ಬೆಂಗಳೂರಿನಲ್ಲಿ ಟೊಮೆಟೊ ಬೆಲೆ ನೂರರ ಗಡಿ ದಾಟಿದ್ದು, ಟೊಮೆಟೊ ಬೆಲೆ, ಇನ್ನು ಮೂರು ತಿಂಗಳಲ್ಲಿ ಈರುಳ್ಳಿ ಬೆಲೆಯೂ ಏರಿಕೆ ಆಗುವ ಸಾಧ್ಯತೆ ಇದೆ.
ಒಂದು ಕೆಜಿ ಟೊಮೆಟೊ ಬೆಲೆ ನೂರು ರೂಪಾಯಿ ದಾಟಿದೆ.
ಈ ವರ್ಷದ ಬೇಸಿಗೆಯಿಂದ ಬೆಂಗಳೂರಿಗೆ ಆದ ಪರಿಣಾಮಗಳು ಒಂದೆರಡಲ್ಲ. ಒಂದು ಕಡೆ ನೀರಿಲ್ಲದೇ ಪರದಾಡುವಂತಾಗಿದ್ದರೆ, ಮತ್ತೊಂದೆಡೆ, ಮಳೆ ಇಲ್ಲದೆ ಎಷ್ಟೋ ಬೆಳೆಗಳು ಹಾಳಾಗಿದ್ದು ಕೂಡ ನಗರದ ಮೇಲೆ ಪರಿಣಾಮ ಬೀರಿತ್ತು. ಈ ವರ್ಷ ಟೊಮೆಟೊ ಬೆಳೆಯುವುದಕ್ಕೆ ಹೋದವರು ಕೂಡ ಕೈ ಸುಟ್ಟುಕೊಂಡಿದ್ದರು. ಇದೀಗ ಮಳೆ ಆರಂಭವಾಗಿದ್ದು, ಟೊಮೆಟೊ ಬೆಳೆಯಲಾಗುತ್ತಿದೆ. ಆದರೆ ಮಳೆ ಸರಿಯಾದ ಸಮಯಕ್ಕೆ ಬರದ ಪರಿಣಾಮ ಬೆಳೆ ಸರಿಯಾಗಿ ಬಂದಿಲ್ಲ. ಹೀಗಾಗಿ ಕರ್ನಾಟಕದಿಂದ ಬರುತ್ತಿದ್ದ ಟೊಮೆಟೊ ಬೆಳೆ ಕಡಿಮೆಯಾಗಿದ್ದು, ಸದ್ಯ ನಾಸಿಕ್ನಿಂದ ತರಿಸಲಾಗುತ್ತಿದೆ. ಇನ್ನು ಒಂದು ತಿಂಗಳ ಕಾಲ ಟೊಮೆಟೊ ಬೆಲೆ ಇದೇ ರೀತಿಯಾಗಿ ಮುಂದುವರಿಯಲಿದೆ ಎಂದು ವ್ಯಾಪಾರಸ್ಥರು ಅಭಿಪ್ರಾಯಪಟ್ಟಿದ್ದಾರೆ.
ಈ ಹಿಂದೆ ಕೋಲಾರ, ಹೊಸಕೋಟೆ, ನಾಸಿಕ್, ಮಹಾರಾಷ್ಟ್ರ, ತಮಿಳುನಾಡು ಭಾಗದಿಂದ ಟೊಮೆಟೊ ಬರುತ್ತಿತ್ತಂತೆ. ಆದರೆ ಈಗ ನಾಸಿಕ್ ಬಿಟ್ಟರೆ ಬೇರೆ ಯಾವ ಭಾಗದಿಂದಲೂ ಬರುತ್ತಿಲ್ಲ. ಜೊತೆಗೆ ಟೊಮೆಟೊಗೆ ಸದ್ಯ ಬೇಡಿಕೆ ಜಾಸ್ತಿ ಇದೆ. ಬೇಡಿಕೆಗೆ ಸರಿಯಾಗಿ ಪೂರೈಕೆಯಾಗದ ಪರಿಣಾಮ ಬೆಲೆ ಜಾಸ್ತಿಯಾಗುತ್ತಿದೆ. ಇನ್ನು ಒಂದು ತಿಂಗಳುಗಳ ಕಾಲ ಟೊಮೆಟೊ ಬೆಲೆ ಹೀಗೆ ಮುಂದುವರಿಯುವ ಸಾಧ್ಯತೆ ಇದೆ