ಬಿಗ್ ಬಾಸ್ ಸೀಸನ್ 11ಕ್ಕೆ ಇನ್ನೆನ್ನೂ ಕೆಲವೇ ಗಂಟೆಗಳು ಮಾತ್ರವೇ ಭಾಕಿ ಇದೆ. ಇಂದು ಸಂಜೆ 6 ಗಂಟೆಗೆ ಗ್ರ್ಯಾಂಡ್ ಓಪನಿಂಗ್ ಆಗಲಿದೆ. ಈ ಮಧ್ಯೆ ಬಿಗ್ ಬಾಸ್ ಮನೆಗೆ ಹೋಗುವ ಐವರು ಸ್ಪರ್ಧಿಗಳ ಹೆಸರು ರಿವೀಲ್ ಆಗಿದೆ. ಅವರ್ಲಿ 4ನೇ ಸ್ಪರ್ಧಿಯಾಗಿ ಗೋಲ್ಡ್ ಸುರೇಶ್ ದೊಡ್ಮನೆ ಒಳಗೆ ಎಂಟ್ರಿಕೊಡ್ತಿದ್ದಾರೆ.
ಮೂಲತಃ ಉತ್ತರ ಕರ್ನಾಟಕದವರಾದ ಗೋಲ್ಡ್ ಸುರೇಶ್ ಉದ್ಯಮಿ ಹಾಗೂ ರೈತರಾಗಿ ಗುರುತಿಸಿಕೊಂಡಿದ್ದಾರೆ. ಕೃಷಿಯಲ್ಲಿ ಹೆಚ್ಚಿನ ಆಸಕ್ತಿ ಇರುವ ಗೋಲ್ಡ್ ಸುರೇಶ್ ಚಿನ್ನದ ವ್ಯಾಪಾರಿಯಾಗಿಯೂ ಹೌದು. ಇದೀಗ ಮೊದಲ ಕ್ಯಾಮೆರಾ ಮುಂದೆ ಸುರೇಶ್ ಬಂದಿದ್ದಾರೆ. ಈ ವಿಚಾರ ರಾಜ ರಾಣಿ ಫಿನಾಲೆಯಲ್ಲಿ ರಿವೀಲ್ ಆಗಿದೆ. ಇಂದು ಸಂಜೆ ದೊಡ್ಮನೆಗೆ ಕಾಲಿಡಲಿದ್ದಾರೆ.
ಕಳೆದ ಬಾರಿ ಮೈತುಂಬಾ ಚಿನ್ನ ಧರಿಸಿ ಬಿಗ್ಬಾಸ್ ಮನೆಗೆ ಹೋಗಿದ್ದ ವರ್ತೂರು ಸಂತೋಷ್, ಬಿಗ್ಬಾಸ್ ಮನೆಗೆ ಹೋದ ಬಳಿಕ ದೊಡ್ಡ ಮಟ್ಟದಲ್ಲಿ ಹೆಸರು ಮಾಡಿದರು. ಈಗ ಅದೇ ಮಾದರಿಯ ಸ್ಪರ್ಧಿಯೊಬ್ಬರನ್ನು ಆಯೋಜಕರು ಹುಡುಕಿ ತಂದಿದ್ದಾರೆ. ವರ್ತೂರು ಸಂತೋಷ್ ಮಾದರಿಯಲ್ಲಿಯೇ ಮೈಮೇಲೆ ಕೆಜಿಗಟ್ಟಲೆ ಚಿನ್ನ ಧರಿಸಿ, ಬಿಳಿ ಶರ್ಟ್, ಬಿಳಿ ಬಣ್ಣದ ಪ್ಯಾಂಟ್ ಧರಿಸಿರುವ ಗೋಲ್ಡ್ ಸುರೇಶ್ ಅವರನ್ನು ಬಿಗ್ಬಾಸ್ನ ನಾಲ್ಕನೇ ಸ್ಪರ್ಧಿಯಾಗಿ ಘೋಷಣೆ ಮಾಡಿದ್ದಾರೆ.
