ಶ್ರಾವಣ ಮಾಸವನ್ನ ಹಿಂದೂಗಳ ಪವಿತ್ರ ಮಾಸವೆಂದು ಪರಿಗಣಿಸಲಾಗಿದೆ. ಹಿಂದೂ ಪಂಚಾಂಗದ 5ನೇ ಮಾಸವಾದ ಶ್ರಾವಣ ಮಾಸವು ಜುಲೈ 29ರಿಂದ ಆರಂಭವಾಗಿ ಆಗಸ್ಟ್ 27ಕ್ಕೆ ಮುಕ್ತವಾಗುತ್ತದೆ. ಈ ತಿಂಗಳಲ್ಲಿ ಬರುವ ಹಬ್ಬ ಹಾಗೂ ವ್ರತಗಳು ಬಹುತೇಕವಾಗಿ ಶಿವ-ಪಾರ್ವತಿಗೆ ಮೀಸಲು ಆಗಿದೆ.
ಅಪೇಕ್ಷಿತ ಜೀವನ ಸಂಗಾತಿಯನ್ನು ಹೊಂದಲು ಬಯಸುವವರು ಶ್ರಾವಣ ಸೋಮವಾರ ವ್ರತವನ್ನು ಆಚರಿಸಬೇಕು. ಈ ಉಪವಾಸವನ್ನು ಆಚರಿಸುವುದರಿಂದ ಸಂತೋಷ, ಸಮೃದ್ಧಿ ಮತ್ತು ಪ್ರಗತಿಯ ಬಯಕೆಗಳು ಸಹ ಈಡೇರುತ್ತವೆ.
ಶ್ರಾವಣ ಸೋಮವಾರ ವ್ರತವನ್ನು ಆಚರಿಸಲು ಕೆಲವೊಂದು ನಿಯಮಗಳಿವೆ. ಶ್ರಾವಣ ಸೋಮವಾರದಂದು ಈ ನಿಯಮಗಳನ್ನು ಅನುಸರಿಸುವುದು ಅವಶ್ಯಕ. ನೀವು ಆ ನಿಯಮಗಳನ್ನು ಅನುಸರಿಸದಿದ್ದರೆ, ನೀವು ಮಾಡಿದ ಪೂಜೆಯ ಫಲವು ಪ್ರಾಪ್ತವಾಗುವುದಿಲ್ಲ. ಶ್ರಾವಣ ಸೋಮವಾರದಂದು ನಾವು ಯಾವೆಲ್ಲಾ ನಿಯಮಗಳನ್ನು ಅನುಸರಿಸಬೇಕು..?
ಶ್ರಾವಣ ಸೋಮವಾರ ಇದನ್ನು ಸೇವಿಸದಿರಿ
ನೀವು ಶ್ರಾವಣ ಸೋಮವಾರದ ದಿನದಂದು ಉಪವಾಸ ವ್ರತವನ್ನು ಮಾಡುತ್ತಿದ್ದರೆ ಹಣ್ಣುಗಳನ್ನು ಸೇವಿಸಬಹುದು. ಈ ಹಣ್ಣುಗಳನ್ನು ನೀವು ಸೇವಿಸುವಾಗ ತಪ್ಪಿಯೂ ಉಪ್ಪನ್ನು ಹಣ್ಣುಗಳಲ್ಲಿ ಬಳಸಬಾರದು. ಒಂದು ವೇಳೆ ನೀವು ತಿನ್ನುವ ಹಣ್ಣಿಗೆ ಉಪ್ಪು ಅವಶ್ಯಕವೇ ಆಗಿದ್ದರೆ ಅಥವಾ ಹಣ್ಣುಗಳಲ್ಲಿ ಉಪ್ಪನ್ನು ಬಳಸುವುದು ಆರೋಗ್ಯದ ದೃಷ್ಟಿಯಿಂದ ತುಂಬಾ ಮುಖ್ಯವಾಗಿದ್ದರೆ ನೀವು ಕಲ್ಲು ಉಪ್ಪನ್ನು ಬಳಸಬಹುದು.
