ಬೆಳೆ ವಿಮೆ ಸಮರ್ಪಕವಾಗಿ ಬಿಡುಗಡೆಯಾಗಿಲ್ಲ ಎಂಬ ರೈತರ ಹೇಳಿಕೆಗೆ ಸಚಿವ ಡಿ. ಸುಧಾಕರ್ ಪ್ರತಿಕ್ರಿಯೆ ನೀಡಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು, ಜಿಲ್ಲೆಯಲ್ಲಿ ಕೆಲ ಭಾಗಗಳಲ್ಲಿ ಆ ರೀತಿ ಆಗಿದೆ.
ಅಕ್ಕ ಪಕ್ಕದ ಗ್ರಾಮಗಳಲ್ಲಿ ಹಣ ಬಿಡುಗಡೆಯಲ್ಲಿ ಹೆಚ್ಚು ಕಡಿಮೆ ಆಗಿದೆ. ಕುರಿತು ರೈತರ ಆರೋಪವಿದೆ. ಈಗಾಗಲೇ ಕೃಷಿ ಇಲಾಖೆ, ಸಂಬಂಧಪಟ್ಟ ಕಂಪನಿ ಜೊತೆಗೆ ಚರ್ಚೆ ಮಾಡಿದೀನಿ
ಕೆಲವೇ ದಿನಗಳಲ್ಲಿ ಅದನ್ನು ಸರಿಪಡಿಸುವ ಕೆಲಸ ಆಗುತ್ತೆ ಎಂದರು. ಇನ್ನೂ ಇದೇ ವೇಳೆ ಎಸ್ಟಿ ನಿಗಮದ ಅಧಿಕಾರಿ ಆತ್ಮಹತ್ಯೆ ಕೇಸ್ ಗೆ ಸಂಬಂಧಿಸಿದಂತೆ ಸಚಿವ ಬಿ.ನಾಗೇಂದ್ರ ರಾಜಿನಾಮೆಗೆ ಬಿ.ವೈ. ವಿಜಯೇಂದ್ರ ಆಗ್ರಹಕ್ಕೆ ಪ್ರತಿಕ್ರಿಯೆ ನೀಡಿದ ಸುಧಾಕರ್, ವಿಜಯೇಂದ್ರ ಪ್ರತಿದಿನ ಅವರಿವರನ್ನು ವಜಾ ಮಾಡಿ ಅಂತಾರೆ.
ಮೊದಲು ಅವರ ಪಾರ್ಟಿ ಸರಿ ಇಟ್ಟುಕೊಳ್ಳಲಿ. ಅಧಿಕಾರಿ ಯಾವ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡ್ರು ಗೊತ್ತಿಲ್ಲ. ಅದಕ್ಕೆ ಮಂತ್ರಿಗಳ ರಾಜಿನಾಮೇ ಕೇಳಿದ್ರೆ.ಡೆತ್ ನೋಟ್ ಬರೆದಿಟ್ಟ ಬಗ್ಗೆ ಸ್ಪಸ್ಟ ಮಾಹಿತಿ ಇಲ್ಲ ಎಂದರು. ಇನ್ನೂ ಹೇರ್ ಕಟ್ ವಿಚಾರವಾಗಿ ಮಧು ಬಂಗಾರಪ್ಪ, ಬಿ.ವೈ. ವಿಜಯೇಂದ್ರ ಜಟಾಪಟಿ ವಿಚಾರವಾಗಿ ಮಾತನಾಡಿ, ಇದು ಅವರವರ
ಮೊದಲಿನ ವೈಯ್ಯಕ್ತಿಕ ವಿಚಾರ. ವೈಯಕ್ತಿಕದಲ್ಲಿ ಹಿಗೇ ಇರಬೇಕು ಅಂತಾ.. ದೇಶದಲ್ಲಿ ಸ್ವತಂತ್ರವಾಗಿ ಬದುಕಲು ಅವಕಾಶವಿದೆ. ಅವ್ರೂ ಭಾರತೀಯ ಸಂಸ್ಕೃತಿ ಪ್ರಕಾರ ಇದಾರೆ. ಈ ವಿಚಾರ ಅವರಿಬ್ಬರೇ ಮಾತನಾಡಿಕೊಳ್ಳಬೇಕು. ಅಬ್ದುಲ್ ಕಲಾಂ ಹೇಗಿದ್ರ. ಅವ್ರು ದೇಶದ ರಾಷ್ಟ್ರಪತಿಯಾಗಿದ್ರು, ವಿಜ್ಞಾನಿಯಾಗಿದ್ರು. ಅದು ಅವರವರ ವೈಯಕ್ತಿಕ ಎಂದು ಮುಗುಳು ನಗೆ ನಕ್ಕು ಸಚಿವರು ಸುಮ್ಮನಾದರು.
