ಮೈಸೂರು: ಸಚಿವ ಸೋಮಣ್ಣ ಸ್ಪರ್ಧೆಯಿಂದ ವರುಣಾ ಕ್ಷೇತ್ರ ಸಾಕಷ್ಟು ಹೈವೋಲ್ಟೇಜ್ ಪಡೆದುಕೊಂಡಿದೆ. ಸಿದ್ದು ಹಾಗೂ ಸೋಮಣ್ಣ ನಡುವಿನ ಕಾದಾಟಕ್ಕೆ ವರುಣಾ ಸಾಕ್ಷಿಯಾಗಲಿದೆ. ಈ ನಡುವೆ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿದ್ದ ಸೋಮಣ್ಣ ಅವರಿಗೆ ಆತಂಕ ತಂದೊಡ್ಡುವಂಥ ಘಟನೆಯೊಂದು ನಡೆದಿದೆ. ಸೋಮಣ್ಣಗೆ ಸಿಗಲಿಲ್ವಾ ಚಾಮುಂಡೇಶ್ವರಿ ತಾಯಿಯ ಆಶೀರ್ವಾದ ಸಿಗಲಿಲ್ವಾ ಅನ್ನೋ ಮಾತು ಎಲ್ಲೆಡೆ ಜೋರಾಗಿಯೇ ಹರಿದಾಡುತ್ತಿದೆ.
ಚಾಮುಂಡಿ ದರ್ಶನ ಪಡೆದ ಸೋಮಣ್ಣ ನಂತ್ರ ದೇಗುಲ ಮುಂಭಾಗದಲ್ಲಿ ಈಡುಗಾಯಿ ಒಡೆದ್ರು. ಈಡುಗಾಯಿಯ ಕಾಯಿ ಒಡೆಯಲೇ ಇಲ್ಲ.ಇಳಿ ತೆಗೆದು ಈಡುಗಾಯಿ ಒಡೆದಾಗ ಹೋಳಾಗದ ತೆಂಗಿನ ಕಾಯಿಯನ್ನ ನೋಡಿ ಸೋಮಣ್ಣ ವಿಚಲಿತ ರಾದ್ರು.ಮತ್ತೆ ಅದೇ ತೆಂಗಿನಕಾಯಿ ತೆಗೆದುಕೊಂಡು ಮತ್ತೊಮ್ಮೆ ಈಡುಗಾಯಿ ಹೊಡೆದ ಸೋಮಣ್ಣ ಕಾಯಿ ಹೋಳಾದ ಮೇಲೆ ನಿಟ್ಟುಸಿರುಬಿಟ್ರು.
ಜೊತೆಗಿದ್ದವರಿಂದ ಸ್ಥೈರ್ಯ ತುಂಬುವ ಯತ್ನ
ಯಾವಾಗ ಈಡುಗಾಯಿ ಒಡೆಯಲಿಲ್ಲವೋ ಸೋಮಣ್ಣನವರು ಅರೆಕ್ಷಣ ದಿಗ್ಭ್ರಾಂತರಾದರು. ಅದನ್ನು ಗಮನಿಸಿದ ಸೋಮಣ್ಣ ಜೊತೆಗಿದ್ದ ಕಾರ್ಯಕರ್ತರು, “ಏನೂ ಆಗಲ್ಲ ಸರ್, ಇನ್ನೊಂದು ಸಲ ಹೊಡೆಯಿರಿ’’ ಎಂದ ಸಮಾಧಾನ ಮಾಡಿದ್ರು. ಇನ್ನೊಂದ್ ಸಲ ಕಾಯಿ ತಗೊಂಡು ನೆಲಕ್ಕೆ ಹಾಕಿದರು. ಆಗ ಕಾಯಿ ಒಡೆಯಿತು. ಜೊತೆಗೆ, ಸೋಮಣ್ಣನವರ ದುಗುಡ ಕೂಡ ದೂರಾಯಿತು. ಕಾಯಿ ಒಡೆದ ಮೇಲೆ ಸೋಮಣ್ಣ ನೆಮ್ಮದಿಯ ನಿಟ್ಟುಸಿರು ಬಿಟ್ಟರು.
ಸೋಮಣ್ಣ ವರುಣಾದಲ್ಲಿ ನಿಲ್ಲುತಿರೋದ್ರಿಂದ ಕ್ಷೇತ್ರದಲ್ಲಿ ರಾಜಕೀಯ ರಂಗು ಪಡೆದಿದೆ. ದೇವರ ಮೇಲೆ ಅಪಾರ ನಂಬಿಕೆ ಇಟ್ಟುಕೊಂಡಿರೋ ಸೋಮಣ್ಣ ಪ್ರಚಾರ ಆರಂಭಕ್ಕೂ ಮುನ್ನ ನಾಡ ದೇವಿಗೆ ಪೂಜೆ ಸಲ್ಲಿಸಿದ್ದಾರೆ. ಈ ಸಂದರ್ಭದಲ್ಲಿ ಕಾಯಿ ಒಡೆಯದೆ ಇರೋದು ಹಲವು ರೀತಿಯ ರಾಜಕೀಯ ಚರ್ಚೆಗೆ ಗ್ರಾಸವಾಗಿದೆ.