ಬೆಂಗಳೂರು: ಅಂದ್ರಹಳ್ಳಿಯ ಸರ್ಕಾರಿ ಶಾಲೆಯಲ್ಲಿ ಮಕ್ಕಳಿಂದ ಶೌಚಾಲಯ ಸ್ವಚ್ಛಗೊಳಿಸಿದ ವಿಚಾರಕ್ಕೆ ಗೃಹ ಸಚಿವ ಪರಮೇಶ್ವರ್ ಪ್ರತಿಕ್ರಿಯೆ ನೀಡಿದ್ದಾರೆ.
ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಇದರ ಬಗ್ಗೆ ಶಿಕ್ಷಣ ಸಚಿವರ ಗಮನಕ್ಕೆ ತರುತ್ತೇನೆ ಖಂಡಿತವಾಗಿ ಈ ರೀತಿ ನಡೆಯಬಾರದು. ಜನರಲ್ಲಿ ಸುತ್ತೋಲೆ ಹೊರಡಿಸುತ್ತೇವೆ
ಶಾಲೆಗಳಲ್ಲಿ ಈ ರೀತಿ ಘಟನೆ ನಡೆಯಬಾರದು ಮಕ್ಕಳನ್ನ ಈ ರೀತಿಯ ಕೆಲಸಗಳಿಗೆ ಬಳಸಿಕೊಳ್ಳಬಾರದು ಯಾವ ಉಪಾಧ್ಯಾಯರು ಮಕ್ಕಳ ಬಳಿ ಈ ಕೆಲಸ ಮಾಡಿಸಿದ್ದಾರೆ ಅವರ ಮೇಲೆ ಕ್ರಮ ಕೈಗೊಳ್ಳಲು ನಾನು ಸೂಚಿಸುತ್ತೇನೆ ಎಂದು ಹೇಳಿದರು.