ರಾಜ್ಯದಲ್ಲಿ ಸರ್ಕಾರ ಬಂದು ಒಂದು ವರ್ಷ ಮುಗಿದಿದೆ, ಒಂದು ಅರ್ಥದಲ್ಲಿ ರಾಜ್ಯ ಸರ್ಕಾರದ ಹನಿಮೂನ್ ಪೆರೆಡ್ ಮುಗಿದಿದೆ. ಆದರೆ, ಅಭಿವೃದ್ಧಿ ಕೆಲಸ ಮಾತ್ರ ಶೂನ್ಯವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಆರೋಪಿಸಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಒಂದು ವರ್ಷದಲ್ಲಿ ಯಾವ ಸಚಿವ,
ಶಾಸಕರು ಸಹ ಗುದ್ದಲಿ ಪೂಜೆ ಮಾಡಲಿಲ್ಲ ಹೊಸ ಅಭಿವೃದ್ಧಿ ಕೆಲಸ ಮಾಡಲಿಲ್ಲ ಎಂದು ಟೀಕಿಸಿದರು. ಇನ್ನು ಇದೇ ವೇಳೆ ಬರ ಪರಿಹಾರ ವಿತರಣೆ ಸಮರ್ಪಕವಾಗಿ ಆಗಿಲ್ಲ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿ, ಕೇಂದ್ರ ಸರ್ಕಾರದಿಂದ ಬರ ಪರಿಹಾರ ಬಂದ್ರು ರೈತರಿಗೆ ಹಣ ನೀಡುತ್ತಿಲ್ಲ. ಟೆಕ್ನಿಕಲ್ ಕಾರಣ ಹೇಳಿ ಎಲ್ಲಾ ರೈತರಿಗೆ ಪರಿಹಾರ ನೀಡಿಲ್ಲ
ರೈತರಿಗೆ ಈ ಸರ್ಕಾರ ಪರಿಹಾರ ಹಾಗು ಬೆಳೆ ವಿಮೆ ಹಣ ಸಹ ಕೊಡುತ್ತಿಲ್ಲ ಎಂದು ದೂರಿದರು. ಚನ್ನಗಿರಿ ಘಟನೆಗೆ ಸಂಬಂಧಿಸಿಸೂ ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದ ಅವರು, ರಾಜ್ಯದ ಕಾನೂನು ಸುವ್ಯವಸ್ಥೆ ಬಗ್ಗೆ ಇಡೀ ದೇಶದಲ್ಲಿ ಚರ್ಚೆ ಆಗುತ್ತಿದೆ. ಚನ್ನಗಿರಿಯಲ್ಲಿ ನಡೆದ ಘಟನೆ ಪೊಲೀಸರಿಗೆ ಪೊಲೀಸರೇ ರಕ್ಷಣೆ ಕೊಡೋ ಪರಿಸ್ಥಿತಿ ಬಂದಿದೆ ಎಂದರು