ಬೆಂಗಳೂರು: ಈ ವರ್ಷದ ಸಾಲು ಸಾಲು ಪರೀಕ್ಷೆಗೆ ಮಕ್ಕಳು ಸಿದ್ಧತೆ ನಡೆಸುತ್ತಿದ್ದಾರೆ.. ಸತತವಾಗಿ ಓದುವ ಕಾರಣದಿಂದ ಮಕ್ಕಳಿಗ ತಲೆ ನೋವು, ದೃಷ್ಟಿ ಸಮಸ್ಯೆ, ಕಣ್ಣಿನ ಸಮಸ್ಯೆ ಹೆಚ್ಚಾಗಿ ಕಾಣ ಬರುತ್ತಿದೆ ಎಂದು ವರದಿಯಾಗಿದೆ.. ಈ ಸಮಸ್ಯೆಗಳನ್ನು ಪೋಷಕರು ಯಾವ ರೀತಿಯಲ್ಲಿ ಎದುರಿಸಬಹುದೆಂದು ತಜ್ಞರು ಸೂಚಿಸಿದ್ದಾರೆ. ಹಾಗಿದ್ದರೆ ಏನೆಲ್ಲಾ ಮಾಹಿತಿ ನೀಡಿದ್ದಾರೆ ಎಂದು ನೋಡೋಣ ಬನ್ನಿ..
ಸಾಲು ಸಾಲು ಪರೀಕ್ಷೆಗಳು ಬರುವ ಹೊತ್ತಲ್ಲೇ ಮಕ್ಕಳಲ್ಲಿ ಕಣ್ಣಿನ ಸಮಸ್ಯೆ ಕಾಣಿಸಿಕೊಂಡಿದೆ. ಸಿಲಿಕಾನ್ ಸಿಟಿ ಬೆಂಗಳೂರಿನ ಮಕ್ಕಳಲ್ಲಿ ಇತ್ತೀಚೆಗೆ ಹೆಚ್ಚಾಗಿ ಕಣ್ಣಿನ ಸಮಸ್ಯೆಗಳು ಕಂಡು ಬರುತ್ತಿವೆ. ಇದರಿಂದ ಪೋಷಕರಲ್ಲಿ ಆತಂಕ ಉಂಟಾಗಿದೆ. ಪರೀಕ್ಷೆ ಸಮಯದಲ್ಲಿ ಮಕ್ಕಳು ಕಣ್ಣಿನ ಸಮಸ್ಯೆಗಳನ್ನು ಎದುರಿಸುತ್ತಿದ್ದು ಕಲಿಕೆ ಮೇಲೆ ಪ್ರಭಾವ ಬೀಳುತ್ತಿದೆ. ಈ ಹಿನ್ನಲೆ ಪರೀಕ್ಷೆಯ ಸಮಯದಲ್ಲಿ ಮಕ್ಕಳು ಎದುರಿಸುವ, ದೃಷ್ಟಿಗೆ ಸಂಬಂಧಿಸಿದ ಸವಾಲುಗಳ ತಜ್ಞರು ಸಲಹೆ ನೀಡಿದ್ದಾರೆ..
ಕಣ್ಣಿನ ಚಿಕಿತ್ಸೆಗೆ ಬರುವ ಮಕ್ಕಳಲ್ಲಿ SSLC & PUC ಮಕ್ಕಳೇ ಹೆಚ್ಚು. ದಿನಕ್ಕೆ 8 ರಿಂದ 10 SSLC ಮತ್ತು PUC ಮಕ್ಕಳು ಕಣ್ಣಿನ ವಿವಿಧ ಚಿಕಿತ್ಸೆಗೆ ಬರ್ತಾರೆ ಎಂದು ವೈದ್ಯರು ಮಾಹಿತಿ ನೀಡಿದರು.ಮಹಾಮಾರಿ ಕೊರೊನಾ ಬಳಿಕ ಮಕ್ಕಳಲ್ಲಿ ಕಣ್ಣಿನ ಸಮಸ್ಯೆಗಳು ಹೆಚ್ಚಾಗಿವೆ. ಪರೀಕ್ಷಾ ಸಮಯದಲ್ಲಿ ಕಣ್ಣಿನ ಸಮಸ್ಯೆ ಹೆಚ್ಚಾಗುತ್ತಿದೆ. ವರ್ಷದ ಇತರೆ ಸಮಯದಲ್ಲಿ ಕಾಣಿಸಿಕೊಳ್ಳುವ ಕಣ್ಣಿನ ಸಮಸ್ಯೆಗಳಿಗೂ ಪರೀಕ್ಷಾ ಸಮಯದಲ್ಲಿ ಕಂಡು ಬರುತ್ತಿರುವ ಸಮಸ್ಯೆಗೂ ವ್ಯತ್ಯಾಸ ಇದೆ.
