ಇಂದು ನಾಡಿನೆಲ್ಲೆಡೆ ಶಿವರಾತ್ರಿ ಸಂಭ್ರಮ… ಓಂ ನಮಃ ಶಿವಾಯ ಜಪ ಜೋರು… ಉಪವಾಸ ಪೂಜೆಯಲ್ಲಿ ನಿರತರಾಗಿದ್ದ ನಮ್ಮ ಸಿಲಿಕಾನ್ ಸಿಟಿ ಜನರನ್ನು ನೋಡುವುದೇ ಒಂದು ಹಬ್ಬ…ಎಲ್ಲ ಶಿವನ ದೇವಾಲಯದಲ್ಲಿ ನಿರಂತರ ಅಭಿಷೇಕ, ಪೂಜೆ, ಆರತಿ, ಪ್ರಸಾದ ವಿನಿಯೋಗ ಆಗುತ್ತಲೇ ಇದೆ.. ಈ ಝಲಕ್ ನಿಮ್ಮ ಮುಂದೆ.
ಶಿವ..ಶಿವ…ಶಿವ…ಇಂದು ನಿರಾಭರಣ ಸುಂದರನ ಹಬ್ಬ.. ವಿಭೂತಿಧಾರಿಯರಿಗೆ ಈ ದಿನ ಸುದಿನ.. ತ್ರೀನೇತ್ರನ ಜೋರು ಹಬ್ಬಕ್ಕೆ ಸಾಕ್ಷಿಯಾತ್ತು ನಮ್ಮ ಸಿಲಿಕಾನ್ ಸಿಟಿ… ಇಂದು ನಗರದೆಲ್ಲೆಡೆ ಮಹಾ ಶಿವರಾತ್ರಿ… ಬೆಂಗಳೂರಿನ ಗವಿಗಂಗದರೇಶ್ವರ, ಕಾಡುಮಲೇಶ್ವರ, ಪಂಚಮುಖಿಶಿವ ಎಲ್ಲ ಶಿವ ದೇವಲಯಗಳು ಶಿವಭಕ್ತರಿಂದ ತುಂಬಿ ಹೋಗಿತ್ತು..
ಬೆಳಗ್ಗಿನ ಜಾವ ೩ ಗಂಟೆಯಿಂದಲೇ ಶಿವದೇವಾಲಯಗಳಲ್ಲಿ ಪೂಜೆ..ಅಭಿಷೇಕ ಪ್ರಾರಂಭವಾಗಿ ಎಲ್ಲ ಶಿವಭಕ್ತರು ಆತನ ಆರಾಧನೆಯಲ್ಲಿ ಮುಳುಗಿ ಹೋಗಿದ್ದಾರೆ…ಈ ದಿನ ಎಲ್ಲ ಲಿಂಗಗಳಲ್ಲಿಯೂ ಶಿವ ಪ್ರತಿಷ್ಠಾಪನೆಯಾಗಿ ಭಕ್ತರ ಸಂಕಷ್ಟವನ್ನು ಅಲಿಸುತ್ತಾನೆ ಎಂಬ ನಂಬಿಕೆಯಿಂದ ಈ ಹಿನ್ನೆಲೆ ಎಲ್ಲ ಭಕ್ತರು ಶಿವನನ್ನು ಕಣ್ಣು ತುಂಬಿಸಿಕೊಳ್ಳಲು ದೇವಾಲಯಕ್ಕೆ ಭೇಟಿನೀಡಿದ್ದಾರೆ… ಈ ದಿನದ ವಿಶೇಷತೆ ಬಗ್ಗೆಯೂ ದೀಕ್ಷಿತರು ಮಾತನಾಡಿದ್ದು ಈಗಿದೆ..
ಇತ್ತ ಭಕ್ತರು ಸಹ ತಮ್ಮ ಮನೆಯ ಲಿಂಗವನ್ನು ದೇವಾಲಯಕ್ಕೆ ತಂದು ಆತನ ಸೇವೆಗೆ ಪಾತ್ರರಾಗಿದ್ದಾರೆ…ಶಿವ ದರ್ಶನಕ್ಕೆ ಉಪವಾಸಯಿದ್ದು ಆತನಿಗೆ ಭಕ್ತಿಯನ್ನ ಸಮರ್ಪಿಸಿದ್ದಾರೆ… ಇನ್ನ ದೇವಸ್ಥಾನಗಳು ಮದುವಣಗಿತಿಯತ್ತೆ ತಯಾರಗಿದ್ದು ಅದರ ಅಂದ ನೋಡುವುದೇ ಚಂದ… ಕಾಡುಮಲೇಶ್ವರ ದೇವಾಲಯದಲ್ಲತ್ತು ಅಲಂಕಾರ ನೋಡುವುದೇ ಕಣ್ಣಿಗೆ ಹಬ್ಬ..