ನೈಸರ್ಗಿಕವಾಗಿ ಹಳದಿ ಹಲ್ಲುಗಳು ಮುತ್ತಿನಂತೆ ಹೊಳೆಯುವಂತೆ ಮಾಡಬಹುದು. ಕೆಲವು ಹಣ್ಣುಗಳನ್ನು ಜಗಿದು ತಿಂದರೆ ಈ ಹಣ್ಣುಗಳ ರಸವೇ ಹಲ್ಲಿನ ಹಳದಿ ಕಲೆಗಳನ್ನು ಹೋಗಲಾಡಿಸುತ್ತವೆ.ಇದು ಬಾಯಿಯಿಂದ ಬರುವ ದುರ್ವಾಸನೆಗೂ ಪರಿಹಾರವಾಗಿದೆ.
ಸ್ಟ್ರಾಬೆರಿ ಮ್ಯಾಲಿಕ್ ಆಸಿಡ್ ಹೊಂದಿರುತ್ತವೆ.ಈ ಆಸಿಡ್ ಬ್ಲೀಚಿಂಗ್ ಗುಣಲಕ್ಷಣಗಳನ್ನು ಹೊಂದಿದ್ದು ಹಲ್ಲುಗಳ ಮೇಲೆ ಅಂಟಿಕೊಂಡಿರುವ ಈ ಹಳದಿ ಪದರವನ್ನು ಸಡಿಲಗೊಳಿಸುತ್ತದೆ.
ಕಲ್ಲಂಗಡಿ ಹಣ್ಣಿನಲ್ಲಿ ಸ್ಟ್ರಾಬೆರಿಗಿಂತ ಹೆಚ್ಚು ಪ್ರಮಾಣದಲ್ಲಿ ಮ್ಯಾಲಿಕ್ ಆಸಿಡ್ ಇರುತ್ತದೆ. ಇದು ಲಾಲಾರಸದ ಉತ್ಪಾದನೆಯನ್ನು ಹೆಚ್ಚಿಸಲು ಮತ್ತು ಹಲ್ಲುಗಳಿಂದ ಪ್ಲೇಕ್ ಅನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ
ಹಲ್ಲುಗಳಲ್ಲಿ ಅಂಟಿಕೊಂಡಿರುವ ಬ್ಯಾಕ್ಟೀರಿಯಾವನ್ನು ಅನಾನಸ್ ಹಣ್ಣು ಕೂಡಾ ತೆಗೆದುಹಾಕುತ್ತದೆ. ಇದು ಬ್ರೋಮೆಲೈನ್ ಎಂಬ ಪ್ರೋಟಿಯೋಲೈಟಿಕ್ ಕಿಣ್ವವನ್ನು ಹೊಂದಿರುತ್ತದೆ.ಇದು ಹಲ್ಲುಗಳ ಹಳದಿ ಪದರವನ್ನು ಒಡೆಯುವ ಕೆಲಸ ಮಾಡುತ್ತದೆ.
ಅನಾನಸ್ ನಂತತೆಯೇ ಪ್ರೋಟಿಯೋಲೈಟಿಕ್ ಕಿಣ್ವ ಹೊಂದಿರುವ ಇನ್ನೊಂದು ಹಣ್ಣು ಪಪ್ಪಾಯ. ಇದರಲ್ಲಿರುವ ಕಿಣ್ವವನ್ನು ಪಪೈನ್ ಎಂದು ಕರೆಯಲಾಗುತ್ತದೆ.ಇದು ಹಲ್ಲುಗಳಿಗೆ ಹಾನಿ ಮಾಡುವ ಪ್ರೋಟೀನ್ ಅನ್ನು ತೆಗೆದುಹಾಕುತ್ತದೆ.
ಕಿತ್ತಳೆಯಂತಹ ಸಿಟ್ರಸ್ ಹಣ್ಣುಗಳನ್ನು ತಿನ್ನುವುದರಿಂದ ಬಾಯಿಯಲ್ಲಿ ಲಾಲಾರಸದ ಉತ್ಪಾದನೆ ಹೆಚ್ಚಾಗುತ್ತದೆ.ಇದು ನೈಸರ್ಗಿಕವಾಗಿ ಹಲ್ಲುಗಳನ್ನು ಸ್ವಚ್ಛಗೊಳಿಸುತ್ತದೆ.