ಮಂಡ್ಯ: ಚಿಕ್ಕಮಗಳೂರಿಗೆ ಮಳೆಗಾಗಿ ಪೂಜೆ ಮಾಡಿ ಬಂದಿದ್ದೇವೆ. ಮಳೆ ಬರುತ್ತದೆ ಎಂಬ ನಂಬಿಕೆ ಇದೆ. ಈ ತಿಂಗಳ ಒಳಗೆ ಒಳ್ಳೆಯ ಮಳೆ ಬರಲಿದೆ ಎಂದ ವರದಿ ಇದೆ ಎಂದು ಕೃಷಿ ಸಚಿವ ಎನ್ ಚಲುವರಾಯಸ್ವಾಮಿ (Chaluvarayaswamy) ಹೇಳಿದರು. ಮಂಡ್ಯದಲ್ಲಿ ಮಾತನಾಡಿದ ಅವರು, ಆಶಾದಾಯಕವಾಗಿ ಇರಬೇಕಾದದ್ದು ಅನಿರ್ವಾಯತೆ.
ಕೆಆರ್ಎಸ್ ಒಳಹರಿವು ಕೂಡ ಕಡಿಮೆ ಆಗಿದೆ. ಸಮಸ್ಯೆಯಂತು ಇದೆ. ಮಳೆಯೇ ಬರದಿದ್ದಾಗ ಬರಗಾಲ ಘೋಷಣೆ ಮಾಡುವುದು. ಮೋಡ ಬಿತ್ತನೆ ಮಾಡುವ ಬಗ್ಗೆ ಸರ್ಕಾರ ಅಂತಿಮ ಹೆಜ್ಜೆ ಇಡುತ್ತದೆ. ಕ್ಯಾಬಿನೆಟ್ ಸಬ್ ಕಮಿಟಿ ಈಗಾಗಲೇ ಒಂದು ಸಭೆ ಮಾಡಿದೆ. ಕೆಲವೊಂದು ಮಾನದಂಡದ ನಂತರ ಬರಗಾಲ ಘೋಷಣೆ ಮಾಡಲಾಗುವುದು ಎಂದರು.