ಬಿಸಿಲಿನ ತಾಪಮಾನ ದಿನೇ ದಿನೇ ಹೆಚ್ಚಾಗುತ್ತಿದೆ. ಹೀಗಾಗಿ ಹೊರಗೆ ಹೋಗಿ ತಂಪಾದ ಪಾನೀಯ ಕುಡಿಯೋಣ ಅಂದರೆ ಸಾಧ್ಯವಾಗುತ್ತಿಲ್ಲ. ಹೀಗಾಗಿ ಮನೆಯಲ್ಲಿ ತಂಪು ಪಾನೀಯ ಮಾಡಿಕೊಂಡು ಕುಡಿಯಬಹುದು. ನಿಮಗಾಗಿ ಇಲ್ಲಿದೆ ಆರೋಗ್ಯಕರವಾದ ಅಕ್ಕಿ ಗಂಜಿ ಮಾಡುವ ವಿಧಾನ..
ಬೇಕಾಗುವ ಸಾಮಾಗ್ರಿಗಳು
1. ಅಕ್ಕಿ – ಒಂದು ಕಪ್
2. ಹಸಿ ತೆಂಗಿನಕಾಯಿ ತುರಿ – 2 ಚಮಚ
3. ಜೀರಿಗೆ – 1/2 ಚಮಚ
3. ಹಸಿ ಮೆಣಸಿನಕಾಯಿ – ಒಂದು (ಸಣ್ಣಗೆ ಕತ್ತರಿಸಬೇಕು)
4. ತುಪ್ಪ- 1 ಟೀ ಸ್ಪೂನ್
5. ಉಪ್ಪು- ರುಚಿಗೆ ತಕ್ಕಷ್ಟು
ಮಾಡುವ ವಿಧಾನ
* ಮೊದಲಿಗೆ ಅಕ್ಕಿಯನ್ನು ಚೆನ್ನಾಗಿ ತೊಳೆದುಕೊಳ್ಳಿ.
* ಈಗ ಅಕ್ಕಿಯನ್ನು ಕುಕ್ಕರ್ ನಲ್ಲಿ ಹಾಕಿಕೊಳ್ಳಿ. ಅಕ್ಕಿ ತೆಗೆದುಕೊಂಡ ಕಪ್ನಿಂದಲೇ 7-8 ಕಪ್ ನೀರು ಹಾಕಿ. (ಗಂಜಿ ತೆಳುವಾಗಿದ್ರೆ ಚೆನ್ನಾಗಿರುತ್ತೆ. ಹಾಗಾಗಿ ಹೆಚ್ಚು ನೀರು ಹಾಕಿಕೊಳ್ಳಿ).
* ನೀರು ಹಾಕಿದ ಬಳಿಕ ಹಸಿ ತೆಂಗಿನ ತುರಿ, ಜೀರಿಗೆ, ತುಪ್ಪ, ಕತ್ತರಿಸಿದ ಹಸಿ ಮೆಣಸಿನಕಾಯಿ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಹಾಕಿಕೊಳ್ಳಿ.
* ಈಗ ಕುಕ್ಕರ್ ಮುಚ್ಚಳ ಮುಚ್ಚಿ ನಾಲ್ಕರಿಂದ ಐದು ವಿಶಲ್ ಹೊಡಿಸಿದರೆ ನಿಮ್ಮ ಅಕ್ಕಿ ಗಂಜಿ ರೆಡಿ.
* ಗಂಜಿ ತಣ್ಣಗಾದ ಮೇಲೆ ಬೇಕಾದಲ್ಲಿ ಮಜ್ಜಿಗೆ, ಈರುಳ್ಳಿ, ಕೊತ್ತಂಬರಿ ಸೊಪ್ಪು ಹಾಕಿಕೊಂಡು ಕುಡಿಯಬಹುದು.