ಭಾರತ ಜಗತ್ತಿಗೆ ಪರಿಚಯಿಸಿದ ಅಸಾಮಾನ್ಯ ಕ್ರೀಡಾಪಟುಗಳಲ್ಲಿ ಹಾಕಿ ದಂತಕತೆ ಮೇಜರ್ ಧ್ಯಾನ್ ಚಂದ್ ಅಗ್ರಸ್ಥಾನದಲ್ಲಿ ನಿಲ್ಲುತ್ತಾರೆ. ಮಾಂತ್ರಿಕ ಹಾಕಿಪಟು ಧ್ಯಾನ್ ಚಂದ್ ಅವರ ಜನ್ಮದಿನವನ್ನು ದೇಶಾದ್ಯಂತ ಇಂದು ರಾಷ್ಟ್ರೀಯ ಕ್ರೀಡಾದಿನವನ್ನಾಗಿ ಆಚರಿಸಲಾಗುತ್ತಿದೆ.
ವಿಶ್ವಮಟ್ಟದಲ್ಲಿ ಭಾರತದ ಹಾಕಿ ತಂಡವನ್ನು ಗುರುತಿಸುವಂತೆ ಮಾಡಿದ ಶ್ರೇಷ್ಠ ಆಟಗಾರ ಎಂದರೆ ಅದು ಧ್ಯಾನ್ ಚಂದ್. ದೇಶದ ಕೀರ್ತಿಯನ್ನು ಹೆಚ್ಚಿಸಿದ ಧ್ಯಾನ್ ಚಂದ್ ಅವರು 1905ರ ಆಗಸ್ಟ್ 29ರಂದು ಅಹಮದಾಬಾದ್ನಲ್ಲಿ ಜನಿಸಿದರು.
ಒಲಿಂಪಿಕ್ನಲ್ಲಿ ಸಾಲು ಸಾಲು ಚಿನ್ನ ಗೆಲ್ಲಿಸಿ ಕೊಟ್ಟಿರುವ ಧ್ಯಾನ್ ಅವರು 400ಕ್ಕೂ ಅಧಿಕ ಗೋಲು ಗಳಿಸಿದ್ದಾರೆ. ಭಾರತೀಯ ಹಾಕಿಯನ್ನು ಯಶಸ್ಸಿನ ಶಿಖರಾಗ್ರಕ್ಕೊಯ್ದ ಧ್ಯಾನ್ ಚಂದ್ಗೆ ಇಂದು ಭಾರತೀಯರೆಲ್ಲರೂ ನಮನವನ್ನು ಸಲ್ಲಿಸುತ್ತಿದ್ದಾರೆ. ಸ್ವಾತಂತ್ರ್ಯಪೂರ್ವದಲ್ಲಿ 1928ರಿಂದ ಒಲಿಂಪಿಕ್ಸ್ನಲ್ಲಿ ಸತತ ಮೂರು ಬಾರಿ ಚಿನ್ನದ ಪದಕ ಗೆದ್ದ ಭಾರತದ ಹಾಕಿ ತಂಡದ ಮಹಾನ್ ಆಟಗಾರ ಇವರು.
ರಾಷ್ಟ್ರೀಯ ಕ್ರೀಡಾ ದಿನದ ಇತಿಹಾಸ ಹಾಗೂ ಮಹತ್ವ
ದೇಶದಲ್ಲಿ ಕ್ರೀಡೆಗೆ ವಿಶೇಷ ಮಹತ್ವ ನೀಡುವ ಸಲುವಾಗಿ 2012ರಲ್ಲಿ ದೇಶ ಕಂಡ ಅಪ್ರತಿಮ ಹಾಕಿಪಟು ಮೇಜರ್ ಧ್ಯಾನ್ ಚಂದ್ ಅವರ ಜನ್ಮದಿನವನ್ನು ಆಗಸ್ಟ್ 29 ಅನ್ನು ರಾಷ್ಟ್ರೀಯ ಕ್ರೀಡಾ ದಿನವನ್ನಾಗಿ ಆಚರಿಸಲು ನಿರ್ಧರಿಸಲಾಯಿತು. ಉತ್ತರ ಪ್ರದೇಶದ ಪ್ರಯಾಗ್ರಾಜ್ನಲ್ಲಿ 29 ಆಗಸ್ಟ್ 1905 ರಂದು ಜನಿಸಿದ ಧ್ಯಾನ್ ಚಂದ್ ಅವರನ್ನು ಗೌರವಿಸಲು ಈ ದಿನವು ವಿಶೇಷವಾಗಿದೆ. ಕ್ರೀಡೆಯ ಮೌಲ್ಯಗಳ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಹಾಗೂ ದೈಹಿಕವಾಗಿ ಸಕ್ರಿಯವಾಗಿರಲು ಜನರನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಈ ದಿನವು ಮಹತ್ವದ್ದಾಗಿದೆ.
