊಳ್ಳುವ ಕೆಲಸ ಮಾಡುತ್ತಿದ್ದಾರೆ. ಕರ್ನಾಟಕ, ಮಹಾರಾಷ್ಟ್ರ, ಮಧ್ಯಪ್ರದೇಶದಲ್ಲೂ ಈ ಕೆಲಸ ಆಗಿದೆ. ಇದರಿಂದ ಸಂವಿಧಾನ, ಪ್ರಜಾಪ್ರಭುತ್ವಕ್ಕೆ ಹೊಡೆತ ಬೀಳುತ್ತಿದೆ ಎಂದು ಹೇಳಿದ್ದಾರೆ.
ಇದೇ ಚಟ ಮುಂದುವರಿದರೆ ಡಿಕ್ಟೇಟರ್ಶಿಪ್ ಬಂದೇ ಬರುತ್ತದೆ. ಎಲ್ಲಿ ಪ್ರಜ್ಞಾವಂತರು ಇದ್ದಾರೋ ಅಲ್ಲಿ ಪ್ರಜಾಪ್ರಭುತ್ವ ಉಳಿದಿದೆ. ಡಿಕ್ಟೇಟರ್ಶಿಪ್ ಬಂದರೆ ಅನೇಕ ದೇಶಗಳಲ್ಲಿ ಯಾರೂ ಕೇಳುವವರಿಲ್ಲ. ಸಂವಿಧಾನ ಉಳಿದರೆ ದೇಶದಲ್ಲಿ ಐಕ್ಯತೆ ಉಳಿಯುತ್ತದೆ. ಪ್ರಜಾಪ್ರಭುತ್ವ ಉಳಿದರೆ ಎಲ್ಲರೂ ಸುಖ, ಸಂಭ್ರಮದಿಂದ ಬಾಳುತ್ತಾರೆ ಎಂದಿದ್ದಾರೆ.
ಸಂವಿಧಾನದ ಪ್ರಕಾರವೇ ನಾವೆಲ್ಲರೂ ನಡೆದುಕೊಳ್ಳಬೇಕು. ಈ ಹಿಂದೆ ಹೆಚ್ಚು ಮಕ್ಕಳಿಗೆ ವೋಟಿಂಗ್ ಕೊಡುವ ಅಧಿಕಾರ ಇರಲಿಲ್ಲ. ವೋಟ್ ಪವರ್ ಕೊಟ್ಟಿದ್ದು ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ನೆಹರು ಎಂದರು.