ಭಾರತವನ್ನು ಹಿಂದೂ ರಾಷ್ಟ್ರ ಮಾಡೋದು ಬಿಜೆಪಿ ಹಿಡನ್ ಅಜಂಡಾ, ನಾವದನ್ನು ವಿರೋಧ ಮಾಡ್ತೀವಿ ಎಂಬ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯೆ ನೀಡಿ, ನಾವು ಸಣ್ಣವರಿದ್ದಾಗಿಂದ ಭಾರತವನ್ನು ಹಿಂದೂಸ್ಥಾನ ಅಂತಾ ಕರೀತಿವಿ. ಇದೇನು ಹೊಸ ವಿಚಾರವಾ. ಅಭಿವೃದ್ಧಿ ಬಿಟ್ಟು ಎಮೋಶನಲ್ ಆಗಿ ಮಾತನಾಡ್ತಾರೆ. ದೇಶದಲ್ಲಿ 10 ವರ್ಷದಲ್ಲಿ ಏನು ಅಭಿವೃದ್ಧಿಮಾಡಿದಾರೆ ಅಂತಾ ಉತಗತರ ಕೊಡ್ಲಿ. ಬರೀ ಹಿಂದುತ್ವ, ರಾಮಮಂದಿರ ಅಂತಾ ಹೇಳಿದ್ರೆ ಬಡವರ ಹೊಟ್ಟೆ ತುಂಬಬೇಕಲ್ವಾ. ಮಹಾತ್ಮಾ ಗಾಂಧಿ ಇದ್ದಾಗಿನಿಂದ ಹಿಂದೂ ರಾಷ್ಟ್ರ ಅಂತಾ ಕರೀತಿದ್ವಿ. ಅದರಲ್ಲಿ ಹಿಂದೂ ರಾಷ್ಟ್ರ ಅನ್ನೋದೇನಿದೆ. ಮುಸಲ್ಮಾನರೂ ಹಿಂದೂ ಟೈಪೇ ದೇಶದಲ್ಲಿ ಬದುಕಿದಾರೆ. ಜಾತಿ ಜಾತಿ ಮಧ್ಯೆ ತಂದಿಡೋದನದನ್ನು ದೇಶ, ಸಂವಿಧಾನ ಸಹಿಸೋದಿಲ್ಲ ಎಂದರು.
31 ಕ್ಕೆ ಪ್ರಜ್ವಲ್ ರೇವಣ್ಣ ವಾಪಸ್ಸಾಗುವ ವಿಚಾರವಾಗಿ ಮಾತನಾಡಿ,
ಈಗಾಗಲೇ ನಮ್ಮ ಗೃಹಸಚಿವರು ಈ ಕುರಿತು ಮಾತನಾಡಿದ್ದಾರೆm ನಾನದರ ಬಗ್ಗೆ ರಿಯಾಕ್ಟ್ ಮಾಡಲ್ಲ. ಲೋಕಸಭೆ ಚುನಾವಣೆ ಬಳಿಕ ಕಾಂಗ್ರೆಸ್ ಶಾಸಕರನ್ನು ಹೋಲ್ ಸೇಲ್ ಆಗಿ ಚೇಂಜ್ ಮಾಡ್ತೀವಿ, ಸಿಟಿ ರವಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿ, 2018ರಲ್ಲೇ ಹೋಲ್ ಸೇಲ್ ಚೇಂಜ್ ಮಾಡೋದು ಹೋಯಿತು. ಪಕ್ಷಕ್ಕೆ ದ್ರೋಹ ಮಾಡಿ ಹೋದವರಿಗೆ ಜನ ಪಾಠ ಕಲಿಸಿದಾರೆ. ಇನ್ಮೇಲೆ ಅಂಥದ್ದು ನೂರಕ್ಕೆ ನೂರಿ ಸಾಧ್ಯವಿಲ್ಲದ ಮಾತು ಎಂದು ಚಿತ್ರದುರ್ಗದಲ್ಲಿ ಸಚಿವ ಡಿ. ಸುಧಾಕರ್ ಹೇಳಿಕೆ ನೀಡಿದ್ದಾರೆ.