ಬೆಂಗಳೂರು: ರಾಜ್ಯದಲ್ಲಿ ಜೋರಾದ ಹುಲಿ ಉಗುರು ಚರ್ಚೆ , ಬಿಗ್ ಬಾಸ್ ಸ್ಪರ್ಧಿ ವರ್ತೂರ್ ಸಂತೋಷ್ ಬಂಧನ ಬೆನ್ನಲ್ಲೇ ಹುಲಿ ಉಗುರಿನ ಬಗ್ಗೆ ಬಾರೀ ರ್ಚೆಗೆ ಗ್ರಾಸವಾಗಿದೆ.ಹೀಗಾಗಿ ಇತರರು ಬಳಸುವವರ ಮೇಲೆಯೂ ಸಹ ಕೆಂಗಣ್ಣು ಬಿದ್ದಿದೆ.ಹೀಗಾಗಿ ಅರಣ್ಯ ಇಲಾಖೆಗೆ ಹಲವಾರು ದೂರುಗಳು ಸಹ ಬಂದಿದೆ.
ಈ ಹಿನ್ನೆಲೆಯಲ್ಲಿ ವಿಕಾಸಸೌಧದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳ ಮಹತ್ವದ ಸಭೆ ನಡೆಸುತ್ತಿದ್ದು ಅರಣ್ಯ ಸಚಿವ ಈಶ್ವರ್ ಖಂಡ್ರೆ ನೇತೃತ್ವದಲ್ಲಿ ಸಭೆ ನಡೆಸಲಾಗುತ್ತಿದೆ.
ಅರಣ್ಯ ಪರಿಸರ ಇಲಾಖೆಯ ಪ್ರಮುಖ ಅಧಿಕಾರಿಗಳು ಇದರಲ್ಲಿ ಭಾಗಿಯಾಗಿದ್ದು ಹುಲಿಉಗುರು ಧರಿಸಿದ ಕುರಿತಂತೆ ಚರ್ಚೆ ನಡೆಯುತ್ತಿದೆ. ಏನು ಕ್ರಮ ಕೈಗೊಳ್ಳಬೇಕು ಎನ್ನೋ ಮಹತ್ವದ ವಿಷಯಗಳು ಚರ್ಚೆ ನಡೆಯುತ್ತಿದೆ.