ಗಂಗಾವತಿ: ಬೆಂಕಿ ಇಲ್ಲದೆ ಹೊಗೆ ಬರಲ್ಲ ಆದ್ದರಿಂದ ನಟ ಸುದೀಪ್ ಹಾಗೂ ನಿರ್ಮಾಪಕ ಕುಮಾರ್ ಮಧ್ಯೆ ಸಮಸ್ಯೆ ಇದ್ದು ಶೀಘ್ರವೇ ಪರಿಹಾರವಾಗುವ ನಿರೀಕ್ಷೆ ಇದೆ ಎಂದು ಕನ್ನಡದ ಹಿರಿಯ ಹಾಸ್ಯ ನಟ ಹಾಗೂ ನಿರ್ಮಾಪಕ ಮಿತ್ರಾ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿ, ಸೀಮಿತ ಮಾರುಕಟ್ಟೆ ಹೊಂದಿರುವ ಕನ್ನಡ ಚಿತ್ರರಂಗಕ್ಕೆ ನಿರ್ಮಾಪಕರ ಕೊಡುಗೆ ಅಪಾರವಾಗಿದೆ. ನನ್ನನ್ನು ಸೇರಿ ಪ್ರತಿಯೊಬ್ಬ ನಟರೂ ಗೌರವಯುತವಾಗಿ ನಡೆದುಕೊಳ್ಳಬೇಕು.
ಕುಮಾರ ಹಾಗೂ ಸುದೀಪ್ ಸಮಸ್ಯೆ ದೀರ್ಘ ಮಟ್ಟಕ್ಕೆ ಹೋಗಿರವುದರಿಂದ ಕನ್ನಡ ಚಿತ್ರರಂಗ ಎಲ್ಲಾ ಹಿರಿಯರು ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಿದ್ದು ಇಬ್ಬರೂ ಒಂದು ಹೆಜ್ಜೆ ಹಿಂದಿಡಬೇಕು.ಇದರಿಂದ ಎಲ್ಲರ ಗೌರವವು ಹೆಚ್ಚಾಗುತ್ತದೆ. ನಿರ್ಮಾಪಕ, ನಿರ್ದೇಶಕ ಮತ್ತು ಕಲಾವಿದರೂ ಮತ್ತು ಪ್ರೇಕ್ಷಕ ವರ್ಗವಿದ್ದರೆ ಮಾತ್ರ ಇಂಡಸ್ಟ್ರಿ ಇರಲು ಸಾಧ್ಯ. ಇಲ್ಲಿ ಯಾರು ಸಹ ಪ್ರತಿಷ್ಠೆ ತೆಗೆದುಕೊಳ್ಳಬಾರದು ಎಂದು ನಟ ಮಿತ್ರಾ ತಿಳಿಸಿದರು.
ಇದನ್ನೂ ಓದಿ : ಕುಡಿವ ನೀರಲ್ಲಿ ಹುಳುಗಳು ಪತ್ತೆ; ಅಜ್ಮೀರ್ ನಗರದ ಜನರಿಗೆ ನೀರಿಲ್ಲದೆ ಪರದಾಟ