ಬೆಂಗಳೂರು:- ಕೆಲ ದಿನಗಳಿಂದ ನಗರದಲ್ಲಿ ಸುಮ್ಮನಿದ್ದ ಪಂಕ್ಚರ್ ಮಾಫಿಯಾ ಮತ್ತೆ ತಲೆ ಎತ್ತಿರುವುದು, ಇದರಿಂದ ಕಳೆದ ಆರು ತಿಂಗಳಲ್ಲಿ 482 ಬಿಎಂಟಿಸಿ ಬಸ್ಗಳು ಪಂಕ್ಚರ್ ಆಗಿವೆಯಂತೆ.
ಇದರಿಂದ ನಡು ರೋಡಲ್ಲಿ ಬಿಎಂಟಿಸಿ ಬಸ್ಗಳು ಕೈ ಕೊಡುತ್ತಿದ್ದು ಪ್ರಯಾಣಿಕರು ಸಂಕಷ್ಟ ಎದುರಿಸುವಂತಾಗಿದೆ. ಈ ಬಗ್ಗೆ ಪೋಲಿಸ್ ಕಮೀಷನರ್ಗೆ ದೂರು ಕೊಡಲು ಮುಂದಾಗುತ್ತೇವೆ ಎಂದು ಬಿಎಂಟಿಸಿ ಅಧಿಕಾರಿ ಗಜೇಂದ್ರ ಕುಮಾರ್ ತಿಳಿಸಿದ್ದಾರೆ.
ಬಿಎಂಟಿಸಿ ಬಸ್ಗಳ ಪಂಕ್ಚರ್ ಲೆಕ್ಕಾಚಾರ
ಜನವರಿ- 92 ಬಸ್ಸುಗಳು
ಫೆಬ್ರವರಿ- 86 ಬಸ್ಸುಗಳು
ಮಾರ್ಚ್- 74 ಬಸ್ಸುಗಳು
ಏಪ್ರಿಲ್- 72 ಬಸ್ಸುಗಳು
ಮೇ- 82 ಬಸ್ಸುಗಳು
ಜೂನ್- 76 ಬಸ್ಸುಗಳು
ಒಟ್ಟು- 482 ಬಸ್ಸುಗಳ ಟೈರ್ಗಳು ಪಂಕ್ಚರ್ ಆಗಿವೆ
ನಗರದ ಯಾವುದೇ ರೋಡ್, ಫ್ಲೈ ಓವರ್, ಅಂಡರ್ ಪಾಸ್ಗಳಲ್ಲೂ ಕಬ್ಬಿಣದ ಮೊಳೆಗಳನ್ನು ಸುರಿಯಲಾಗುತ್ತಿದೆ. ಈ ಸಮಸ್ಯೆ ಬಿಎಂಟಿಸಿಗೆ ಮಾತ್ರವಲ್ಲದೆ ಬೈಕ್, ಕಾರುಗಳಿಗೂ ಇವೆ. ಎಲ್ಲೆಂದರಲ್ಲಿ ಕಬ್ಬಿಣದ ಮೊಳೆಗಳನ್ನು ಕಿರಾತಕರು ರಾತ್ರಿ ವೇಳೆಯಲ್ಲಿ ಬಿಸಾಡಿ ಹೋಗುತ್ತಾರೆ. ಇದರಿಂದ ವಾಹನಗಳ ಚಕ್ರಗಳು ಪಂಕ್ಚರ್ ಆಗುತ್ತವೆ. ನಂತರ ಅಕ್ಕಪಕ್ಕದಲ್ಲಿರುವ ಪಂಕ್ಚರ್ ಅಂಗಡಿಗಳಿಗೆ ವಾಹನ ಮಾಲೀಕರು ಹೋಗುತ್ತಾರೆ, ಆಗ ದುಪ್ಪಟ್ಟು ಹಣ ಪೀಕಿ ಪಂಕ್ಚರ್ ಹಾಕಿ ಕಳುಹಿಸುತ್ತಾರೆ. ಈ ಬಗ್ಗೆ ಬಿಎಂಟಿಸಿ ಪ್ರಯಾಣಿಕರು ಮತ್ತು ವಾಹನ ಸವಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.