ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ (Bangalore)ಕಳ್ಳತನ ಮಾಡಿ ತಪ್ಪಸಿಕೊಳ್ಳಲು ಇದೀಗ (Robbary)ಪುಂಡರ ನೂತನ ಪ್ಲ್ಯಾನ್ ಮಾಡಿದ್ದಾರೆ. ನಗರದಲ್ಲಿ ಚೈನ್ ಸ್ನ್ಯಾಚ್, ರಾಬರಿ ಪ್ರಕರಣಗಳು ಹೆಚ್ಚಾಗುತ್ತಿದ್ದು, ಪೊಲೀಸರಿಂದ ತಪ್ಪಿಸಿಕೊಳ್ಳಲು ಕಳ್ಳರು, ಇದೀಗ ಹೊಸ ಪ್ಲ್ಯಾನ್ ಮಾಡಿದ್ದಾರೆ. ಕಳ್ಳತನ ಮಾಡಿ ಹೋಗುವಾಗ ಸಿಸಿ ಕ್ಯಾಮರಾದಲ್ಲಿ ದೃಶ್ಯ ಸೆರೆಯಾಗುವ ಸಾಧ್ಯತೆ ಇರುತ್ತೆ. ಇದರಿಂದ ಕಳ್ಳರು ಸುಲಭವಾಗಿ ಪೊಲೀಸರ ಕೈಗೆ ಸಿಕ್ಕಿ ಬೀಳುತ್ತಾರೆ. ಹೀಗಾಗಿ ಇದನ್ನು ತಪ್ಪಿಸಲು ಕಳ್ಳರು, ಹೊಸ ಮಾರ್ಗವನ್ನು ಹುಡುಕಿಕೊಂಡಿದ್ದಾರೆ.
ಕಳ್ಳತನ ಮಾಡುವ ವಾಹನಗಳ ನಂಬರ್ ಪ್ಲೇಟ್ ಗಳಿಗೆ ಎಲೆಗಳನ್ನು ಮುಚ್ಚುವ ಮೂಲಕ,, ನಂಬರ್ ಕಾಣಿಸದ ಹಾಗೆ ಪ್ಲ್ಯಾನ್ ಮಾಡುತ್ತಿದ್ದಾರೆ. ಮೊದಲು ನಂಬರ್ ಪ್ಲೇಟ್ ಗೆ ಎಲೆ ಮುಚ್ಚಿ, ನಂತರ ಕಳ್ಳತನಕ್ಕೆ ಹೋಗುತ್ತಿದ್ದಾರೆ. ನಗರದ ಹೆಚ್ ಆರ್ ಬಿ ಆರ್ ಲೇಔಟ್, ಕೆ.ಜಿ ಹಳ್ಳಿ ಭಾಗದಲ್ಲಿ ಕಿರಾತಕರು, ಈ ಪ್ಲ್ಯಾನ್ ಮಾಡಿದ್ದಾರೆ. ಸದ್ಯ ಇಂತಹ ಕಿರಾತಕರ ಮೇಲೆ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