ಖಾಸಗಿ ಜೀವನದ ಬಗ್ಗೆ ಮಾತನಾಡಿರುವ ಗೋಲ್ಡ್ ಸುರೇಶ್, ನನ್ನ ಪತ್ನಿ ಚೆನ್ನಾಗಿ ಓದಿಕೊಂಡಿದ್ದಾರೆ. ಅವರು ಶಿಕ್ಷಣದ ಹಿನ್ನೆಲೆಯಿಂದಲೇ ಬಂದವರು, ನಾನು ಕಡಿಮೆ ಓದಿದ್ದೀನಿ ಆದರೂ ಸಹ ಅವರು ನನ್ನನ್ನು ಮದುವೆ ಆದರು. ಅವರಿಗೆ ಹೀಗೆಲ್ಲ ಚಿನ್ನ ಧರಿಸಿಕೊಂಡು ಓಡಾಡುವುದು, ಹೊಸ ಕಾರುಗಳನ್ನು ತೆಗೆದುಕೊಳ್ಳುವುದು ಎಲ್ಲ ಇಷ್ಟವಾಗುವುದಿಲ್ಲ, ಆದರೆ ನನಗೆ ಇಷ್ಟ ಎಂಬ ಕಾರಣಕ್ಕೆ ಏನೂ ಹೇಳುವುದಿಲ್ಲ. ನನಗೆ ಒಂದು ಹೆಣ್ಣು ಮಗು ಇದೆ. ಹೆಣ್ಣು ಮಗುವೇ ಬೇಕೆಂದು ನಾನು ಕೋರಿಕೊಂಡಿದ್ದೆ ಹಾಗೆ ಹೆಣ್ಣು ಮಗು ಆಗಿದೆ. ಬಿಗ್ಬಾಸ್ ಮನೆಯಲ್ಲಿ ದೊಡ್ಡ ತಿಮಿಂಗಲಗಳು ಇರುತ್ತವೆ, ನಮಗೆ ಅವಕಾಶ ಸಿಗುವುದಿಲ್ಲ ಎಂದುಕೊಂಡಿದ್ದೆ. ಆದರೆ ಅವಕಾಶ ಸಿಕ್ಕಿದೆ. ಅಲ್ಲಿಗೆ ಹೋಗಿ ನಮ್ಮ ತನ ಏನು ಅನ್ನೋದು ತೋರಿಸಬೇಕು, ಹೊರಗೆ ಹಲವರ ವಿರುದ್ಧ ಗೆದ್ದಿದ್ದೀನಿ ಒಳಗೆ ಗೆಲ್ಲುತ್ತೀನಿ’ ಎಂಬ ಭರವಸೆ ವ್ಯಕ್ತಪಡಿಸಿದ್ದಾರೆ.
ಗೋಲ್ಡ್ ಸುರೇಶ್ ಇನ್ಸ್ಟಾಗ್ರಾಂ ನೋಡಿದರೆ ಕೆಲವು ರಾಜಕಾರಣಿಗಳ ಜೊತೆಗೆ ಫೋಟೊ, ವಿಡಿಯೋಗಳನ್ನು ಹಾಕಿದ್ದಾರೆ. ಕಳೆದ ಬಿಗ್ಬಾಸ್ನ ಸ್ಪರ್ಧಿ ನೀತು ಜೊತೆಗೆ ಕೆಲವು ವಿಡಿಯೋಗಳನ್ನು ಹಾಕಿದ್ದಾರೆ. ಜೀ ಕನ್ನಡದ ಯುವರತ್ನ ಪ್ರಶಸ್ತಿಯನ್ನು ಸ್ವೀಕರಿಸುತ್ತಿರುವ ವಿಡಿಯೋ ಸಹ ಇನ್ಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ದಾರೆ.