ಮೂರ್ತಿ ಚಿಕ್ಕದಾದರೂ ಕೀರ್ತಿ ಎನ್ನುವ ಗಾದೆ ಮಾತಿನಂತೆ ತುಂಬೆ ಗಿಡವು ನೋಡುವುದಕ್ಕೆ ಸಣ್ಣದಾಗಿ ಕಂಡರೂ ಆರೋಗ್ಯದ ವಿಚಾರದಲ್ಲಿ ದೊಡ್ಡದು. ಎಲ್ಲಾ ತರಹದ ಮಣ್ಣಿನಲ್ಲೂ ಮತ್ತು ವಾತಾವರಣದಲ್ಲೂ ಬೆಳೆಯುವ ತುಂಬೆಗಿಡದಲ್ಲಿ ಉತ್ತಮ ಔಷಧೀಯ ಗುಣಗಳಿವೆ.
10 ಮಿಲಿ ತುಂಬೆಗಿಡದ ರಸದ ಜೊತೆ 5 ಗ್ರಾಂ ಕರಿಮೆಣಸಿನ ಪುಡಿಯನ್ನು ಬೆರೆಸಿ ನಿಯಮಿತವಾಗಿ ಸೇವಿಸಿದರೆ ವಿಷಮಜ್ವರವು ಕಡಿಮೆಯಾಗುತ್ತದೆ.
-ತಲೆನೋವು , ತಲೆ ಭಾರ ಮತ್ತು ಮೂಗು ಕಟ್ಟಿದಲ್ಲಿ , ತುಂಬೆಗಿಡದ ಖಾಂಡವನ್ನು ನೀರಿನಲ್ಲಿ ಕುದಿಸಿ ಅದರ ಹಬೆಯನ್ನು ತೆಗೆದುಕೊಂಡರೆ, ತಲೆನೋವು, ತಲೆ ಭಾರ ಕಡಿಮೆಯಾಗುತ್ತದೆ.
ನಿಗದಿತ-ನಿಯಮಿತ ಪ್ರಮಾಣದಲ್ಲಿ ತುಂಬೆಗಿಡದ ರಸಕ್ಕೆ ಅಕ್ಕಿತೊಳೆದ ನೀರನ್ನು ಬೆರೆಸಿ ಸೇವಿಸಿದರೆ ಮತ್ತು ಅದೇ ಮಿಶ್ರಣದಿಂದ ಕಣ್ಣನ್ನು ತೊಳೆಯುತ್ತಿದ್ದರೆ ಕಣ್ಣಿನ ಸಮಸ್ಯೆ ದೂರವಾಗುತ್ತದೆ.
-ದೇಹದಲ್ಲಿ ಯಾವುದೇ ತರಹದ ಊತವಿದ್ದಲ್ಲಿ ತುಂಬೆ ಸೊಪ್ಪಿನ ಕಷಾಯದಿಂದ ಶಾಕವನ್ನು ಕೊಟ್ಟರೆ ಊತ ಕಡಿಮೆಯಾಗುತ್ತದೆ.
– 15 ಮಿಲಿ ತುಂಬೆಗಿಡದ ಕಷಾಯಕ್ಕೆ 2-4 ಗ್ರಾಂ ಸೈಂಧವ ಉಪ್ಪನ್ನು ಸೇರಿಸಿ, ದಿನಕ್ಕೆ 2 ಬಾರಿ ಸೇವಿಸಿದರೆ, ಜೀರ್ಣಶಕ್ತಿ ಹೆಚ್ಚುತ್ತದೆ.