ಬೆಂಗಳೂರು: ಹೋದವರು ಹೊರಟು ಹೋಗುತ್ತಾರೆ. ಆದರೆ ಇರೋರಿಗೆ ಕಷ್ಟ ನೋಡಿ ಎಂದು ನಟ ರಾಘವೇಂದ್ರ ರಾಜ್ಕುಮಾರ್ (Raghavendra Rajkumar) ಅವರು ಭಾವುಕರಾಗಿದ್ದಾರೆ. ಸ್ಪಂದನಾ (Spandana) ನಿಧನನ ಬಗ್ಗೆ ನಟ ಸಂತಾಪ ಸೂಚಿಸಿದ್ದಾರೆ.
ವಿಜಯ್ (Vijay Raghavendra) ಪತ್ನಿ ಸ್ಪಂದನಾ ಅಂತಿಮ ದರ್ಶನ ಪಡೆದ ಬಳಿಕ ಮಾಧ್ಯಮಕ್ಕೆ ರಾಘವೇಂದ್ರ ರಾಜ್ಕುಮಾರ್ ಪ್ರತಿಕ್ರಿಯೆ ನೀಡಿದರು. ಹೋದವರು ಹೊರಟು ಹೋಗುತ್ತಾರೆ ಆದರೆ ಬದುಕುವವರಿಗೆ ಕಷ್ಟ ನೋಡಿ. ಅವರ ಕುಟುಂಬಕ್ಕೆ ಆಗಿದೆಲ್ಲ ಮರೆತು ಬಿಡಿ ಎಂದು ಹೇಳೋಕೆ ಆಗುತ್ತಾ? ಕೆಲವು ಸನ್ನಿವೇಶದಲ್ಲಿ ಏನು ಮಾಡಬೇಕು ಎಂಬುದು ತೋಚುವುದಿಲ್ಲ. ಕಡೆಯದಾಗಿ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಕೇಳಿಕೊಳ್ಳಬೇಕು.
ಈ ಪ್ರಪಂಚದಲ್ಲಿ ಈ ತರಹ ನಡೆಯುತ್ತದೆ. ಅವರು ನಮ್ಮ ಹತ್ತಿರದವರು ಆದಾಗ ನಮಗೆ ಕಷ್ಟವಾಗುತ್ತದೆ. ಪ್ರಪಂಚದಲ್ಲಿ ಎಲ್ಲಾ ವಯಸ್ಸಿನವರು ತೀರಿ ಹೋಗುತ್ತಾರೆ. ನಮ್ಮ ಮನೆಯಲ್ಲೇ ಹೀಗೆ ಆದಾಗ ಆ ಸಂಕಟ ತಡೆದುಕೊಳ್ಳೋಕೆ ಆಗೋದಿಲ್ಲ. ಅಪ್ಪು, ರಾಘು ಎಲ್ಲಾ ನಮ್ಮ ಜೊತೆ ನಮ್ಮ ಮನೆಯಲ್ಲಿ ಬೆಳೆದವರು. ಚಿಕ್ಕವಯಸ್ಸಿಗೆ ಸ್ಪಂದನಾ ಹೋಗಿದ್ದಾರೆ ಎಂದು ಸಹಿಸಿಕೊಳ್ಳೋಕೆ ಆಗುತ್ತಿಲ್ಲ. ರಾಘುನ ನೋಡೋಕೆ ತುಂಬಾ ಕಷ್ಟ ಆಗುತ್ತಿದೆ. ನನ್ನ ಹೆಸರೇ ಅವನಿಗೆ ಇದೆ. ನಾನು ದೊಡ್ಡ ರಾಘು, ಅವನಿಗೆ ಚಿಕ್ಕ ರಾಘು ಎಂದು ಕರೆಯುತ್ತಾರೆ. ಆಗಿದ್ದು ಆಯ್ತು, ಮರೆತು ಬಿಡಪ್ಪಾ ಅಂತಾ ರಾಘುಗೆ ಹೇಳೋಕೆ ಆಗುತ್ತಾ? ನಮಗೇನು ತೋಚುತ್ತಿಲ್ಲ ಎಂದು ರಾಘವೇಂದ್ರ ರಾಜ್ಕುಮಾರ್ ಭಾವುಕರಾಗಿದ್ದಾ