ಇಂದು ವಿಶ್ವ ರಂಗಭೂಮಿ ದಿನ. ರಂಗಭೂಮಿ ಚಟುವಟಿಕೆಯಲ್ಲಿ ನಿರತರಾದವರಿಗೂ ಒಂದು ದಿನ ಮೀಸಲಿಡಬೇಕು ಎಂಬ ಕಾರಣಕ್ಕೆ ಪ್ರತಿವರ್ಷ ಮಾರ್ಚ್ 27ಕ್ಕೆ ವಿಶ್ವ ರಂಗಭೂಮಿ ದಿನವನ್ನು ವಿಶ್ವದಾದ್ಯಂತ ಆಚರಿಸಲಾಗುತ್ತದೆ.
1962ರಿಂದ ವಿಶ್ವ ರಂಗಭೂಮಿ ದಿನವನ್ನು ಆಚರಿಸಿಕೊಂಡು ಬರಲಾಗುತ್ತಿದೆ. 1962ರಲ್ಲಿ ಪ್ಯಾರಿಸ್ನಲ್ಲಿ ಅಂತರಾಷ್ಟ್ರೀಯ ನಾಟಕೋತ್ಸವದ ಉದ್ಘಾಟನೆ ಮಾಡಿ ಮೊದಲ ವಿಶ್ವ ರಂಗಭೂಮಿ ದಿನವನ್ನು ಆರಚಣೆ ಮಾಡಲಾಯಿತು. ಈ ದಿನವನ್ನು ಪರಿಚಯಿಸಿದ್ದು ಅಂತರಾಷ್ಟ್ರೀಯ ರಂಗಭೂಮಿ ಸಂಸ್ಥೆ ಅಥವಾ ಇಂಟರ್ನ್ಯಾಷನಲ್ ಥಿಯೇಟರ್ ಇನ್ಸ್ಟಿಟ್ಯೂಟ್.
ಜಗತ್ತಿನಾದ್ಯಂತ ಆಯಾ ಜನಾಂಗ, ದೇಶ, ಪ್ರದೇಶಗಳಲ್ಲಿ ಜನಮನಕ್ಕೆ ಹತ್ತಿರವಾದ ಕಲಾಕ್ಷೇತ್ರ ರಂಗಭೂಮಿ ರೂಪುಗೊಂಡಿದೆ. ಇದನ್ನು ಉಳಿಸುವುದು, ಬೆಳಸುವುದು ಪ್ರತಿಯೊಬ್ಬರ ಜವಾಬ್ದಾರಿಯೂ ಹೌದು.
ಸತ್ಯವನ್ನು ನೋಡಲು ಜನರು ಬರುವ ಸ್ಥಳ
ಥಿಯೇಟರ್ ಎಂಬ ಪದವು ಗ್ರೀಕರಿಂದ ಬಂದಿದೆ. ನೋಡುವ ಸ್ಥಳ ಎಂದರ್ಥ. ಇದು ಜೀವನ ಮತ್ತು ಸಾಮಾಜಿಕ ಪರಿಸ್ಥಿತಿಯ ಬಗ್ಗೆ ಸತ್ಯವನ್ನು ನೋಡಲು ಜನರು ಬರುವ ಸ್ಥಳವಾಗಿದೆ ಎಂದು ಸ್ಟೆಲ್ಲಾ ಆಡ್ಲರ್ ತಿಳಿಸಿದ್ದಾರೆ.
ರಂಗಭೂಮಿ ನಿಮ್ಮನ್ನು ಉತ್ತಮಗೊಳಿಸುತ್ತದೆ
ಸಿನಿಮಾಗಳು ನಿಮ್ಮನ್ನು ಪ್ರಸಿದ್ಧರನ್ನಾಗಿ ಮಾಡುತ್ತವೆ. ದೂರದರ್ಶನ ನಿಮ್ಮನ್ನು ಶ್ರೀಮಂತರನ್ನಾಗಿ ಮಾಡುತ್ತದೆ. ಆದರೆ, ರಂಗಭೂಮಿ ನಿಮ್ಮನ್ನು ಉತ್ತಮಗೊಳಿಸುತ್ತದೆ ಎಂದು ಟೆರೆನ್ಸ್ ಮನ್ ಹೇಳಿದ್ದಾರೆ. ಜೀವನವು ಥಿಯೇಟರ್ ಸೆಟ್ ಆಗಿದೆ. ಇದರಲ್ಲಿ ಕೆಲವು ಪ್ರಾಯೋಗಿಕ ಪ್ರವೇಶಗಳು ಇವೆ ಎಂದು ವಿಕ್ಟರ್ ಹ್ಯೂಗೋ ಅಭಿಪ್ರಾಯಪಟ್ಟಿದ್ದಾರೆ.