ಪರೀಕ್ಷಾ ಸಮಯದಲ್ಲಿ ಮಕ್ಕಳು ಒತ್ತಡದಲ್ಲಿ ಇರುತ್ತಾರೆ. ಮಕ್ಕಳ ಕಲಿಕಾ ಒತ್ತಡದಿಂದ ಕಣ್ಣಿಗೆ ಒತ್ತಡ ಹೆಚ್ಚಾಗುತ್ತಿದೆ. ಪರೀಕ್ಷಾ ಸಮಯದಲ್ಲಿನ ನಿರಂತರ ಓದು, ಕಲಿಕೆ ಕಣ್ಣಿಗೆ ಒತ್ತಡ ಹೆಚ್ಚಾಗುವಂತೆ ಮಾಡುತ್ತಿದೆ. ಪರೀಕ್ಷೆ ಒತ್ತಡ ಹಾಗೂ ಮಕ್ಕಳಿಗೆ ಪರೀಕ್ಷಾ ಡೆಡ್ ಲೈನ್ ಕಣ್ಣಿನ ಸಮಸ್ಯೆಗೆ ಕಾರಣವಾಗಿದೆ. ಮಕ್ಕಳು ಬೌಧಿಕವಾಗಿ ಜಾಣರಾಗಿದ್ದರೂ ಕಣ್ಣಿನ ಸಮಸ್ಯೆಗಳು, ತೊಂದರೆಗಳು ಮಕ್ಕಳ ಕಲಿಕೆಯಲ್ಲಿ ಹಿಂದೆ ಬೀಳಲು ಕಾರಣವಾಗುತ್ತಿವೆ. ಕಣ್ಣಿನ ಸಮಸ್ಯೆಯಿಂದ ಮಕ್ಕಳು ಪರೀಕ್ಷೆ ಇದ್ದಾಗ ಸರಿಯಾಗಿ ಪರೀಕ್ಷೆ ಬರೆಯಲು ಸಾಧ್ಯವಾಗುತ್ತಿಲ್ಲ.
ಪರೀಕ್ಷಾ ಸಮಯದಲ್ಲಿ ಕಣ್ಣಿನ ಮೇಲಿನ ಒತ್ತಡ ನಿಯಂತ್ರಿಸದೇ ಇದ್ದರೆ, ಲೈಫ್ ನಲ್ಲಿ ಮಕ್ಕಳಿಗೆ ಇದೇ ಮುಂದುವರೆಯಬಹುದಾಗಿದೆ. ಮಕ್ಕಳ ಭವಿಷ್ಯ ಕಲಿಕೆ ದೃಷ್ಠಿಯಿಂದ ಈ ಒತ್ತಡ ಕಂಡು ಬಂದಾಗ ಸಲಹೆ ಪಡೆಯಬೇಕಿದೆ ಎಂದು ನೇತ್ರ ತಜ್ಞೆ ಸುಮಿತಾ ಮುತ್ತು ಮಾಹಿತಿ ನೀಡಿದರು. ಒಟ್ಟಾರೆ ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳುತ್ತಿರುವ ಮಕ್ಕಳಲ್ಲಿ ಹಲವಾರು ದೃಷ್ಟಿ ಸಮಸ್ಯೆ ಉಂಟಾಗುತಿದ್ದು, ಪೋಷಕರು ಅದನ್ನು ನಿರ್ಲಕ್ಷ್ಯ ಮಾಡದೆ ಇರುವುದು ಉತ್ತಮ.. ಸಮಸ್ಯೆ ಕಂಡು ಬಂದಲ್ಲಿ ತಕ್ಷಣವೇ ತಜ್ಞರಿಗೆ ಸಂಪರ್ಕಿಸಲು ಮರಿಯಬೇಡಿ.