ರಾಷ್ಟ್ರೀಯ ಕ್ರೀಡಾ ದಿನದ ಥೀಮ್ ಹಾಗೂ ಆಚರಣೆ
ಪ್ರತೀ ವರ್ಷವೂ ರಾಷ್ಟ್ರೀಯ ಕ್ರೀಡಾ ದಿನವನ್ನು ಒಂದೊಂದು ಧ್ಯೇಯದೊಂದಿಗೆ ಆಚರಿಸಲಾಗುತ್ತಿದೆ. ಈ ವರ್ಷ “ಶಾಂತಿಯುತ ಮತ್ತು ಅಂತರ್ಗತ ಸಮಾಜಗಳ ಉತ್ತೇಜನಕ್ಕಾಗಿ ಕ್ರೀಡೆ’ ಎನ್ನುವ ಥೀಮ್ ನೊಂದಿಗೆ ರಾಷ್ಟ್ರೀಯ ಕ್ರೀಡಾ ದಿನವನ್ನು ಆಚರಿಸಲಾಗುತ್ತಿದೆ. ಈ ದಿನದಂದು ವಿವಿಧ ಕ್ರೀಡಾಕೂಟಗಳು ಮತ್ತು ಸೆಮಿನಾರ್ಗಳನ್ನು ಆಯೋಜಿಸಲಾಗುತ್ತದೆ. ಅದಲ್ಲದೇ, ರಾಷ್ಟ್ರೀಯ ಕ್ರೀಡಾ ದಿನದಂದು ಅತ್ಯುತ್ತಮ ಕ್ರೀಡಾಪಟುಗಳು ಮತ್ತು ತರಬೇತುದಾರರಿಗೆ ವಿವಿಧ ಪ್ರಶಸ್ತಿಗಳಾದ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿ, ರಾಜೀವ್ ಗಾಂಧಿ ಕೇಲ್ ರತ್ನ, ದ್ರೋಣಾಚಾರ್ಯ ಪ್ರಶಸ್ತಿ, ಅರ್ಜುನ ಪ್ರಶಸ್ತಿ ಮುಂತಾದವುಗಳನ್ನು ನೀಡಿ ಗೌರವಿಸಲಾಗುತ್ತದೆ. ಈ ಪ್ರಶಸ್ತಿ ಪ್ರದಾನ ಕಾರ್ಯಕ್ರಮವು ರಾಷ್ಟ್ರಪತಿ ಭವನದಲ್ಲಿ ನಡೆಯುತ್ತದೆ. ಭಾರತದ ರಾಷ್ಟ್ರಪತಿಯವರು ಕ್ರೀಡಾಪಟುಗಳಿಗೆ ಪ್ರಶಸ್ತಿ ನೀಡಿ ಗೌರವಿಸುತ್ತಾರೆ.
ಭಾರತದ ಹಾಕಿ ಮಾಂತ್ರಿಕ ಮೇಜರ್ ಧ್ಯಾನ್ ಚಂದ್
ಭಾರತದ ಹಾಕಿ ಮಾಂತ್ರಿಕ, ದಂತಕತೆ ಮೇಜರ್ ಧ್ಯಾನ್ ಚಂದ್ ಜನ್ಮದಿನ ಆಗಸ್ಟ್ 29 ರಂದು ದೇಶದ್ಯಾಂತ ‘ರಾಷ್ಟ್ರೀಯ ಕ್ರೀಡಾ ದಿನಾಚರಣೆ’ಯಾಗಿ ಆಚರಿಸಲಾಗುತ್ತದೆ. ಮೇಜರ್ ಧ್ಯಾನ್ ಚಂದ್ ಭಾರತದಲ್ಲಷ್ಟೇ ಅಲ್ಲ ಇಡೀ ವಿಶ್ವದಲ್ಲೇ ಅತ್ಯಂತ ಶ್ರೇಷ್ಠ ಹಾಕಿ ಕ್ರೀಡಾಪಟು ಎನಿಸಿಕೊಂಡಿದ್ದರು. ಆತನನ್ನು ಸರಿಗಟ್ಟುವ ಆಟಗಾರ ಇಂದಿನ ವರೆಗೂ ವರೆಗೂ ಯಾರು ಇಲ್ಲ ಎಂಬುದು ಅಚ್ಚರಿಯ ವಿಷಯವೇ ಸರಿ. ಮೇಜರ್ ಧ್ಯಾನದ ಚಂದ್ ಆಗಸ್ಟ್ 29,1905 ರಲ್ಲಿ ಅಹಮದಾಬಾದ್ನಲ್ಲಿ ಜನಿಸಿದರು. ವಿಶ್ವಕಂಡ ಅಪರೂಪದ, ಅತ್ಯುತ್ತಮ ಹಾಕಿ ಆಟಗಾರ ಎಂಬ ಹೆಗ್ಗಳಿಕೆಗೆ ಧ್ಯಾನ್ ಚಂದ್ ಪಾತ್ರರಾಗಿದ್ದರು.
