ಬೆಂಗಳೂರು : ಡಿ.ಕೆ. ಶಿವಕುಮಾರ್ ಅವರ ಅಕ್ರಮ ಆಸ್ತಿ ಗಳಿಕೆ ಪ್ರಕರಣದ ಸಿಬಿಐ ತನಿಖೆ ಅಮಾನತು ವಿಚಾರ ಸಂಬಂಧ ಮಾಜಿ ಸಚಿವ ಸಿ.ಟಿ. ರವಿ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಡಿ.ಕೆ. ಶಿವಕುಮಾರ್ ಅವರು ಆಲೂಗಡ್ಡೆ ಹಾಕಿ ಚಿನ್ನ ತೆಗೆದಿದ್ರೆ ಜನಸಾಮಾನ್ಯರಿಗೆ ತಿಳಿಸಲಿ ಎಂದು ವ್ಯಂಗ್ಯವಾಡಿದ್ದಾರೆ.
2020ರಲ್ಲಿ ಸಿಬಿಐ ಎಫ್ಐಆರ್ ಹಾಕಿದೆ. ಇದನ್ನ ಚಾಲೆಂಜ್ ಮಾಡಿ ಡಿಕೆಶಿ ಹೈಕೋರ್ಟ್ ಮೊರೆ ಹೋಗಿದ್ದರು. ಮೂರು ತಿಂಗಳ ಒಳಗೆ ಸಿಬಿಐ ಫೈನಲ್ ರಿಪೋರ್ಟ್ ಸಬ್ಮಿಟ್ ಮಾಡಲು ಹೇಳಿತ್ತು. ಈ ಹಂತದಲ್ಲಿ ವಾಪಸ್ ಪಡೆದಿದ್ದಾರೆ. ವಿತ್ ಡ್ರಾ ಮಾಡಲು ಬರುವುದಿಲ್ಲ. ಒಬ್ಬ ಭ್ರಷ್ಟ ಆರೋಪಿಯ ರಕ್ಷಣೆಗೆ ನಿಲ್ಲೋದು ಪ್ರಜಾಪ್ರಭುತ್ವದ ಮೇಲೆ ವಿಶ್ವಾಸ ಇಟ್ಟವರು ಮಾಡುವ ಕೆಲಸವಲ್ಲ ಎಂದು ಕಿಡಿಕಾರಿದ್ದಾರೆ.
ನಮ್ಮವರ ಮೇಲೂ ಆರೋಪ ಇದ್ದವು
ಸರ್ಕಾರದ ಮುಖ್ಯ ಕಾರ್ಯದರ್ಶಿ, ಹೋಂ ಸೆಕ್ರೆಟರಿಗೆ ಪ್ರಶ್ನೆ ಮಾಡುತ್ತೇನೆ. ಯಾವ ಆಧಾರದ ಮೇಲೆ ಕ್ಯಾಬಿನೆಟ್ಗೆ ತಂದ್ರಿ ಈ ವಿಚಾರವನ್ನು? ನೀವು ಮಾಡಿರೋದು ಸಂವಿಧಾನದ ವಿರೋಧಿ. ನಮ್ಮವರ ಮೇಲೂ ಆರೋಪ ಇದ್ವು. ಅವರು ಕೇಸ್ ವಿತ್ ಡ್ರಾ ಬಂಡತನಕ್ಕೆ ಕೈ ಹಾಕಲಿಲ್ಲ. ಬದಲಿಗೆ ನ್ಯಾಯಾಲಯಕ್ಕೆ ಹೋದರು. ತಮ್ಮ ಅಕ್ರಮಕ್ಕೆ ಸಂಪುಟವನ್ನ ಬಳಸಿಕೊಳ್ಳಲಾಗಿದೆ ಎಂದು ಹರಿಹಾಯ್ದಿದ್ದಾರೆ.