ಚಾಮರಾಜನಗರ: ಗಡಿ ಜಿಲ್ಲೆಯಲ್ಲಿ ಹುಲಿ ಹೆಜ್ಜೆಕಂಡು ರೈತರು ಭಾರೀ ಅತಂಕಕ್ಕೆ ಒಳಗಾಗಿರುವ ಘಟನೆ ಚಾಮರಾಜನಗರದಲ್ಲಿ ನಡೆದಿದೆ.ಚಾಮರಾಜನಗರ ಜಿಲ್ಲೆಯ ಹರವೆ ಹೋಬಳಿಯ ಸುತ್ತಾಮುತ್ತಾ ಹುಲಿ ಪ್ರತ್ಯಕ್ಷ ಘರ್ಜನೆ ರೈತರಲ್ಲಿ ಆತಂಕ ಸೃಷ್ಟಿಸಿದೆ.
ಚಾಮರಾಜನಗರ ಜಿಲ್ಲೆಯ ಹರವೆ ಹೋಬಳಿಯ ನಂಜೇದೇವನಪುರ, ವೀರನಪುರ ಹಾಗೂ ಯಡಬೆಟ್ಟ ಸುತ್ತಾಮುತ್ತಾ ಹುಲಿಸಂಚರಿಸಿ ರೈತರ ಸಾಕು ಪ್ರಾಣಿಗಳ ಮೇಲೆ ದಾಳಿ ನಡೆಸಿ ಆತಂಕ ಸೃಷ್ಟಿಸಿದೆ.
ಆ ಭಾಗದಲ್ಲಿ ಕಳೆದ ಮೂರು ತಿಂಗಳಿಂದ ಜಾನುವಾರುಗಳನ್ನು ಕೊಂದು ಅಟ್ಟಹಾಸ ಮೆರೆದಿರುವ ವ್ಯಾಘ್ರವು ಕಲ್ಲು ಕ್ವಾರಿ ಜಮೀನುಗಳ ಪಾಳು ಬಿದ್ದ ಗುತ್ತಿಗಳಲ್ಲಿ ಆಶ್ರಯಿಸಿ ಜಾನುವಾರುಗಳಮೇಲೆದಾಳಿ ನಡೆಸಿದೆ.
ಹಲ ದಿನಗಳಿಂದ ಜಾನುವಾರುಗಳ ಮೇಲೆ ಹುಲಿ ನಡೆಸಿ ಕೊಂದು ಆತಂಕ ಸೃಷ್ಟಿಸಿತ್ತು. ಆಗ ದಾಳಿನಡೆಸಿರುವುದು ಹುಲಿಯಲ್ಲ ಎಂದೆ ಅರಣ್ಯ ಇಲಾಖೆ ಸಬೂಬು ಹೇಳುತ್ತಿತ್ತು. ನಂತರ ಯಡಬೆಟ್ಟ ಸಮೀಪದ ಎಣ್ಣೆಹೊಳೆ ಬಳಿ ಹಾಡುಹಗಲೆ ಹುಲಿ ಅಡ್ಡಾಡಿ ಹಸುವೊಂದನ್ನು ಕೊಂದು ಹಾಕಿತ್ತು. ಆಗ ದನಗಾಯಿಗಳು ಹುಲಿ ಸಂಚರಿಸುವ ವಿಡಿಯೋ ಮಾಡಿ ಸಾಮಾಜಿಕ ಜಾಲ ತಾಣದಲ್ಲಿ ಹರಿ ಬಿಟ್ಟಿದ್ರು.
ಇದೀಗ ಮಳೆಹೆಚ್ಚಾಗಿರುವ ಕಾರಣ ರೈತರ ಜಮೀನುಗಳಲ್ಲಿ ಹುಲಿ ಹೆಜ್ಜೆ ಕಂಡು ರೈತರು ಜಮೀನುಗಳಿಗೆ ತೆರಳಲು ಭಯಪಡುವಂತಾಗಿದೆ.
ಹಾಗಾಗಿ ಮುಂದಿನ ದಿನಗಳಲ್ಲಿ ಅನಾಹುತ ಸಂಭವಿಸುವ ಮುನ್ನೆ ಕೂಡಲೆ ಹುಲಿ ಸೆರೆಗೆ ಮುಂದಾಗುವಂತೆ ರೈತರು ಅರಣ್ಯ ಇಲಾಖೆಗೆ ಒತ್ತಾಯಿಸಿದ್ದಾರೆ.