ನವದೆಹಲಿ;- ನನ್ನ ಮತ್ತು ರಾಹುಲ್ ಗಾಂಧಿ ನಡುವೆ ಯಾವುದೇ ಜಗಳ ಆಗಿಲ್ಲ ಎಂದು ಪ್ರಿಯಾಂಕ ಗಾಂಧಿ ಹೇಳಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು,ಸಹೋದರ ರಾಹುಲ್ ಗಾಂಧಿ ಮತ್ತು ನನ್ನ ನಡುವೆ ಸಂಘರ್ಷ ನಡೆಯುತ್ತಿದೆ ಎಂಬ ಬಿಜೆಪಿಯ ಹೇಳಿಕೆ ಹಾಸ್ಯಾಸ್ಪದ. ನಾನು ಮತ್ತು ನನ್ನ ಸಹೋದರ ಜೊತೆಯಾಗಿ ಬಿಜೆಪಿಯ ”ಸುಳ್ಳುಗಳು, ಲೂಟಿ ಮತ್ತು ಅಪಪ್ರಚಾರವನ್ನು” ನಿಲ್ಲಿಸುತ್ತೇವೆ ಎಂದರು.
ಬಿಜೆಪಿಯವರೇ, ಇಂದಿನ ಬೆಲೆಯೇರಿಕೆ ಮತ್ತು ನಿರುದ್ಯೋಗದ ಕಾಲದಲ್ಲಿ ನಿಮ್ಮಲ್ಲಿ ಈ ಅಸಂಬದ್ಧ ವಿಷಯ ಬಿಟ್ಟು ಬೇರೇನೂ ಇಲ್ಲವೇ? ಕ್ಷಮಿಸಿ, ನಿಮ್ಮ ಈ ಕ್ಷುಲ್ಲಕ ಮನಸ್ಸಿನ ಕಲ್ಪನೆ ಯಾವತ್ತೂ ನಿಜವಾಗುವುದಿಲ್ಲ. ನನ್ನ ಮತ್ತು ನನ್ನ ಸಹೋದರನ ನಡುವೆ ಇರುವುದು ಪರಸ್ಪರ ಪ್ರೀತಿ, ನಂಬಿಕೆ, ಗೌರವ ಮತ್ತು ನಿಷ್ಠೆ ಮಾತ್ರ” ಎಂದು ಹೇಳಿದ್ದಾರೆ.