ಭಕ್ತಾಧಿಗಳು ತಮ್ಮ ಇಷ್ಟಾರ್ಥಗಳ ಈಡೇರಿಕೆಗಾಗಿ ನಾನಾ ಬಗೆಯ ಹರಕೆಗಳನ್ನ ಸಲ್ಲಿಸುತ್ತಾರೆ.ಆದ್ರೆ ಗಣಿನಾಡು ಬಳ್ಳಾರಿ ನಗರದ ಕನಕದುರ್ಗಮ್ಮ ದೇವಿಯ ಸಿಡಿಬಂಡಿ ರಥೋತ್ಸವದಲ್ಲಿ ಭಕ್ತಾಧಿಗಳು ತಮ್ಮ ಇಷ್ಟಾರ್ಥಗಳ ಸಿದ್ದಿಗಾಗಿ ಕೋಳಿಗಳನ್ನ ಎಸೆಯುತ್ತಾರೆ.ಬಳ್ಳಾರಿ ನಗರದ ಸಿಡಿಬಂಡಿ ಉತ್ಸವದ ವೈಭವ ಹೇಗಿತ್ತು ಬನ್ನಿ ನೋಡೋಣ… ಭಾರಿ ಜನಸಾಗರದಲ್ಲಿ ಸಿಡಿಬಂಡಿ ಉತ್ಸವ….ಇಷ್ಟಾರ್ಥ ಸಿದ್ದಿಗಾಗಿ ಭಕ್ತರಿಂದ ನಾನಾ ಬಗೆಯ ಹರಕೆ…ಸಿಡಿಬಂಡಿಗೆ ಕೋಳಿ ಎಸೆದು ಹರಕೆ ತೀರಿಸಿದ ಭಕ್ತರು…ಹೌದು ಬಳ್ಳಾರಿ ನಗರದ ಆದಿಶಕ್ತಿ ಕನಕದುರ್ಗಮ್ಮ ದೇವಿಯ ಸಿಡಿಬಂಡಿ ರಥೋತ್ಸವದಲ್ಲಿ ಕಂಡು ಬಂದ ದೃಶ್ಯಗಳಿವು. ಪ್ರತಿವರ್ಷದಂತೆ ನಡೆಯುವ ಸಿಡಿಬಂಡಿ ರಥೋತ್ಸವದಲ್ಲಿ ಲಕ್ಷಾಂತರ ಭಕ್ತರು ಭಾಗವಹಿಸಿ,
ದೇವಿಯ ಕೃಪೆಗೆ ಪಾತ್ತರಾದ್ರು.ಕಿಕ್ಕಿರಿದು ಸೇರಿದ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಸಿಡಿಬಂಡಿ ರಥೋತ್ಸವ ನಡೆಯಿತು.ಈ ರಥೋತ್ಸವ ದೇವಸ್ಥಾನದ ಸುತ್ತ ಮೂರು ಸಲ ಪ್ರದಕ್ಷಿಣೆ ಹಾಕಲಾಗುತ್ತದೆ. ಶೃಂಗರಗೊಂಡ ಎತ್ತುಗಳ ಸಿಡಿಬಂಡಿ ರಥೋತ್ಸವವನ್ನ ಎಳೆಯುತ್ತವೆ.ಈ ವೇಳೆ ಭಕ್ತಾಧಿಗಳು ತಮ್ಮ ಇಷ್ಟಾರ್ಥ ಈಡೇರಿಕೆಗಾಗಿ ಹರಕೆಗಳನ್ನ ಸಲ್ಲಿಸುತ್ತಾರೆ. ಕೆಲವರು ಸಿಡಿಬಂಡಿಗೆ ಕೋಳಿಗಳನ್ನ ಎಸೆಯುತ್ತಾರೆ.ಸಿಡಿಬಂಡಿ ರಥೋತ್ಸವಕ್ಕೆ ಕೋಳಿ ಎಸೆಯುವುದ್ರಿಂದ ಇಷ್ಟಾರ್ಥಗಳು ಈಡೇರಿಕೆಯಾಗುತ್ತವೆ ಅನ್ನೋದು ಭಕ್ತರ ನಂಬಿಕೆ.
