ಚಿಕ್ಕಬಳ್ಳಾಪುರ : ಚಿಕ್ಕಬಳ್ಳಾಪುರ ತಾಲ್ಲೂಕಿನ ಶ್ರೀನಿವಾಸ ಸಾಗರದಲ್ಲಿ ಈಜಲು ಹೋಗಿದ್ದ ಮೂವರು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ನಡೆದಿದೆ. ಘಟನೆಯಲ್ಲಿ ಬೆಂಗಳೂರು ಮೂಲದ ಇಬ್ಬರು ಯುವತಿಯರು ಒಬ್ಬ ಯುವಕ ಸಾವನ್ನಪ್ಪಿದ್ದು. ಬೆಂಗಳೂರಿನ ಸಾರಾಯಿ ಪಾಳ್ಯದ 20 ವರ್ಷದ ಪೂಜಾ 21 ವರ್ಷದ ರಾಧಿಕಾ 22 ವರ್ಷದ ಇಮ್ರಾನ್ ಮೃತ ದುರ್ದೈವಿಗಳು ಎಂದು ತಿಳಿದು ಬಂದಿದೆ.
ವೀಕೆಂಡ್ ಆಗಿದ್ದರಿಂದ ಇಂದು ಬೆಳಗ್ಗೆ ಬೆಂಗಳೂರಿನಿಂದ ಶ್ರೀನಿವಾಸ ಸಾಗರಕ್ಕೆ ಮೂರು ಬೈಕ್ ಗಳಲ್ಲಿ 6 ಜನರು ಬಂದಿದ್ದರು.. ಬೇಸಿಗೆಯಾಗಿದ್ದರಿಂದ ಬಿಸಿಲಿನ ಧಗೆಗೆ ಈಜಾಡಲು ಮೂವರು ಜಲಾಶಯಕ್ಕಿಳಿದಿದ್ದರಂತೆ.. ಪೂಜಾ ಮೃತ ದೇಹವನ್ನು ಹೊರ ತೆಗೆದಿದ್ದು. ಇನ್ನುಳಿದ ರಾಧಿಕಾ ಹಾಗೂ ಇಮ್ರಾನ್ ಮೃತ ದೇಹಗಳನ್ನ ಹೊರತೆಗೆಯಲು ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಪೊಲೀಸರಿಂದ ಶೋಧ ಕಾರ್ಯ ಮುಂದುವರಿದಿದೆ. ಮೃತರೆಲ್ಲರೂ ಬೆಂಗಳೂರಿನಲ್ಲಿ ಬಿ ಫಾರಂ ಓದುತ್ತಿದ್ದ ಎಂದು ತಿಳಿದು ಬಂದಿದೆ. ಸ್ಥಳಕ್ಕೆ ಚಿಕ್ಕಬಳ್ಳಾಪುರ ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.