IPL ಗೆ ಇನ್ನೇನೋ ಕೆಲವೇ ತಿಂಗಳು ಬಾಕಿ ಇದ್ದು, ಆಟಗಾರರ ಖರೀದಿ ಲೆಕ್ಕಾಚಾರದಲ್ಲಿ ಪ್ರಾಂಚೈಸಿಗಳು ಮುಳುಗಿದೆ. ಹಾಗಿದ್ರೆ ಆರ್ಸಿಬಿ ತಂಡ ಮತ್ತೆ ಯಾರನ್ನೆಲ್ಲ ಖರೀದಿ ಮಾಡುತ್ತದೆ..? ಎಂಬೆಲ್ಲಾ ಡೀಟೈಲ್ಸ್ ತಿಳಿಯೋಣ ನೋಡಿ.
ಐಪಿಎಲ್ ಹರಾಜು ವೇಳೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಯಾವೆಲ್ಲ ಆಟಗಾರರನ್ನು ಮರಳಿ ಪಡೆಯಲಿದೆ ಎಂಬುವುದರ ಬಗ್ಗೆ ಚರ್ಚೆಗಳು ಜೋರಾಗಿವೆ.
ಮೂಲಗಳ ಪ್ರಕಾರ, ವಿರಾಟ್ ಕೊಹ್ಲಿ, ಮೊಹ್ಮದ್ ಸಿರಾಜ್ ಅವರನ್ನು ರಿಟೈನ್ ಮಾಡಿಕೊಳ್ಳಲಿದೆ ಎನ್ನಲಾಗುತ್ತಿದೆ.
ಅವರನ್ನು ಹೊರತುಪಡಿಸಿ ಉಳಿದ ಐವರು ಆಟಗಾರರನ್ನು ಆರ್ಸಿಬಿ ಮರಳಿ ಪಡೆಯುವ ಲೆಕ್ಕಾಚಾರದಲ್ಲಿ ಇದೆಯಂತೆ. ಆಕಾಶ್ ದೀಪ್ ಮತ್ತು ಮ್ಯಾಕ್ಸ್ವೆಲ್ ಅವರನ್ನು ಆರ್ಸಿಬಿ ಕೈಬಿಡಲಿದೆ. ಹರಾಜು ವೇಳೆ ಈ ಆಟಗಾರರನ್ನು ಖರೀದಿ ಮಾಡಲ್ಲ. ಕೆಮರೂನ್ ಗ್ರೀನ್ ಅವರನ್ನು ಖರೀದಿ ಮಾಡಲಿದೆ. 2024ರ ಐಪಿಎಲ್ನಲ್ಲಿ 255 ರನ್ ಬಾರಿಸಿ 10 ವಿಕೆಟ್ ಪಡೆದುಕೊಂಡಿದ್ದಾರೆ.
ದಿನೇಶ್ ಕಾರ್ತಿಕ್ ಅವರು ನಿವೃತ್ತಿಯಾಗಿದ್ದಾರೆ. ಹೀಗಾಗಿ ವಿಕೆಟ್ ಕೀಪರ್ ಸ್ಥಾನದಲ್ಲಿ ಅನುಜ್ ರಾವತ್ರನ್ನು ಖರೀದಿ ಮಾಡಿ ಮತ್ತೊಂದು ಅವಕಾಶ ನೀಡಲು ಆರ್ಸಿಬಿ ನಿರ್ಧರಿಸಿದೆ. ಸ್ಫೋಟಕ ಬ್ಯಾಟ್ಸ್ಮನ್ ವಿಲ್ ಜಾಕ್ಸ್ ಅವರನ್ನೂ ಆರ್ಸಿಬಿ ಖರೀದಿಸುವ ಲೆಕ್ಕಾಚಾರದಲ್ಲಿದೆ. ಕಳೆದ ಐಪಿಎಲ್ನಲ್ಲಿ ಕೇವಲ 8 ಇನ್ನಿಂಗ್ಸ್ ಆರಂಭಿಸಿ, 230 ರನ್ ಚಚ್ಚಿದ್ದರು. ಅಲ್ಲದೇ ಮೂರು ವಿಕೆಟ್ ಕೂಡ ಪಡೆದುಕೊಂಡಿದ್ದರು.
ಯಶ್ ದಯಾಳ್ರನ್ನೂ ಆರ್ಸಿಬಿ ಮತ್ತೆ ಖರೀದಿ ಮಾಡಲಿದೆ. ಕಳೆದ ಐಪಿಎಲ್ನಲ್ಲಿ 15 ವಿಕೆಟ್ ಪಡೆದುಕೊಂಡಿದ್ದಾರೆ. ರಜತ್ ಪಾಟೀದಾರ್. ಇವರು ಆರ್ಸಿಬಿ ತಂಡದ ಭವಿಷ್ಯದ ನಾಯಕ ಎಂದೇ ಬಿಂಬಿತಗೊಂಡಿದ್ದಾರೆ. ಹಿಂದಿನ ಐಪಿಎಲ್ನಲ್ಲಿ 177.3 ಸ್ಟ್ರೈಕ್ ರೇಟ್ನೊಂದಿಗೆ ಬ್ಯಾಟ್ ಬೀಸಿ 395 ರನ್ಗಳಿಸಿದ್ದಾರೆ.