ಬೆಂಗಳೂರು ನನಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ನೀಡಿದರೆ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡುತ್ತೇನೆ ಎಂದು ಹೇಳಿದ್ದೆ. ಈಗಲೂ ನಾನು ರೆಡಿ ಇದ್ದೇನೆ ಎಂದು ಸಹಕಾರಿ ಸಚಿವ ಕೆಎನ್ ರಾಜಣ್ಣ ಹೇಳಿದರು. ಮಾತನಾಡಿದ ಅವರು, ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಡಿಕೆಶಿ ರಾಜೀನಾಮೆ ನೀಡೋ ವಿಚಾರವಾಗಿ ಪ್ರತಿಕ್ರಿಯೆ ನೀಡಿ,
ಈ ಮಾತನ್ನು ಹೇಳುವ ಮೂಲಕ ಕುತೂಹಲ ಕೆರಳಿಸಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಸ್ಥಾನವನ್ನ ಕೇಳಿದ್ದೆ. ಅಧ್ಯಕ್ಷ ಸ್ಥಾನ ನೀಡಿದರೆ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಡ್ತೀನಿ ಅಂದಿದ್ದೆ. ನಾನು ಈಗಲೂ ರೆಡಿ ಇದ್ದೀನಿ. ಅವ್ರು ಕೊಟ್ಟಾಗ ನಾನು ತಗೊಂಡಾಗ ನೋಡೋಣ ಎಂದು ಮಾರ್ಮಿಕವಾಗಿ ಹೇಳಿದರು.
ಸಿಎಂ ಡಿಸಿಎಂ ದೆಹಲಿಗೆ ಹೋಗ್ತಿದ್ದಾರೆ. ರಾಜ್ಯ ರಾಜಕೀಯ ಬೆಳವಣಿಗೆ ಬಗ್ಗೆ ಮಾಹಿತಿ ನೀಡಲು ಹೋಗ್ತಿದ್ದಾರೆ. ನಾನಂತು ದೆಹಲಿಗೆ ಹೋಗಲ್ಲ ಎಂದು ಸ್ಪಷ್ಟಪಡಿಸಿದರು.
ಬಿಜೆಪಿ-ಜೆಡಿಎಸ್ ನವರು ಸುಳ್ಳು ಹೇಳಿಕೊಂಡು ಹೋಗ್ತಿದ್ದಾರೆ. ಬಿಜೆಪಿ-ಜೆಡಿಎಸ್ ನವರು ಹೊಸದಾಗಿ ಮದುವೆ ಮಾಡಿಕೊಂಡ ಹಾಗೆ ಆಡ್ತಿದಾರೆ . ಸ್ವಲ್ಪ ದಿನ ಕಳೆದ ಮೇಲೆ ಗೊತ್ತಾಗುತ್ತೆ ಎಂದು ತಿರುಗೇಟು ನೀಡಿದರು