ರೇಣುಕಾಸ್ವಾಮಿ ಕೊಲೆ ಪ್ರಕರಣದ ಎ1 ಹಾಗೂ ಎ2 ಆರೋಪಿಗಳಾದ ದರ್ಶನ್ ಹಾಗೂ ಪವಿತ್ರಾ ಗೌಡ ಅವರ ಜಾಮೀನು ಭವಿಷ್ಯ ಇಂದು ನಿರ್ಧಾರವಾಗಲಿದೆ. ದರ್ಶನ್ ಹಾಗೂ ಪವಿತ್ರಾ ಗೌಡ ಸಲ್ಲಿಸಿದ್ದ ಜಾಮಿನು ಅರ್ಜಿ ವಿಚಾರಣೆಯನ್ನು ಇಂದಿಗೆ ಮುಂದೂಡಲಾಗಿದ್ದು ಇಂದು ಕೋರ್ಟ್ ನಲ್ಲಿ ವಿಚಾರಣೆಗೆ ಬರುವ ಸಾಧ್ಯತೆ ಇದೆ.
ಕಳೆದ 4 ತಿಂಗಳಿನಿಂದ ಜೈಲಿನಲ್ಲಿರುವ ದರ್ಶನ್ ಹೊರ ಬರಲು ಕಾದು ಕೂತಿದ್ದಾರೆ. ಬಳ್ಳಾರಿ ಜೈಲಿನ ನರಕ ದಿನದಿಂದ ದಿನಕ್ಕೆ ಉಸಿರು ಗಟ್ಟಿಸುತ್ತಿದೆ. ಈಗಾಗಲೇ ಜಾಮೀನಿಗೆ ಅರ್ಜಿ ಸಲ್ಲಿಸಿರೋ ದರ್ಶನ್ ಯಾವಾಗಪ್ಪ ಹೊರಗೆ ಹೋಗ್ತೇನೆ ಎಂದು ಕಾಯ್ತಿದ್ದಾರೆ.
ರೇಣುಕಾಸ್ವಾಮಿ ಹತ್ಯೆ ಕೇಸಲ್ಲಿ ದರ್ಶನ್ ವಿರುದ್ಧ ಪೊಲೀಸರು ಚಾರ್ಜ್ ಶೀಟ್ ಸಲ್ಲಿಸುತ್ತಿದ್ದಂತೆ, ದಾಸ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ರು. ಇಂದು ಸಿಟಿ ಸಿವಿಲ್ ಕೋರ್ಟ್ನಲ್ಲಿ ಬೇಲ್ ಅರ್ಜಿ ವಿಚಾರಣೆ ನಡೆಯಲಿದೆ. ಪವಿತ್ರಾ ಗೌಡ ಪರ ಈಗಾಗ್ಲೇ ಲಾಯರ್ ಸಬಾಷ್ಟಿಯನ್ ವಾದ ಮಂಡಿಸಿದ್ದಾರೆ. ಇಂದು ದರ್ಶನ್ ಮತ್ತು ಪವಿತ್ರಗೌಡ ಇಬ್ಬರ ಜಾಮೀನು ಭವಿಷ್ಯ ನಿರ್ಧಾರವಾಗಲಿದೆ.
