ಕುಂಬಳಕಾಯಿಯಿಂದ ಕುಂಬಳಕಾಯಿ ಪಲ್ಯ, ಕುಂಬಳಕಾಯಿ ಗೊಜ್ಜು, ಕುಂಬಳಕಾಯಿ ಸಾಂಬಾರ್, ಕುಂಬಳಕಾಯಿ ಹಲ್ವಾ, ಕುಂಬಳಕಾಯಿ ಹೀಗೆ ನಾನಾ ರೀತಿಯ ವಿಧ-ವಿಧವಾದ ಭಕ್ಷ್ಯಗಳನ್ನು ತಯಾರಿಸುತ್ತಾರೆ. ತಿನ್ನಲು ಸಿಹಿಕರವಾಗಿರುವ ಈ ತರಕಾರಿ ಹಲವು ಗುಣಗಳನ್ನು ಹೊಂದಿದೆ
ಆದರೆ ಈ ಕುಂಬಳಕಾಯಿಯನ್ನು ಕೆಲವು ಮಂದಿ ಮಾತ್ರ ತಿನ್ನುತ್ತಾರೆ. ಇನ್ನೂ ಕೆಲವರು ಕುಂಬಳಕಾಯಿಯನ್ನು ಕಂಡರೆ ಮುಖ ಮುರಿಯುತ್ತಾರೆ. ಆದರೆ ಕುಂಬಳಕಾಯಿ ತಿನ್ನುವುದರಿಂದ ಸಿಗುವ ಆರೋಗ್ಯ ಪ್ರಯೋಜನಗಳು ಯಾವುದು ಎಂದು ತಿಳಿದರೆ ಪ್ರತಿದಿನ ಕುಂಬಳಕಾಯಿಯನ್ನು ತಿನ್ನಲು ಆರಂಭಿಸುತ್ತೀರಿ. ಅಷ್ಟೇ ಅಲ್ಲದೇ ಇದು ಎಲ್ಲಾ ರೀತಿಯ ಕಾಯಿಲೆಗಳಿಂದ ನಿಮ್ಮನ್ನು ರಕ್ಷಿಸುತ್ತದೆ. ಇದಷ್ಟೇ ಅಲ್ಲದೇ ಕುಂಬಳಕಾಯಿ ಸಿಪ್ಪೆ ಹಾಗೂ ಬೀಜಗಳು ಕೂಡ ಪ್ರಯೋಜನಕಾರಿ ಆಗಿದೆ ಎಂದು ನಿಮಗೆ ತಿಳಿದಿದ್ಯಾ
ದುಬಾರಿ ಬೆಲೆ ಇಲ್ಲದ ಕುಂಬಳಕಾಯಿ ಆರೋಗ್ಯಕ್ಕೆ ತುಂಬ ಒಳ್ಳೆಯದು. ವಿಟಮಿನ್ ಎ ಯಲ್ಲಿ ಸಮೃದ್ಧವಾಗಿರುವ ಕುಂಬಳಕಾಯಿ ದೇಹಕ್ಕೆ ತುಂಬಾ ರೀತಿಯಲ್ಲಿ ಪ್ರಯೋಜನಕಾರಿಯಾಗಿದೆ. ಸಾಮಾನ್ಯವಾಗಿ ಕುಂಬಳಕಾಯಿಯನ್ನು ಬೇಯಿಸಿ ತಿನ್ನುವುದರಿಂದ ಸಾಕಷ್ಟು ಲಾಭವಿದೆ.
ಆದರೆ ಕುಂಬಳಕಾಯಿಯನ್ನು ಎಂದಿಗೂ ಫ್ರೈ ಮಾಡಿ ತಿನ್ನಬೇಡಿ. ನೀವು ಈ ತಪ್ಪನ್ನು ಮಾಡಿದರೆ ತೂಕ ಇಳಿಕೆ ಬದಲು ದೇಹದ ತೂಕ ಹೆಚ್ಚಾಗುತ್ತದೆ.
ಕುಂಬಳಕಾಯಿ ನಮ್ಮ ದೇಹದ ತೂಕವನ್ನು ಬೇಗ ಇಳಿಸುತ್ತದೆ. 245-50 ಗ್ರಾಂ ಕುಂಬಳಕಾಯಿಯಲ್ಲಿ ಕೇವಲ 50 ಕ್ಯಾಲೋರಿಗಳು ಲಭ್ಯವಿರುತ್ತದೆ. ಕುಂಬಳಕಾಯಿ ತಿಂದರೆ ಹೊಟ್ಟೆ ತುಂಬಾ ಹೊತ್ತು ತುಂಬಿರುತ್ತದೆ. ಕುಂಬಳಕಾಯಿ ಅಥವಾ ಅದರ ಸಿಪ್ಪೆ ಮಾತ್ರವಲ್ಲ. ಬೀಜಗಳು ಸಹ ಸಾಕಷ್ಟು ಪ್ರಯೋಜನಕಾರಿ ಆಗಿದೆ. ಕುಂಬಳಕಾಯಿ ಬೀಜಗಳು ಮೆದುಳಿನ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಆಗಿದೆ. ಮಕ್ಕಳು ಮತ್ತು ವಯಸ್ಕರು ಸಹ ಇದನ್ನು ನಿಯಮಿತವಾಗಿ ಸೇವಿಸಬೇಕು. ಇದರ ಬೀಜಗಳಲ್ಲಿ ಮೆಗ್ನೀಸಿಯಮ್, ಜೀವಸತ್ವಗಳು ಮತ್ತು ಸತುವು ಸಮೃದ್ಧವಾಗಿದೆ.
ಕುಂಬಳಕಾಯಿ ಬೀಜಗಳು ಆರೋಗ್ಯಕರ ಕೊಬ್ಬಿನ ಉತ್ತಮ ಮೂಲವಾಗಿದೆ. ಇದರಲ್ಲಿ ಅಗತ್ಯವಾದ ಕೊಬ್ಬಿನಾಮ್ಲಗಳು ಸಮೃದ್ಧವಾಗಿದೆ. ಇದು ಮೆದುಳು ಮತ್ತು ಕಣ್ಣಿನ ಆರೋಗ್ಯಕ್ಕೆ ಕೂಡ ಪ್ರಯೋಜನಕಾರಿಯಾಗಿದೆ.