ಹುಲಿಯೊಂದು ಪಂಜರದಿಂದ ತಪ್ಪಿಸಿಕೊಂಡು ಬಂದು ಇಬ್ಬರು ವ್ಯಕ್ತಿಗಳನ್ನು ಗಾಯಗೊಳಿಸಿರುವ ಘಟನೆ ಪಾಕಿಸ್ತಾನ ಪಂಜಾಬ್ ಪ್ರಾಂತ್ಯದ ಮುಲ್ತಾನ್ ಎಂಬಲ್ಲಿ ನಡೆದಿದೆ.
ಹುಲಿಯನ್ನು ಅದರ ಮಾಲೀಕ ವಾಕಸ್ ಅಹ್ಮದ್ ಎನ್ನುವವರು ಲಾಹೋರ್ನಿಂದ ಮುಲ್ತಾನ್ ನ ಮೃಗಾಲಯಕ್ಕೆ ಸಾಗಿಸುತ್ತಿದ್ದರು. ಮೃಗಾಲಯದ ಹೊರ ವಲಯಲ್ಲಿದ್ದ ಗಾಡಿ ನಿಲ್ಲಿಸಿದ್ದ ವೇಳೆ ಪಂಜರದಲ್ಲಿದ್ದ ಹುಲಿ ಸರಳುಗಳನ್ನು ಮುರಿದು ಹೊರಗೆ ಬಂದಿತ್ತು.
ಈ ವೇಳೆ ಹುಲಿ ಹೊಲದಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರ ಮೇಲೆ ದಾಳಿ ಮಾಡಿ ಗಾಯಗೊಳಿಸಿದೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಪಂಜಾಬ್ ಪ್ರಾಂತ್ಯದ ವನ್ಯಜೀವಿ ಇಲಾಖೆಯ ನಿರ್ದೇಶಕ ಮುದಾಸರ್ ರಿಯಾಜ್ ಮಲೀಕ್ ತಿಳಿಸಿದ್ದಾರೆ
ಹುಲಿ ಪಂಜರದಿಂದ ತಪ್ಪಿಸಿಕೊಂಡ ಸುದ್ದಿ ತಿಳಿದು ನಮ್ಮ ತಂಡ ಭಾರಿ ಕಾರ್ಯಾಚರಣೆ ನಡೆಸಿ ಹುಲಿಯನ್ನು ಸೆರೆ ಹಿಡಿದಿದೆ. ಅದನ್ನು ಮುಲ್ತಾನ್ನ ಮೃಗಾಲಯಕ್ಕೆ ಬಿಡಲಾಗುವುದು ಎಂದಿದ್ದು, ನಮ್ಮ ಇಲಾಖೆಗೆ ಮೊದಲೇ ಮಾಹಿತಿ ನೀಡದೇ ಹುಲಿಯನ್ನು ಸಾಗಿಸುತ್ತಿದ್ದ ಅದರ ಮಾಲೀಕನಿಗೆ ದಂಡ ವಿಧಿಸಲಾಗಿದೆ ಎಂದು ರಿಯಾಜ್ ಮಲೀಕ್ ತಿಳಿಸಿದ್ದಾರೆ.