ಇದನ್ನು ಕುಡಿಯಬಾರದು
ಶಿವನಿಗೆ ಶ್ರಾವಣ ಮಾಸದಲ್ಲಿ ಹಸಿ ಹಾಲಿನಿಂದ ಅಭಿಷೇಕ ಮಾಡಲಾಗುತ್ತದೆ. ಅದರಲ್ಲೂ ಶ್ರಾವಣ ಸೋಮವಾರದಂದು ತಪ್ಪದೇ ಶಿವನಿಗೆ ಹಾಲಿನಾಭಿಷೇಕವನ್ನು ಮಾಡಲಾಗುತ್ತದೆ. ಆದ್ದರಿಂದ ಶ್ರಾವಣ ಸೋಮವಾರವನ್ನು ಆಚರಿಸುವವರು ಹಾಲು ಸೇವಿಸುವುದನ್ನು ತಪ್ಪಿಸಬೇಕು.
ಇದು ತಾಮಸಿಕ ಆಹಾರ
ಶ್ರಾವಣ ಸೋಮವಾರದಂದು ಪೂಜೆ ಮತ್ತು ಉಪವಾಸ ವ್ರತ ಮಾಡುವಾಗ ತಾಮಸಿಕ ವಸ್ತುಗಳನ್ನು ಬಳಸಬೇಡಿ. ಉದಾಹರಣೆಗೆ ಬೆಳ್ಳುಳ್ಳಿ, ಈರುಳ್ಳಿ, ಮಾಂಸ, ಮದ್ಯ, ಮಸಾಲೆಯುಕ್ತ ಆಹಾರ, ಬದನೆಕಾಯಿ, ಬೇಳೆ ಹಿಟ್ಟು, ಸತ್ತು ಇತ್ಯಾದಿಗಳಿಂದ ತಯಾರಿಸಿದ ಆಹಾರವನ್ನು ಬಳಸಬೇಡಿ. ಇಂತಹ ಆಹಾರವನ್ನು ಸೇವಿಸುವುದು ನಿಮ್ಮ ವ್ರತವನ್ನು ಹಾಳು ಮಾಡುತ್ತದೆ.
ಈ ಗುಣಗಳಿಂದ ದೂರವಿರಬೇಕು
ಶ್ರಾವಣ ಸೋಮವಾರದಂದು ಉಪವಾಸ ವ್ರತ ಮಾಡುವ ಸಮಯದಲ್ಲಿ ಕಾಮ, ಕ್ರೋಧ, ಲೋಭ ಮುಂತಾದ ಕೆಟ್ಟ ಗುಣಗಳಿಂದ ದೂರವಿರಬೇಕು. ಯಾವುದೇ ಉಪವಾಸವನ್ನು ಮನಸ್ಸು, ಕಾರ್ಯ ಮತ್ತು ಮಾತಿನ ಶುದ್ಧತೆಯಿಂದ ಮಾಡಿದರೆ ಮಾತ್ರ ಫಲ ನೀಡುತ್ತದೆ. ದುಶ್ಚಟ, ಕ್ರೋಧ, ಕಳ್ಳತನ, ಮೋಸ ಇತ್ಯಾದಿ ಭಾವನೆಗಳನ್ನು ಇಟ್ಟುಕೊಂಡು ಪೂಜೆ ಮಾಡಬಾರದು. ಇಂತಹ ಭಾವನೆಗಳನ್ನಿಟ್ಟು ಮಾಡಿದ ಪೂಜೆಯು ಯಾವುದೇ ರೀತಿಯ ಫಲವನ್ನು ನೀಡುವುದಿಲ್ಲ.
ಇವುಗಳನ್ನು ಶ್ರಾವಣ ಸೋಮವಾರದ ಪೂಜೆಯಲ್ಲಿ ಬಳಸದಿರಿ
ಶಿವ ಪೂಜೆಯಲ್ಲಿ ನಿಷಿದ್ಧವಾಗಿರುವ ವಸ್ತುಗಳನ್ನು ತಪ್ಪಾಗಿಯೂ ಶ್ರಾವಣ ಮಾಸದ ಸೋಮವಾರದಂದು ಶಿವ ಪೂಜೆಯಲ್ಲಿ ಬಳಸಬೇಡಿ. ಶಿವನ ಪೂಜೆಯಲ್ಲಿ ತುಳಸಿ ಎಲೆಗಳು, ಸಿಂಧೂರ, ಅರಿಶಿನ, ಶಂಖ, ತೆಂಗಿನಕಾಯಿ ಮುಂತಾದವುಗಳ ಬಳಕೆಯನ್ನು ನಿಷೇಧಿಸಲಾಗಿದೆ.