ಇನ್ನೂ ಈ ದೇವಿಗೆ ಹರಕೆ ಸಲ್ಲಿಸಿದ್ರೆ ಇಷ್ಟಾರ್ಥಗಳು ಈಡೇರುತ್ತವೆ ಅನ್ನೋ ನಂಬಿಕೆ ಇಲ್ಲಿನ ಜನರದ್ದು.ಹೀಗಾಗಿ ಮಕ್ಕಳು ಆಗಾದವರಿಗೆ ಮಕ್ಕಳ ಭಾಗ್ಯ ಸಿಗುತ್ತೆ. ಜೊತೆಗೆ ಬೇಡಿಕೆ ಇಷ್ಟಾರ್ಥಗಳು ನೇರವೇರುತ್ತವೆ ಅನ್ನೋ ನಂಬಿಕೆ ಜನರಲ್ಲಿ ಬಲವಾಗಿದೆ. ಹೀಗಾಗಿ ಈ ದೇವಿಯ ಸಿಡಿಬಂಡಿ ರಥೋತ್ಸವದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳು ಸೇರಿದಂತೆ, ಆಂಧ್ರ, ಮಹಾರಾಷ್ಟ್ರಗಳಿಂದಲೂ ಭಕ್ತರು ಆಗಮಿಸಿ, ಇಷ್ಟಾರ್ಥ ಈಡೇರಿಕೆಗಾಗಿ ನಾನಾ ಬಗೆಯ ಹರಕೆಗಳನ್ನ ಸಲ್ಲಿಸುತ್ತಾರೆ.ಸಿಡಿಬಂಡಿ ರಥೋತ್ಸವ ಹಿನ್ನಲೆಯಲ್ಲಿ ಕನಕದುರ್ಗಮ್ಮ ದೇವಿಗೆ ವಿಶೇಷ ಅಲಂಕಾರ ಮಾಡಲಾಗುತ್ತದೆ.ಬಂಗಾರ ಆಭರಣಗಳಿಂದ ಅಲಂಕಾರ ಮಾಡಲಾಗಿದ್ದು,
ಬೆಳಿಗ್ಗೆಯಿಂದಲೇ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ದೇವಿಗೆ ವಿಶೇಷ ಪೂಜೆ ಸಲ್ಲಿಸಿ ದೇವಿ ಕೃಪೆಗೆ ಪಾತ್ರರಾದ್ರು.ಬಳ್ಳಾರಿಯ ಶಕ್ತಿ ದೇವತೆಯಾದ ಕನಕದುರ್ಗಮ್ಮ ದೇವಿಯ ಸಿಡಿಬಂಡಿ ರಥೋತ್ಸವ ವಿಜೃಂಭಣೆ ಯಿಂದ ಜರುಗಿತು.ಯುವಕರಂತು ರಥೋತ್ಸವದ ವೇಳೆ ಹುಚ್ಚೆದ್ದು ಕುಣಿದು ಕುಪ್ಪಳಿಸಿದ್ರು. ಭಕ್ತಾಧಿಗಳ ಹರ್ಷೋದ್ದಾರಗಳು ಮುಗಿಲುಮುಟ್ಟಿದ್ದವು. ಅದೇ ಏನೇ ಇರಲೀ ಆದಿಶಕ್ತಿ ದೇವತೆ ಕನಕದುರ್ಗಮ್ಮ ಲಕ್ಷಾಂತರ ಭಕ್ತರ ಇಷ್ಟಾರ್ಥಗಳನ್ನ ಈಡೇರಿಸುವ ಆರಾಧ್ಯ ದೇವತೆಯಾಗಿದ್ದು,ಸಿಡಿಬಂಡಿ ರಥೋತ್ಸವದಲ್ಲಿ ಸಹಸ್ರಾರು ಭಕ್ತರು ಭಾಗವಹಿಸಿ ದೇವಿ ಕೃಪೆಗೆ ಪಾತ್ರರಾದ್ರು.