ಪ್ರಧಾನಿ ನರೇಂದ್ರ ಮೋದಿ ಅವರು ದೇಶಕ್ಕೆ ಶನಿ ಎಂಬ ಕಾಂಗ್ರೆಸ್ ಮುಖಂಡ ರಮೇಶ್ ಕುಮಾರ್ ಅವರ ಹೇಳಿಕಗೆ ಆಕ್ರೋಶ ವ್ಯಕ್ತಪಡಿಸಿರುವ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಭ್ರಷ್ಟಾಚಾರ ಮತ್ತು ರಾಷ್ಟ್ರವಿರೋಧಿಗಳಿಗೆ ಶತ್ರುವಾಗಿರುವ ಪ್ರಧಾನಿ ಮೋದಿ ಅವರು ಕಾಂಗ್ರೆಸ್ ಪಾಲಿಗ ಶನಿಯಾಗಿದ್ದಾರೆ ಎಂದು ತಿರುಗೇಟು ನೀಡಿದ್ದಾರೆ.
ಬೆಂಗಳೂರು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಧಾನಿ ದೇಶದ ನಾಗರಿಕರು, ದೇಶಪ್ರೇಮಿಗಳು, ಯುವಕರಿಗೆ ವರದಾನವಾಗಿದ್ದರೆ ಕಾಂಗ್ರೆಸ್ ಪಾಲಿಗೆ ಶನಿಯಾಗಿದ್ದಾರೆ ಎಂದು ತಿವಿದರು. ಮೋದಿ ಅವರು ಭ್ರಷ್ಟಾಚಾರದ ಭಾಗವಾಗಿಲ್ಲವಾದದ್ದರಿಂದ ರಮೇಶ್ ಕುಮಾರ್ ಮತ್ತು ಕಾಂಗ್ರೆಸ್ ಪಾಲಿಗೆ ನಿಜಕ್ಕೂ ಶನಿಯಾಗಿದ್ದಾರೆ.
ಆದರೆ ಅವರು ದೇಶಭಕ್ತರು, ಯುವಕರು ಮತ್ತು ಮಹಿಳೆಯರ ಪಾಲಿಗೆ ಪ್ರೇರಣಾ ಶಕ್ತಿಯಾಗಿದ್ದಾರೆ. ಇದು ರಮೇಶ್ ಕುಮಾರ್ ಅವರಿಗೂ ಚೆನ್ನಾಗಿ ಗೊತ್ತು ಎಂದರು. ವಿಶ್ವಗುರು ಎಂದು ಜನಮಣ್ಣನೆ ಪಡೆದಿರುವ ಪ್ರಧಾನಿ ಮೋದಿಯವರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡುವ ಮೊದಲು ಎರಡು ಬಾರಿ ಯೋಚಿಸುವುದು ಒಳಿತು ಎಂದು ಕುಟುಕಿದರು.