ಜರ್ಮನಿಯ ಸರ್ವಾಧಿಕಾರಿ ಹಿಟ್ಲರ್ರನ್ನು ಬೆರಗುಗೊಳಿಸಿದ ಹಾಕಿ ಆಟಗಾರ ಧ್ಯಾನ್ ಚಂದ್. ಧ್ಯಾನ್ ಚಂದ್ ಅವರನ್ನು ಅಕ್ಕರೆಯಿಂದ ‘ದಾದಾ’ ಎಂದು ಕರೆಯಲಾಗುತ್ತಿತ್ತು. ದಾದಾ ಸಾಧನೆಗೆ ಕೈಗನ್ನಡಿಯೆಂಬಂತೆ 1956ನೇ ಇಸವಿಯಲ್ಲಿ ಭಾರತೀಯ ಸರ್ಕಾರ ಪದ್ಮ ಭೂಷಣ ಪ್ರಶಸ್ತಿ ನೀಡಿ ಗೌರವಿಸಿತ್ತು. 1928, 1932 ಹಾಗೂ 1936ರಲ್ಲಿ ಭಾರತಕ್ಕೆ ಒಲಿಂಪಿಕ್ ಹಾಕಿ ಚಿನ್ನದ ಪದಕವನ್ನು ಗೆಲ್ಲಿಸಿಕೊಟ್ಟಿದ್ದರು. ಅಲ್ಲದೆ 400ಕ್ಕೂ ಹೆಚ್ಚು ಅಂತರಾಷ್ಟ್ರೀಯ ಗೋಲುಗಳನ್ನು ಸಿಡಿಸಿದ್ದರು.
ಒಲಂಪಿಕ್ಸ್ನಲ್ಲಿ ಮೂರು ಬಂಗಾರ ತಂದು ಕೊಟ್ಟಿದ್ದ ಧ್ಯಾನ್ ಚಂದ್
ಒಂಲಪಿಕ್ಸ್ ಕ್ರೀಡಾಕೂಟದಲ್ಲಿ ಮೂರು ಬಾರಿ ಚಿನ್ನದ ಪದಕವನ್ನು ಗೆಲ್ಲುವಲ್ಲಿ ಮೇಜರ್ ಧ್ಯಾನ್ ಚಂದ್ ನೇತೃತ್ವದ ಹಾಕಿ ತಂಡ ಯಶಸ್ವಿಯಾಗಿತ್ತು. 1928, 1932 ಹಾಗೂ 1936ರಲ್ಲಿ ಸತತ ಮೂರು ಭಾರತ ಹಾಕಿ ತಂಡ ಬಂಗಾರದ ಪದಕ ಗೆಲ್ಲುವ ಮೂಲಕ ದಾಖಲೆ ಬರೆದಿತ್ತು. ಇದರಲ್ಲಿ ಮೆಜರ್ ಧ್ಯಾನ್ ಚಂದ್ ಅವರ ಪಾತ್ರ ಬಹಳ ಪ್ರಮುಖವಾಗಿತ್ತು. 1926 ರಿಂದ 1948ರ ಅವಧಿಯಲ್ಲಿ ಧ್ಯಾನ್ ಚಂದ್ 400ಕ್ಕೂ ಹೆಚ್ಚು ಗೋಲುಗಳನ್ನು ಗಳಿಸುವ ಮೂಲಕ ವಿಶೇಷ ಸಾಧನೆ ಮಾಡಿದ್ದರು.
1979 ರಲ್ಲಿ ಧ್ಯಾನ್ ಚಂದ್ ಮರಣ
ಒಂಲಪಿಕ್ಸ್ ಕ್ರೀಡಾಕೂಟದಲ್ಲಿ ಭಾರತ ಮೂರು ಬಾರಿ ಚಿನ್ನದ ಪದಕವನ್ನು ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದ್ದ ಮೇಜರ್ ಧ್ಯಾನ್ ಚಂದ್ ಅವರು 1948 ರಲ್ಲಿ ತಮ್ಮ ಕೊನೆಯ ಅಂತರಾಷ್ಟ್ರೀಯ ಹಾಕಿ ಪಂದ್ಯವನ್ನಾಡಿದ್ದರು. ಮೇಜರ್ ಧ್ಯಾನ್ ಚಂದ್ ಡಿಸೆಂಬರ್ 03, 1979 ರಲ್ಲಿ ಇಹಲೋಕ ತ್ಯಜಿಸಿದರು. ಪ್ರತಿ ವರ್ಷ ಆಗಸ್ಟ್ 29 ರಂಧು ರಾಷ್ಟ್ರೀಯ ಕ್ರೀಡಾ ದಿನವನ್ನು ಆಚರಿಸಲಾಗುತ್ತದೆ.