ಬೆಂಗಳೂರು: ಕಳೆದ 13 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಪ್ರಯಾಣಿಕರ ಸಂಖ್ಯೆ 9 ಲಕ್ಷ ದಾಟಿದೆ. ಜೊತೆಗೆ ಒಂದೇ ದಿನ ಅತೀ ಹೆಚ್ಚು ಪ್ರಯಾಣಿಕರು ಸಂಚರಿಸಿರುವುದು ನಮ್ಮ ಮೆಟ್ರೋಗೆ ಖುಷಿಯ ವಿಚಾರವಾಗಿದೆ.
ಸಾವಿರಾರು ಜನರು ತಮ್ಮ ದಿನನಿತ್ಯದ ಓಡಾಟಕ್ಕಾಗಿ ಮೆಟ್ರೋವನ್ನೇ ಅವಲಂಬಿಸಿದ್ದಾರೆ.ಇದು ಕ್ಷಿಪ್ರ ಸಾರಿಗೆ ವ್ಯವಸ್ಥೆಯಾಗಿರುವುದರಿಂದ, ಜನರು ಯಾವುದೇ ವಿಳಂಬವಿಲ್ಲದೇ ನಿರ್ದಿಷ್ಟ ಸಮಯಕ್ಕೆ ತಮ್ಮ ಡೆಸ್ಟಿನೇಶನ್ ತಲುಪಬಹುದಾಗಿದೆ.ನಮ್ಮ ಮೆಟ್ರೋ ಪ್ರಯಾಣಿಕರ ಸಂಚಾರದಲ್ಲಿ ಹೊಸ ದಾಖಲೆ ಬರೆದಿದ್ದು ಆಗಸ್ಟ್ 14, 2024 ರಂದು ಒಂದೇ ದಿನ ಲಕ್ಷ ಲಕ್ಷ ಪ್ರಯಾಣಿಕರು ಸಂಚಾರ ಮಾಡಿದ್ದಾರೆ.
ಹೌದು … ನಿನ್ನೆ ಒಂದೇ ದಿನ ನಮ್ಮ ಮೆಟ್ರೋದಲ್ಲಿ 9.17 ಲಕ್ಷ ಪ್ರಯಾಣಿಕರ ಸಂಚಾರ ಮಾಡಿದ್ದು ಮೆಟ್ರೋ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ 9 ಲಕ್ಷ ದಾಟಿದ ಪ್ರಯಾಣಿಕರ ಸಂಖ್ಯೆಕಳೆದ 13 ವರ್ಷಗಳಲ್ಲಿ ಇದೆ ಮೊದಲ ಭಾರಿಗೆ ಒಂದೇ ದಿನ ಅತೀ ಹೆಚ್ಚು ಪ್ರಯಾಣಿಕರು ಸಂಚಾರ ಮಾಡಿದ್ದು ಎಲ್ಲಾ ಪ್ರಯಾಣಿಕರಿಗೆ ನಮ್ಮ ಮೆಟ್ರೋದ ಧನ್ಯವಾದ ತಿಳಿಸಿದ BMRCL ಮುಂದಿನ ದಿನಗಳಲ್ಲಿ ಇನ್ನು ಉತ್ತಮ ಸೇವೆ ನೀಡುತ್ತೇವೆ ಎಂದು ಭರವಸೆ ನೀಡಿದ್ದಾರೆ.