ಬೆಂಗಳೂರು: ರೆಬೆಲ್ ಸ್ಟಾರ್ ಅಂಬರೀಶ್ ಪುತ್ರ ಅಭಿಷೇಕ್ ಅಂಬರೀಶ್ ಹಾಗೂ ಫ್ಯಾಷನ್ ಡಿಸೈನರ್ ಪ್ರಸಾದ್ ಬಿದ್ದಪ್ಪ ಪುತ್ರಿ ಅವಿವಾ ಬಿಡಪ ಜೂ 5ರಂದು ಅದ್ದೂರಿಯಾಗಿ ಹಸೆಮಣೆ ಏರಿದ್ದಾರೆ. ಅಂದ ಹಾಗೆ ಅವಿವಾಗೆ ಈ ಮೊದಲು ಮದುವೆಯಾಗಿದ್ದು ಡಿವೋರ್ಸ್ ಪಡೆದುಕೊಂಡಿದ್ದಾರೆ. ಜೊತೆಗೆ ಅವಿವಾ ಅಭಿಷೇಕ್ ಗಿಂತ ದೊಡ್ಡವರಾಗಿದ್ದಯ ಯಾಕೆ ಮದುವೆ ಆಗಿದ್ದೀರಿ ಎಂದು ಅಭಿಷೇಕ್ ಅವರನ್ನು ನೆಟ್ಟಿಗರು ಪ್ರಶ್ನೆ ಮಾಡುತ್ತಿದ್ದಾರೆ.
ಅವಿವಾ ಈ ಮೊದಲು ಉದ್ಯಮಿ ವಿಕ್ರಂ ಮೆಹ್ತಾ ಅವರನ್ನು ಮದುವೆಯಾಗಿದ್ದು 2016ರಲ್ಲಿ ಡಿವೋರ್ಸ್ ಪಡೆದುಕೊಂಡಿದ್ದಾರೆ. ಆ ಬಳಿಕ ಸಿಂಗಲ್ ಆಗಿದ್ದ ಅವಿವಾ ಅವರಿಗೆ ಪಾರ್ಟಿಯೊಂದರಲ್ಲಿ ಸ್ನೇಹಿತರ ಮೂಲಕ ಅಭಿಷೇಕ್ ಅಂಬರೀಶ್ ಅವರ ಪರಿಚಯವಾಗಿದೆ. ಪರಿಚಯ ಸ್ನೇಹಕ್ಕೆ ತಿರುಗಿ, ಸ್ನೇಹ ಪ್ರೀತಿಯಾಗಿ ಇದೀಗ ಎರಡು ಕುಟುಂಬದವರ ಸಮ್ಮತಿಯ ಮೇರೆಗೆ ಹಸೆಮಣೆ ಏರಿದ್ದಾರೆ.
ಬೆಂಗಳೂರಿನ ಮಾಣಿಕ್ಯ ಚಾಮರ ವಜ್ರದ ಕಲ್ಯಾಣ ಮಂಟಪದಲ್ಲಿ ಗೌಡರ ಸಂಪ್ರದಾಯದಂತೆ ಅಭಿಷೇಕ್ ಹಾಗೂ ಅವಿವಾ ಅದ್ದೂರಿಯಾಗಿ ಹಸೆಮಣೆ ಏರಿದ್ದಾರೆ. ಬಳಿಕ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ಆರತಕ್ಷತೆ ಕಾರ್ಯಕ್ರಮದಲ್ಲಿ ಸಾಕಷ್ಟು ಗಣ್ಯರು ಭಾಗಿಯಾಗಿ ನವ ಜೋಡಿಗೆ ಶುಭ ಹಾರೈಸಿದ್ದಾರೆ.