ಮತ್ತೊಂದ್ಕಡೆ ಬೇಲ್ ಸಿಕ್ಕಿದ್ರೂ ಕೂಡ ತುಮಕೂರು ಜೈಲಿನಲ್ಲಿರುವ ಮೂವರು ಆರೋಪಿಗಳಿಗೆ ಇನ್ನೂ ಬಿಡುಗಡೆ ಭಾಗ್ಯ ಸಿಕ್ಕಿಲ್ಲ. ಕಾರ್ತಿಕ್ ಅಲಿಯಾಸ್ ಕಪ್ಪೆ, ನಿಖಿಲ್ ನಾಯಕ್ ಹಾಗೂ ಕೇಶವಮೂರ್ತಿಗೆ ಕಳೆದ ಸೋಮವಾರ ಅಂದ್ರೆ, ಜಾಮೀನು ಸಿಕ್ಕಿ ಒಂದು ವಾರವಾಗಿದೆ. ಕೋರ್ಟ್ ಒಂದು ಲಕ್ಷ ಬಾಂಡ್, ಇಬ್ಬರು ವ್ಯಕ್ತಿಗಳ ಶ್ಯೂರಿಟಿ, ಸಾಕ್ಷ್ಯಗಳಿಗೆ ಬೆದರಿಕೆ ಹಾಕಬಾರದು. ಕೋರ್ಟ್ ವಿಚಾರಣೆಗೆ ಹಾಜರಾಗುವಂತೆ ಷರತ್ತು ಬದ್ಧ ಜಾಮೀನು ನೀಡಿತ್ತು. ಅದ್ರೆ, ಆರೊಪಿಗಳಿಗೆ ಶ್ಯೂರಿಟಿ ಸಿಗದೆ ಪರದಾಡುತ್ತಿದ್ದಾರೆ.
5 ಲಕ್ಷ ಸಿಗುತ್ತೆಂದು ಆರೋಪಿ ಕಾರ್ತಿಕ್, ನಿಖಿಲ್ ನಾಯಕ್ ಹಾಗೂ ಕೇಶವಮೂರ್ತಿ ಕೊ*ಲೆ ಕೇಸ್ ಮೈಮೇಲೆ ಎಳೆದುಕೊಂಡಿದ್ದರು. ಹಣಕಾಸು ವಿಚಾರದಲ್ಲಿ ತಾವೇ ಕೊಲೆ ಮಾಡಿದ್ದಾಗಿ ಸರೆಂಡರ್ ಆಗಿದ್ರು. ಸಾಕ್ಷ್ಯನಾಶ ಆರೋಪದಡಿ ಮೂವರ ವಿರುದ್ಧ ಚಾರ್ಜ್ ಶೀಟ್ ಸಲ್ಲಿಕೆ ಮಾಡಲಾಗಿತ್ತು. ಚಾರ್ಜ್ ಶೀಟ್ ಸಲ್ಲಿಕೆ ಬಳಿಕ ಮೂವರಿಗೆ ಜಾಮೀನು ಮಂಜೂರಾಗಿದೆ. ಆದ್ರೆ, ಶ್ಯೂರಿಟಿ ವ್ಯವಸ್ಥೆ ಆಗದೇ ಮೂವರು ಆರೋಪಿಗಳು ಇನ್ನೂ ಜೈಲಿನಲ್ಲಿದ್ದಾರೆ. ಸರೆಂಡರ್ ಆಗಲು ಹೇಳಿದವರು ಇವತ್ತು ಯಾವ ಸಹಾಯ ಮಾಡಿಲ್ಲ. ಆರೋಪಿಗಳು ವಕೀಲರ ಮೂಲಕ ಶ್ಯೂರಿಟಿ ವ್ಯವಸ್ಥೆ ಮಾಡುತ್ತಿದ್ದಾರೆ.
ಹಣದ ಆಸೆಗೆ ಕೊಲೆ ಕೇಸ್ ಮೈಮೇಲೆ ಎಳೆದುಕೊಂಡಿದ್ದಾರೆ. ಆದರೆ ಸರೆಂಡರ್ ಆಗಲು ಹೇಳಿದ್ದವರು ಕೂಡ ಇವತ್ತು ಆರೋಪಿಗಳನ್ನ ನಡುರೋಡಲ್ಲಿ ಕೈ ಬಿಟ್ಟಿದ್ದಾರೆ. ಈಗ್ಲಾದ್ರೂ ಆ ಮೂವರಿಗೆ ತಾವು ಮಾಡಿದ ತಪ್ಪಿನ ಅರಿವಾಗಿರಬೇಕು. ಈ ಮಧ್ಯೆ ಇಂದು ದಾಸನಿಗೆ ಬೇಲ್ ಸಿಗುತ್ತಾ ಇಲ್ಲ ಅನ್ನೋ ಕುತೂಹಲ ಪ್ರತಿಯೊಬ್ಬರಲ್ಲೂ ಇದೆ.