ತೆಲಂಗಾಣದ ಮಂಚಿರ್ಯಾಲ ಜಿಲ್ಲೆಯ ಭೀಮಿನಿ ಮಂಡಲದ ಕೇಸ್ಲಾಪುರ ಗ್ರಾಮದಲ್ಲಿ ಮೂರನೇ ಮಗು ಕೂಡ ಹೆಣ್ಣಾದ ಹಿನ್ನೆಲೆ, ನೀಚ ತಾಯಿ ಹೊಲಕ್ಕೆ ಎಸೆದ ಧಾರುಣ ಘಟನೆ ಜರುಗಿದೆ.
ಕೇಸ್ಲಾಪುರ ಗ್ರಾಮದ ಗಂಗಕ್ಕ ಎಂಬ ಮಹಿಳೆಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಅವರ ಹಿರಿಯ ಮಗಳಿಗೆ ಇತ್ತೀಚೆಗಷ್ಟೇ ಮದುವೆಯಾಗಿದೆ. ಆದರೂ ಕೂಡ ಗಂಗಕ್ಕ ಗಂಡು ಮಗು ಜನಿಸುವ ನಿರೀಕ್ಷೆ ಹೊತ್ತು ಗರ್ಭೀಣಿಯಾಗಿದ್ದಳು. ಬುಧವಾರ ರಾತ್ರಿ ಹೆರಿಗೆ ನೋವಿನಿಂದ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ. ಆದರೆ ಮೂರನೇ ಹೆರಿಗೆಯಲ್ಲಿಯೂ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರಿಂದ ಜೊತೆಗೆ ಇನ್ನೊಂದು ಕಡೆ ಮದುವೆಯಾಗಿ ಮಗಳಿದ್ದು, ಮತ್ತೆ ಗರ್ಭಿಣಿಯಾಗುವುದು ಅವಮಾನ ಎಂದುಕೊಂಡು. ಸದ್ದು ಮಾಡದೆ ಹಸುಗೂಸನ್ನು ಗ್ರಾಮದ ಹೊರವಲಯದ ಗದ್ದೆಯಲ್ಲಿ ಬಿಸಾಕಿ ಬಂದಿದ್ದಾಳೆ.
ಗುರುವಾರ ಬೆಳಗ್ಗೆ ಗ್ರಾಮದ ಬಳಿ ನಾಯಿಗಳು ಮಗುವಿನ ಶವವನ್ನು ಎಳೆದೊಯ್ದಿವೆ. ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಗಂಗಕ್ಕೆ ಮೇಲೆ ಅನುಮಾನ ಹೊಂದಿದ್ದ ಗ್ರಾಮಸ್ಥರು ಪೊಲೀಸರಿಗೆ ದೂರು ನೀಡಿದ್ದಾರೆ. ಗ್ರಾಮಸ್ಥರ ದೂರಿನ ಮೇರೆಗೆ ಎಸ್ಎಸ್ಐ ವಿಜಯ್ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದು, ನಂತರ ಗಂಗಕ್ಕನನ್ನು ಬಂಧಿಸಿ ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಲಾಗಿದೆ