ಬೆಂಗಳೂರು: ಇಂದು ದಿವಗಂತ ಮಾಜಿ ಪ್ರಧಾನ ಮಂತ್ರಿ ಅಟಲ್ ಬಿಹಾರಿ ವಾಜಪೇಯಿಗೆ 100ನೇ ಹುಟ್ಟುಹಬ್ಬ. ಮಾಜಿ ಪ್ರಧಾನಿ ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿ ಭಾರತದ ಸ್ವಾತಂತ್ರ್ಯೋತ್ತರ ರಾಜಕಾರಣದಲ್ಲಿ ಸದಾ ಹಸಿರಾಗಿರುವ ಹೆಸರು. ಅವರೊಬ್ಬ ನಿಷ್ಕಳಂಕ ಚಾರಿತ್ರ್ಯದ, ಮೇರು ವ್ಯಕ್ತಿತ್ವದ ಮಹಾನ್ ಜನನಾಯಕ. ಅಪ್ರತಿಮ ವಾಗ್ಮಿ, ಅದ್ವಿತೀಯ ಸಂಸತ್ ಪಟು. ಕವಿ ಹೃದಯದ ಭಾವಜೀವಿ, ಸರ್ವಜನಪ್ರಿಯ ಹಾಗೂ ಬಹುರಂಗಿನ ವ್ಯಕ್ತಿತ್ವದ ಅಪೂರ್ವ ವ್ಯಕ್ತಿ, ಶಕ್ತಿ. ಇಂದು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನ
ಮಧ್ಯಪ್ರದೇಶದಲ್ಲಿ ಜನನ: ಅಟಲ್ ಬಿಹಾರಿ ವಾಜಪೇಯಿ ಅವರು 1924, ಡಿಸೆಂಬರ್ 25ರಂದು ಕೃಷ್ಣದೇವಿ ಹಾಗೂ ಕೃಷ್ಣ ಬಿಹಾರಿ ವಾಜಪೇಯಿ ಅವರ ಮಗನಾಗಿ ಮಧ್ಯ ಪ್ರದೇಶದ ಗ್ವಾಲಿಯರ್ ಹತ್ತಿರದ ಶಿಂದೆ ಕಿ ಚವ್ವಾಣಿ ಎಂಬ ಗ್ರಾಮದಲ್ಲಿ ಜನಿಸಿದರು. ಅಟಲ್ ಬಿಹಾರಿ ವಾಜಪೇಯಿ ಡಿಸೆಂಬರ್ 25,1924ರಲ್ಲಿ ಜನಿಸಿದರು. ಅವರೊಬ್ಬ ಕವಿ, ಹೆಸರಾಂತ ಪತ್ರಕರ್ತ, ಶ್ರೇಷ್ಠ ವಾಗ್ಮಿ, ಚಿಂತಕ, ದಾರ್ಶನಿಕ, ನಿಸ್ವಾರ್ಥ ರಾಜಕಾರಣಿಯಾಗಿ ಹೆಸರು ಪಡೆದಿದ್ದಾರೆ.
ಅಪ್ರತಿಮ ವಾಗ್ಮಿ: ಹಿಂದಿ ಭಾಷೆ ಅರಿಯದವರಿಗೂ ಸುಲಭವಾಗಿ ಅರ್ಥವಾಗುವ ಭಾಷೆಯಲ್ಲಿ ವಾಜಪೇಯಿ ಸುಲಲಿತವಾಗಿ ಮಾತನಾಡುತ್ತಿದ್ದರು. ರಾಜಕೀಯ ಎದುರಾಳಿಗಳನ್ನು ಹಣಿಯಲು ಅವರು ಬಳಸುತ್ತಿದ್ದುದು ಕೆಲವೇ ಶಬ್ದಗಳನ್ನು.
ಬಿಜೆಪಿಯ ಮೊದಲ ಪ್ರಧಾನಿ: 1998-2004ರವರೆಗೆ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ ಸರ್ಕಾರವನ್ನು ಮುನ್ನಡೆಸಿದ ವಾಜಪೇಯಿ ಅವರು ಬಿಜೆಪಿಯಿಂದ ದೇಶದ ಪ್ರಧಾನಿಯಾದ ಮೊದಲ ನಾಯಕರಾಗಿದ್ದರು. ಮೂರು ಭಾರಿ ಪ್ರಧಾನಿಯಾಗಿ ಸೇವೆ ಸಲ್ಲಿಸಿದ ಅವರು, 1996ರಲ್ಲಿ ಮೊದಲ ಬಾರಿಗೆ ಮತ್ತು 1998 ರಿಂದ 2004 ನಡುವೆ ಎರಡು ಭಾರಿ ಪ್ರಧಾನಿಯಾಗಿದ್ದರು.
ಪರಮಾಣು ಪರೀಕ್ಷೆ: ವಾಜಪೇಯಿ ಅಧಿಕಾರಾವಧಿಯಲ್ಲಿ ಅನೇಕ ಮಹತ್ವದ ಯೋಜನೆಗಳು ಮತ್ತು ಕಾರ್ಯಕ್ರಮಗಳು ಅನುಷ್ಠಾನಗೊಂಡವು. ಭಾರತವು 1998ರಲ್ಲಿ ರಾಜಸ್ಥಾನದ ಪೋಖ್ರಾನ್ನಲ್ಲಿ ಸರಣಿ ಪರಮಾಣು ಪರೀಕ್ಷೆಗಳನ್ನು ಯಶಸ್ವಿಯಾಗಿ ನಡೆಸಿತು.
ಹಲವು ಪ್ರಶಸ್ತಿಗಳ ಗೌರವ: ವಾಜಪೇಯಿ ಅವರಿಗೆ ಪದ್ಮ ವಿಭೂಷಣ, ಲೋಕಮಾನ್ಯ ತಿಲಕ್ ಪ್ರಶಸ್ತಿ, ಉತ್ತಮ ರಾಜಕೀಯ ಪಟು ಗೌರವ, ಪಂಡಿತ್ ಗೋವಿಂದ್ ವಲ್ಲಭ್ ಪಂತ್ ಪ್ರಶಸ್ತಿ, ಭಾರತ ರತ್ನ ಪ್ರಶಸ್ತಿ, ಬಾಂಗ್ಲಾ ವಿಮೋಚನಾ ಯುದ್ಧ ಪ್ರಶಸ್ತಿ ಸಂದಿವೆ
1999ರ ಕಾರ್ಗಿಲ್ ಯುದ್ಧದಲ್ಲಿ ಭಾರತದ ಪ್ರಧಾನಿ : ಭಾರತ ಪಾಕಿಸ್ತಾನದ ಜೊತೆ ಉತ್ತಮ ಸಂಬಂಧ ಹೊಂದಬೇಕು ಎಂದು ಕನಸು ಕಂಡಿದ್ದ ಅಟಲ್ ಬಿಹಾರಿ ವಾಜಪೇಯಿ ಅವರು ಭಾರತದಿಂದ ಪಾಕಿಸ್ತಾನಕ್ಕೆ ಬಸ್ ಸಂಪರ್ಕ ಸೇವೆ ಪ್ರಾರಂಭ ಮಾಡಿದ್ದರು.. ಆದರೆ ಪಾಕಿಸ್ತಾನ ನರಿಬುದ್ಧಿ ತೋರಿಸಿ ಭಾರತದ ವಿರುದ್ಧ ಕಾರ್ಗಿಲ್ ಯುದ್ಧ ನಡೆಸಿತು.. ಒಂದು ಪ್ರಧಾನಿಯಾಗಿದ್ದ ವಾಜಪೇಯಿ ಅವರು ತಮ್ಮ ದೃಢನಿರ್ಧಾರದಿಂದ ಕುತಂತ್ರಿ ಬುದ್ಧಿಯ ಪಾಕಿಸ್ತಾನಕ್ಕೆ ಸರಿಯಾದ ಬುದ್ಧಿ ಕಲಿಸುವ ನಿರ್ಧಾರ ಕೈಗೊಂಡರು.
ಅಜಾತಶತ್ರು ವಾಜಪೇಯಿ: ಬಿಜೆಪಿಯಲ್ಲಿ ಇದ್ದರೂ ಎಲ್ಲಾ ಪಕ್ಷಗಳಲ್ಲಿ ಉತ್ತಮ ಸ್ನೇಹಿತರನ್ನು ಹೊಂದಿದ್ದ ವಾಜಪೇಯಿ ಅವರು ಅಜಾತಶತ್ರು ಎಂಬ ಖ್ಯಾತಿ ಪಡೆದವರು.. ಪ್ರತಿಯೊಂದು ಪಕ್ಷದ ಜನರು ವಾಜಪೇಯಿ ಅವರಿಗೆ ಒಡನಾಡಿಗಳಾಗಿದ್ದರು.
ವಾಜಪೇಯಿ ಜನ್ಮದಿನದಂದು ಗುಡ್ ಗೌರ್ಮೆಂಟ್ ಡೇ ಆಚರಣೆ: ಇನ್ನು ಅತ್ಯುತ್ತಮ ಆಡಳಿತದಿಂದ ಅಚ್ಚಳಿಯದ ಛಾಪು ಮೂಡಿಸಿದ್ದ ಮಾಜಿ ಪ್ರಧಾನಮಂತ್ರಿ ವಾಜಪೇಯಿ ಅವರ ಜನ್ಮದಿನವನ್ನು ಗುಡ್ ಗವರ್ನೆನ್ಸ್ ಡೇ ಎಂದು ಕೇಂದ್ರ ಸರ್ಕಾರ ಆಚರಣೆ ಮಾಡುವ ಮೂಲಕ ಪ್ರತಿವರ್ಷ ಅವರಿಗೆ ಗೌರವ ಸಲ್ಲಿಸುತ್ತಾ ಬಂದಿದೆ. ಭಾರತ ರತ್ನ ಪ್ರಶಸ್ತಿ ಗೌರವ: 93ನೇ ವಯಸ್ಸಿನಲ್ಲಿ 2018ರಲ್ಲಿ ಧೀರ್ಘಕಾಲದ ಕಾಯಿಲೆಯಿಂದ ಅವರು ಮೃತಪಟ್ಟರು. ಆಗ ಅಧಿಕಾರದಲ್ಲಿದ್ದ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಅಟಲ್ ಅವರಿಗೆ ದೇಶದ ಪರಮೋಚ್ಛ ಗೌರವವಾದ ಭಾರತ ರತ್ನ ನೀಡಿ ಗೌರವಿಸಿದರು.