ಬೆಂಗಳೂರು:- ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಪುಂಡರ ಅಟ್ಟಹಾಸ ಎಲ್ಲೆ ಮೀರುತ್ತಿದೆ.
ಬೇಕರಿಯೊಂದಕ್ಕೆ ನುಗ್ಗಿ ಇಬ್ಬರು ಪುಂಡರು ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಭೂಪಸಂದ್ರದ ಬೇಕರಿಸಿಲಿಕಾನ್ ಸಿಟಿ ಪುಂಡರ ಅಟ್ಟಹಾಸ: ಬೇಕರಿಗೆ ನುಗ್ಗಿ ಯುವಕನಿಗೆ ಮಾರಣಾಂತಿಕ ಹಲ್ಲೆ… ಈ ಕೃತ್ಯ ನಡೆದಿದೆ. ನಿನ್ನೆ ರಾತ್ರಿ 9ಗಂಟೆ ವೇಳೆ ಇಬ್ಬರು ಪುಡಿ ರೌಡಿಗಳಿಂದ ಹಲ್ಲೆ ನಡೆದಿದೆ.
ಸಿಗರೇಟ್ ವಿಚಾರಕ್ಕೆ ವಿಶ್ವ ಅನ್ನೋ ಪುಂಡ ಎಂಟ್ರಿ ಕೊಟ್ಟಿದ್ದು, ಮಾತಿಗೆ ಮಾತು ನಡೆಸಿ ಕೊಲೆ ಬೆದರಿಕೆ ಹಾಕಿದ್ದಾನೆ. ಕ್ಷಣಾರ್ಧದಲ್ಲಿ ತಾರಕಕ್ಕೆ ತಿರುಗಿ ಇಬ್ಬರಿಂದ ಹಲ್ಲೆ ನಡೆಸಲಾಗಿದೆ. ಬೇಕರಿ ಒಳಗೆ ಇದ್ದ ಯುವಕನ ಮೇಲೆ ಸ್ಪ್ರೈಟ್ ಬಾಟಲ್ ನಿಂದ ಹೊಡೆದು ಕೊಲೆಗೆ ಯತ್ನ ನಡೆದಿದೆ.
ಕೊಂಚ ಯಾಮಾರಿದ್ರೂ ಬೇಕರಿ ಯುವಕನ ತಲೆಗೆ ಗಂಭೀರ ಗಾಯ ಆಗ್ತಿತ್ತು. ಹಲ್ಲೆ ಮಾಡೋ ದೃಶ್ಯ ಸಿಸಿ ಟಿವಿ= ಸೆರೆಯಾಗಿದೆ