ಬೆಂಗಳೂರು: ನಾಳೆ ದೆಹಲಿಯ ಜಂತರ್ ಮಂತರ್ʼನಲ್ಲಿ ಕಾಂಗ್ರೆಸ್ ಪ್ರತಿಭಟನೆ ವಿಚಾರ ಸಂಬಂಧಿಸಿದಂತೆ ಗೃಹ ಸಚಿವ ಜಿ.ಪರಮೇಶ್ವರ್ ಪ್ರತಿಕ್ರಿಯೆ ನೀಡಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಕೇಂದ್ರ ಸರಕಾರ ಯಾವುದೇ ಬಾಕಿ ಉಳಿಸಿಕೊಂಡಿಲ್ಲ ಅಂತ ನಿರ್ಮಲಾ ಸೀತಾರಾಮನ್ ಹೇಳ್ತಾರೆ ನಮಗೆ ಹಣಕಾಸು ಆಯೋಗ ಕೊಡಬಾರದು ಅಂತ ತೀರ್ಮಾನ ಮಾಡಿಲ್ಲ ಬೇರೆಯವರಿಗೆ ಏನು ಬೇಕಾದ್ರು ಹೇಳಬಹುದು. ಆದರೆ ಕೇಂದ್ರ ಸಚಿವರು ವಸ್ತುಸ್ಥಿತಿಯಲ್ಲಿ ಮಾತಾಡಬೇಕು. ಸತ್ಯಕ್ಕೆ ದೂರವಾದ ವಿಚಾರ ನಾವು ಹೇಳೋಕೆ ಆಗೊಲ್ಲ ಒಂದು ಸರ್ಕಾರವಾಗಿ ನಾವು ಸುಳ್ಳು ಹೇಳೋಕೆ ಆಗೊಲ್ಲ ಎಂದರು.
ಹಾಗೆ ನಮಗೆ ಹಣ ಬಂದಿಲ್ಲ, ಅದನ್ನ ಹೇಳ್ತಿದ್ದೇವೆ ಬರ ಪರಿಹಾರ ಅಂತ 18 ಸಾವಿರ ಕೋಟಿ ಹಣಕ್ಕೆ ಬೇಡಿಕೆ ಇಡಲಾಗಿದೆ ನೀವು ಕೊಟ್ಟಿದ್ದೀರಾ ಅದನ್ನ ಹೇಳಿ ನಮಗೆ GST ಪಾಲು ಎಷ್ಟು ಬರಬೇಕು ನೀವೇ ಹೇಳಿಬಿಡಿ ನಿರ್ಮಲಾ ಸೀತಾರಾಮನ್ ಬಗ್ಗೆ ಗೌರವ ಇದೆ, ಆದರೆ ಅವರು ಹೇಳುವ ಮಾತು ಸಮಂಜಸ ಅಲ್ಲ GST ನಾವು ಎಷ್ಟು ಕೊಟ್ಟಿದ್ದೇವೆ. ನಮ್ಮ ಶೇರ್ ಎಷ್ಟು,ಎಷ್ಟು ಕೊಟ್ಟಿದ್ದೀರಾ ಅದನ್ನ ಕೇಂದ್ರ ಸಚಿವರು ಹೇಳಿಲಿ ಎಲ್ಲಾ ಕೊಟ್ಟಿದ್ದೀರಾ ಅಂದರೆ ನಾವು ಹೇಗೆ ವಾದ ಮಾಡೋಣ ಹೇಳಿ ಅಂದರು.
ಒಂದು ಸರ್ಕಾರ ದೆಹಲಿಗೆ ಹೋಗಿ ಪ್ರತಿಭಟನೆ ಮಾಡ್ತಿದ್ದೇವೆ ನಾವು ಅಲ್ಲಿಗೆ ಹೋಗಿ ಸುಳ್ಳು ಹೇಳೋಕೆ ಆಗುತ್ತಾ ಒಂದು ಸರ್ಕಾರ ಪ್ರತಿಭಟನೆ ಮಾಡುತ್ತಿದೆ ಅಂದರೆ ಕೇಂದ್ರದವರು ಸಿಎಂ ಅವರನ್ನ ಕರೆಸಿಕೊಂಡು ಮಾತಾಡಿಸಬೇಕು ಪ್ರತಿಭಟನೆ ಮಾಡ್ತೀವಿ ಅಂತ ಹೇಳಿದಾಗ ಕರೆದು ಮಾತಾಡಿಲ್ಲ ಕರೆದು ಮಾತಾಡುವುದು ರಾಜ್ಯ-ಕೇಂದ್ರದ ಬಾಂದವ್ಯವಾಗಿರಬೇಕು ಆದರೆ ಇದನ್ನ ಕೇಂದ್ರ ಸರ್ಕಾರ ಮಾಡ್ತಿಲ್ಲ ಎಂದು ಕೇಂದ್ರದ ವಿರುದ್ಧ ಪರಮೇಶ್ವರ್ ವಾಗ್ದಾಳಿ ನಡೆಸಿದರು.