ಬೆಂಗಳೂರು:- ಪಾದಯಾತ್ರೆ ಮಾಡಿದ್ದಕ್ಕೆ ಸರ್ಕಾರದಿಂದ ಬೆದರಿಕೆ ಬರುತ್ತಿದೆ ಎಂದು BY ವಿಜಯೇಂದ್ರ ಹೇಳಿದ್ದಾರೆ.ಪಾದಯಾತ್ರೆ ಮಾಡಿದ್ದಕ್ಕೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಧಮ್ಕಿ ಹಾಕುತ್ತಿದ್ದಾರೆ. ನಿಮ್ಮ ಗೊಡ್ಡು ಬೆದರಿಕೆಗೆ ಹೆದರಲ್ಲ ಎಂದರು.
ಸಿಎಂ ಸಿದ್ದರಾಮಯ್ಯ ಕುಟುಂಬಕ್ಕೆ 14 ನಿವೇಶನ ನೀಡಿದ್ದಾರೆ. ಲೂಟಿ ಹೊಡೆದ ಪ್ರಕರಣ ಸಿಬಿಐಗೆ ನೀಡಬೇಕೆಂಬುದು ನಮ್ಮ ಆಗ್ರಹ ಎಂದಿದ್ದಾರೆ. ನಿನ್ನೆ ಡಿ.ಕೆ.ಶಿವಕುಮಾರ್ ಬಾಯಿಗೆ ಬಂದಂತೆ ಮಾತಾಡಿದ್ದಾರೆ. ಹೈಕಮಾಂಡ್ಗೆ ಕಾಂಗ್ರೆಸ್ ಕಪ್ಪ ಕಾಣಿಕೆ ಕೊಟ್ಟಿದೆ ಎಂದು ಕಿಡಿಕಾರಿದ್ದಾರೆ.
ನಾಳೆ ಕುಮಾರಸ್ವಾಮಿ ಅವರೂ ಪಾದಯಾತ್ರೆಯಲ್ಲಿ ಇರಲಿದ್ದಾರೆ. ಯಾದಗಿರಿ ಪಿಎಸ್ಐ ಪರಶುರಾಮ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವರ್ಗಾವಣೆಗೆ 30 ಲಕ್ಷ ರೂ. ಕೇಳಿದ್ದಾರೆ, ಈ ಬಗ್ಗೆ ಅವರ ಪತ್ನಿಯೇ ಹೇಳಿದ್ದಾರೆ. ಯಾದಗಿರಿ ಕಾಂಗ್ರೆಸ್ ಶಾಸಕ ಹಣ ಕೇಳಿರುವುದು ಬಯಲಿಗೆ ಬಂದಿದೆ ಎಂದಿದ್ದಾರೆ.