ಬೆಂಗಳೂರು: ಮೊದಲ ಗಂಡನ ಬಿಟ್ಟು ಎರಡನೇ ಮದುವೆ ಆಗಿದ್ದ ಗೃಹಿಣಿ ಪತಿ ಹಾಗೂ ಆತನ ಗರ್ಲ್’ಫ್ರೆಂಡ್ ವಿರುದ್ದ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಗಂಡನ ಅನೈತಿಕ ಸಂಬಂಧಕ್ಕೆ ಬೇಸತ್ತು ಗೃಹಿಣಿ ಪವಿತ್ರಾ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಡೆತ್ ನೋಟ್ ಬರೆದಿಟ್ಟು ವಾಟ್ಸಾಫ್ ಸ್ಟೇಟಸ್ ಹಾಕಿ ನೇಣಿಗೆ ಪವಿತ್ರಾ ನೇಣಿಗೆ ಶರಣಾಗಿದ್ದಾಳೆ. ಗಂಡನ ಜೊತೆಗಿನ ಕಿರಿಕ್ ವಿಡಿಯೋ ವನ್ನೂ ಸ್ಟೇಟಸ್ ನಲ್ಲಿ ಹಾಕಿರೋ ಪವಿತ್ರಾ ಚೇತನ್ ಮದುವೆಯಾಗಿದ್ಳು. ಪವಿತ್ರಾ ಮತ್ತು ಚೇತನ್ ವಿಶ್ವೇಶ್ವರಯ್ಯ ಬಡವಾಣೆಯಲ್ಲಿ ವಾಸವಿದ್ದು, ಗಂಡ ಬೇರೆ ಹೆಣ್ಣಿನ ಸಹವಾಸ ಮಾಡಿರೋದು ಗೊತ್ತಾದಾಗ ಈ ಬಗ್ಗೆ ಪ್ರಶ್ನಿಸಿದ್ದ ಪವಿತ್ರಾಗೆ ನಾನು ಗಂಡಸು ಏನ್ ಬೇಕಾದ್ರು ಮಾಡ್ತಿನಿ ಅಂತ ಉತ್ತರ ಕೊಟ್ಟು ಹಲ್ಲೆ ನಡೆಸಿದ್ದ. ಇದ್ರಿಂದ ಬೇಸತ್ತಿದ್ದ ಪವಿತ್ರ ಜುಲೈ 02 ರ ಬೆಳಗಿನ ಜಾವ ಮನೆಯಲ್ಲಿ ನೇಣಿಗೆ ಶರಣಾಗಿದ್ದಾಳೆ.
ಸುಮುಖ ಮರ್ಚೆಂಟ್ಸ್ ಪ್ರೈವೇಟ್ ಲಿಮಿಟೆಡ್ ಕಂಪನಿಯ ಮಾಲೀಕನಾಗಿರೋ ಚೇತನ್ ಗೌಡ ಕಂಪನಿಯಲ್ಲಿ ಮೃತ ಪವಿತ್ರ ಮ್ಯಾನೇಜರ್ ಆಗಿ ಕೆಲಸ ಮಾಡ್ತಿದ್ಳು. ಇತ್ತೀಚೆಗೆ ಮತ್ತೊರ್ವ ಯುವತಿಯ ವಿಚಾರವಾಗಿ ಪತಿ ಪತ್ನಿ ಮಧ್ಯೆ ಜಗಳವಾಗ್ತಿತ್ತು.ಈ ಬಗ್ಗೆ ಪವಿತ್ರಾ ತನ್ನ ತಾಯಿ ಪದ್ಮಮ್ಮ ಬಳಿಯೂ ಚರ್ಚಿಸಿದ್ಳು. ಕಡೆಗೆ ಮನನೊಂದು ಡೆತ್ ನೋಟ್ ವಾಟ್ಸಾಫ್ ಸ್ಟೇಟಸ್ ಹಾಕಿ ನೇಣಿಗೆ ಶರಣಾಗಿದ್ದಾಳೆ.
ಮಗಳ ವಾಟ್ಸಾಫ್ ಸ್ಟೇಟಸ್ ನಲ್ಲಿ ಡೆತ್ ನೋಟ್ ನೋಡಿ ತಾಯಿ ಮಗಳ ಮನೆ ಬಳಿ ಬಂದಾಗ ಸಾವನ್ನಪ್ಪಿರೋದು ಬೆಳಕಿಗೆ ಬಂದಿದೆ. ಸದ್ಯ ಕೆಂಗೇರಿ ಠಾಣೆಯಲ್ಲಿ ಚೇತನ್ ಗೌಡ ಹಾಗೂ ಮತ್ತೊರ್ವ ಯುವತಿ ವಿರುದ್ದ ಎಫ್.ಐ.ಆರ್ ದಾಖಲಾಗಿದ್ದು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.