ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಬಜೆಟ್ ಮಂಡನೆಯ ವೇಳೆ ಸದನದ ಒಳಗಡೆ ಕುಳಿತಿದ್ದ ವ್ಯಕ್ತಿಯನ್ನು ಕರಿಯಪ್ಪ ಯಾನೇ ತಿಪ್ಪೇರುದ್ರ ಎಂದು ಗುರುತಿಸಲಾಗಿದೆ.ಈ ವ್ಯಕ್ತಿ ಹೇಗೆ ಬಂದಿದ್ದು ವಿಧಾನಸೌಧದಲ್ಲಿ ಇದೇ ಮೊದಲ ಬಾರಿಗೆ ಭದ್ರತಾ ವೈಫಲ್ಯ ಕಾಣಿಸಿಕೊಂಡಿದ್ದು ಇದರ ಬಗ್ಗೆ ವರದಿ ಕೇಳಿದ ಗೃಹ ಸಚಿವ ಪರಮೇಶ್ವರ್ ಹಾಗೆ ಕೂಡಲೇ ಸಂಪೂರ್ಣ ರಿಪೋರ್ಟ್ ಕೊಡುವಂತೆ ಸೂಚನೆ ನೀಡಲಾಗಿದೆ.
ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಶರಣಪ್ಪ ಅವರು ಕರಿಯಪ್ಪ ಅವರನ್ನು ವಿಚಾರಣೆ ನಡೆಸುತ್ತಿದ್ದಾರೆ. 70 ವರ್ಷದ ಈ ವ್ಯಕ್ತಿಯನ್ನು ಪೊಲೀಸ್ ಕಮಿಷನರ್ ಗಂಭೀರವಾಗಿ ಪರಿಗಣಿಸಿದ್ದಾರೆ.
ಯಾವ ಶಾಸಕರ ಹೆಸರನ್ನು ಬಳಸಿ ಒಳಹೋಗಿದ್ದ?, ಆಸನದಲ್ಲಿ ಕುಳಿತುಕೊಂಡಿದ್ದು ಯಾಕೆ? ಹಾಗೂ ಯಾವ ದಾಖಲೆಗಳು ತನ್ನ ಬಳಿಯಿದ್ದವು ಅನ್ನೋದರ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.