ಬೆಂಗಳೂರು: ನಾಗಮಂಗಲ ಕೋಮು ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ದಾಳಿಗೊಳಗಾದ ಅಂಗಡಿ, ವಾಹನ ಮಾಲೀಕರಿಗೆ ಪರಿಹಾರ ಕೊಡುವ ನಿಟ್ಟಿನಲ್ಲಿ ಪರಿಶೀಲನೆ ಮಾಡಿ ಕ್ರಮ ಕೈಗೊಳ್ಳುತ್ತೇವೆ ಎಂದು ಗೃಹ ಸಚಿವ ಡಾ. ಜಿ ಪರಮೇಶ್ವರ್ ಹೇಳಿದರು. ಬೆಂಗಳೂರಿನಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಪೊಲೀಸ್ ಅಧಿಕಾರಿಗಳಿಗೆ ಯಾವುದೇ ಘಟನೆಗಳು ನಡೆದರೆ ನಿಮ್ಮನ್ನೇ ಹೊಣೆ ಮಾಡುತ್ತೇವೆ ಎಂದು ಸೂಚಿಸಿದ್ದೇವೆ.
ಈ ಘಟನೆಯನ್ನು ನಿರ್ವಹಣೆ ಮಾಡುವಲ್ಲಿ ಪೊಲೀಸರು ಎಡವಿದ್ದಾರೆ. ಹೀಗಾಗಿ ಇನ್ ಸ್ಪೆಕ್ಟರ್ ಅವರನ್ನು ಅಮಾನತು ಮಾಡಿದ್ದೇವೆ. ಅವರ ಮೇಲೆ ತನಿಖೆ ನಡೆಯುತ್ತಿದೆ. ವರದಿ ಕೊಡಲು ಹಿರಿಯ ಅಧಿಕಾರಿಗಳು ಸೂಚನೆ ಕೊಟ್ಟಿದ್ದಾರೆ. ನಂತರ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಇನ್ನೂ ಇನ್ನೂ ಗೃಹ ಸಚಿವರು ವಿರುದ್ಧದ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಬಿಜೆಪಿಯವರ ಸರ್ಟಿಫಿಕೇಟ್ ನನಗೆ ಬೇಕಿಲ್ಲ. ಘಟನೆಯನ್ನು ಯಾರಾದರೂ ಸಮರ್ಥನೆ ಮಾಡುತ್ತೇವಾ? ಕಾರಣಕರ್ತರನ್ನು ಬಂಧನ ಮಾಡುತ್ತೇನೆ. ಹೇಳಿಕೆಗಳನ್ನು ಬಿಜೆಪಿಗರು ಕೊಡುವುದು ಸಹಜ. ನನಗೂ ಮಾತನಾಡಲು ಬರುತ್ತೆ. ನನ್ನ ಮಾತನ್ನು ಟ್ವಿಸ್ಟ್ ಮಾಡಲಾಗಿದೆ ಎಂದರು
ಈ ಘಟನೆ ಪೂರ್ವನಿಯೋಜಿತ ಎಂಬ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಈಗಾಗಲೇ ಘಟನೆಯ ಬಗ್ಗೆ ತನಿಖೆಗೆ ಸೂಚನೆ ನೀಡಲಾಗಿದೆ. ತನಿಖಾ ವರದಿಯ ಬಳಿಕ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಇದೇ ಸಂದರ್ಭದಲ್ಲಿ ತಿಳಿಸಿದರು.