ಪೀಣ್ಯ ದಾಸರಹಳ್ಳಿ: ನನ್ನ ಕ್ಷೇತ್ರದಲ್ಲಿ ಕಳಪೆ ಕಾಮಾಗಾರಿಗೆ ಅವಕಾಶವಿಲ್ಲ,ಯಾವುದೇ ಕಾರಣಕ್ಕೂ ಗುಣಮಟ್ಟದ ಕಾಮಗಾರಿ ಇಲ್ಲದೆ ಹೋದರೆ ಬಿಲ್ ತಡೆಹಿಡಿಯುತ್ತೆನೆ ಶಾಸಕ ಎಸ್ ಮುನಿರಾಜು ಗುತ್ತಿಗೆದಾರರಿಗೆ ಎಚ್ಚರಿಕೆ ನೀಡಿದರು.
ನನ್ನ ಕ್ಷೇತ್ರದಲ್ಲಿ ಕಳಪೆ ಕಾಮಗಾರಿ ಮಾಡುವುದಕ್ಕೆ ಬಿಡುವುದಿಲ್ಲ ಹಲವು ಕಾಮಗಾರಿಗಳಲ್ಲಿ ಹಿಂದೆ ಅಕ್ರಮ ನೆಡೆದಿದ್ದು ಅವುಗಳಲ್ಲಿ ಕೆಲವನ್ನು ಲೋಕಯುಕ್ತರು ಪರಿಶೀಲನೆ ಮಾಡಿ ಹೋಗಿದ್ದಾರೆ ಇನ್ನೂ ಕೆಲವು ನಾಗಮೋಹನ್ ದಾಸ್ ಕಮಿಟಿಯಲ್ಲಿ ತನಿಖೆ ನಡೆಯುತ್ತಿದೆ.ಗುಣಮಟ್ಟದ ಕಾಮಾಗಾರಿ ಮಾಡಿ ಬಿಲ್ ಪಡೆಯಲಿ ಕಳಪೆ ಕಾಮಗಾರಿ ಮಾಡಲು ಎಂದಿಗೂ ಬಿಡುವುದಿಲ್ಲ ಎಂದರು.
ಕ್ಷೇತ್ರದ ಅಭಿವೃದ್ಧಿಗೆ ಬದ್ಧವಾಗಿದ್ದು ಕಳಪೆ ಕಾಮಗಾರಿ ನಡೆದರೆ ಸಹಿಸುವುದಿಲ್ಲ ಜನರ ಅಪೇಕ್ಷೆಯಂತೆ ಗುಣಮಟ್ಟದ ಕಾಮಗಾರಿ ನಡೆಸಿ ಕ್ರಿಯಾ ಯೋಜನೆಯಂತೆ ಕೆಲಸ ನಿರ್ವಹಿಸಿ ಯಾವುದರಲ್ಲೂ ಲೋಪವಾಗಬಾರದು ಜನರು ಅಭಿವೃದ್ಧಿ ಕಾರ್ಯಗಳಿಗೆ ಕೈಜೋಡಿಸಬೇಕು. ಕೆಲಸ ನಿರ್ವಹಣೆ ವೇಳೆ ಸಹಕಾರ ನೀಡಬೇಕು ಕ್ಷೇತ್ರದ ಜನರ ಮೂಲಭೂತ ಸಮಸ್ಯೆಗಳನ್ನು ಹಂತ ಹಂತವಾಗಿ ಈಡೇರಿಸಲಾಗುವುದೆಂದು ತಿಳಿಸಿದರು
ಈ ಸಂದರ್ಭದಲ್ಲಿ ಮುಖಂಡರುಗಳಾದ ಆನಂದ್ ರೆಡ್ಡಿ , ಮಂಜುನಾಥ ಹೆಚ್ ಎಸ್ ಅಧಿಕಾರಿ ವೆಂಕಟೇಶ್ ಗುತ್ತಿಗದಾರ ಚಿಕ್ಕಲಕ್ಕಣ್ಣ ಇನ್ನೂ ಮುಂತಾದವರು ಉಪಸ್ಥಿತರಿದ್ದರು.