ರೇಣುಕಾಸ್ವಾಮಿ ಪ್ರಕರಣದ ಮೂವರು ಆರೋಪಿಗಳಿಗೆ ಕೋರ್ಟ್ ಜಾಮೀನು ನೀಡಿದೆ. ಪ್ರಕರಣದ ಎ15 ಆರೋಪಿ ಕಾರ್ತಿಕ್, ಎ16 ಕೇಶವಮೂರ್ತಿ ಹಾಗೂ ಎ17 ನಿಖಿಲ್ ನಾಳೆ ತುಮಕೂರು ಕಾರಾಗೃಹದಿಂದ ಬಿಡುಗಡೆ ಆಗುವ ಸಾಧ್ಯತೆ ಇದೆ.
ರೇಣುಕಾಸ್ವಾಮಿ ಕೇಸ್ನಲ್ಲಿ ಆರೋಪಿಗಳಾದ ಕೇಶವಮೂರ್ತಿ, ಕಾರ್ತಿಕ್, ಹಾಗೂ ನಿಖಿಲ್ ಈ ಮೂವರಿಗೂ ಹೈಕೋರ್ಟ್ ಜಾಮೀನು ನೀಡಿತ್ತು. ಆರೋಪಿಗಳಿಗೆ ಸೆಪ್ಟೆಂಬರ್ 23 ರಂದು ಜಾಮೀನು ನೀಡಿದ್ದರು ಜೈಲಿನಿಂದ ಇನ್ನು ಬಿಡುಗಡೆ ಆಗಿರಲಿಲ್ಲ. ಇದಕ್ಕೆ ಕಾರಣ ನ್ಯಾಯಾಲಯದ ಆದೇಶ ಪ್ರತಿಯು ತುಮಕೂರು ಕಾರಾಗೃಹದ ಜೈಲು ಅಧಿಕಾರಿಗಳನ್ನ ತಲುಪಿರಲಿಲ್ಲ. ಹೀಗಾಗಿ ಮೂವರು ಇನ್ನು ಜೈಲಿನಲ್ಲೇ ಉಳಿದುಕೊಂಡಿದ್ದಾರೆ.
ಮೂವರು ಆರೋಪಿಗಳು ಇಂದು ಜೈಲಿನಿಂದ ಬಿಡುಗಡೆ ಆಗುವುದು ಬಹುತೇಕ ಅನುಮಾನವಾಗಿದೆ. ಹೀಗಾಗಿ ಎಲ್ಲ ಪ್ರಕ್ರಿಯೆ ಮುಗಿಸಿ ಬಿಡುಗಡೆ ಆಗಬೇಕಿದೆ. ಸದ್ಯ 17 ಆರೋಪಿಗಳ ಪೈಕಿ ಮೂವರಿಗೆ ಮಾತ್ರ ಜಾಮೀನು ನೀಡಲಾಗಿದೆ. ಎ16 ಆರೋಪಿ ಕೇಶವಮೂರ್ತಿಗೆ ಹೈಕೋರ್ಟ್ನಿಂದ ಬೇಲ್ ಸಿಕ್ಕರೇ, ಎ15 ಆರೋಪಿ ಕಾರ್ತಿಕ್ ಹಾಗೂ ಎ17 ಆರೋಪಿ ನಿಖಿಲ್ಗೆ 57ನೇ ಸಿಸಿಹೆಚ್ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. ಇನ್ನು ನಟ ದರ್ಶನ್, ಪವಿತ್ರಾಗೌಡ ಸೇರಿದಂತೆ ಉಳಿದ ಎಲ್ಲ ಆರೋಪಿಗಳು ರಾಜ್ಯದ ಬೇರೆ ಬೇರೆ ಜೈಲಿನಲ್ಲಿದ್ದಾರೆ.