ಬೆಂಗಳೂರು: ಅಯೋಧ್ಯೆ ರಾಮಮಂದಿರ ವಿಷಯದಲ್ಲಿ ಯಾವುದೇ ಗೊಂದಲವಿಲ್ಲ ನಾವು ಹಿಂದೂಗಳೇ ಎಂದ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ರಾಮಮಂದಿರ ವಿಚಾರದಲ್ಲಿ ಯೂಟರ್ನ್ ಹೊಡೆದಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ನಾವು ಕೂಡಾ ಶ್ರೀರಾಮನ ಆರಾಧಕರು ನನ್ನ ಎದೆಯನ್ನು ಸೀಳಿದ್ರೆ ಶ್ರೀರಾಮ, ಸಿದ್ದರಾಮ ಇಬ್ಬರೂ ಇದ್ದಾರೆ ಬಿಜೆಪಿಯವರು ನಾವು ಹಿಂದೂ ವಿರೋಧಿಗಳೆಂಬ ರೀತಿ ಬಿಂಬಿಸ್ತಿದ್ದಾರೆ ಎಂದು ಹೇಳಿದ್ದಾರೆ
ಯುವಕರು ದಯವಿಟ್ಟು ರಾಜಕಾರಣಿಗಳ ಹಿಂದೆ ಬರಲೇಬೇಡಿ ನಿಮಗೆ ರಾಜಕಾರಣಿ ಇಷ್ಟವಾದ್ರೆ ಚುನಾವಣೆ ವೇಳೆ ಮತ ಹಾಕಿ ರಾಮಮಂದಿರ ಓಪನ್ ಮಾಡಿಸಿದ್ದೇ ರಾಜೀವ್ ಗಾಂಧಿ. ಜ.22ರ ನಂತರ ಅಯೋದ್ಯೆಗೆ ಹೋಗ್ತೆನೆಂದು ಸಿಎಂ ಹೇಳಿದ್ದಾರೆ ನಾನು ಕೂಡಾ ಶ್ರೀರಾಮನ ಆರಾಧಕ, ನಾನೂ ಅಯೋಧ್ಯೆಗೆ ಹೋಗ್ತೇನೆ ಎಂದು ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಹೇಳಿದ್ದಾರೆ.