ಟೂಥ್ ಪೇಸ್ಟ್ ನಲ್ಲಿ ಹಲ್ಲು ಸ್ವಚ್ಛಗೊಳಿಸಲು ಇರುವ ರಾಸಾಯನಿಕಗಳು ಪ್ರಬಲ ಹಾಗೂ ಹಾನಿಕರವೂ ಆಗಿವೆ. ವಿಶೇಷವಾಗಿ ಇದರಲ್ಲಿರುವ ಫ್ಲೋರೈಡ್ ಹೊಟ್ಟೆಗೆ ಹೋದರೆ ವಿಷಕ್ಕೆ ಸಮಾನ! ಹೆಚ್ಚಿನವರು ತಾವು ಹಲ್ಲುಜ್ಜಿದ ಬಳಿಕ ಮುಕ್ಕಳಿಸಿ ಉಗಿದು ಬಿಡುವ ಕಾರಣ ಅಪಾಯವಿಲ್ಲ ಎಂಬ ಅಭಿಪ್ರಾಯ ಹೊಂದಿದ್ದಾರೆ. ವಾಸ್ತವವಾಗಿ ಟೂಥ್ ಪೇಸ್ಟ್ ಜೊಲ್ಲಿನೊಡನೆ ನೊರೆಯರೂಪ ತಾಳಿದ ಬಳಿಕ ಬಾಯಿಯಲ್ಲಿ ಕೊಂಚವಾದರೂ ಉಳಿದೇ ಉಳಿಯುತ್ತದೆ. ದಂತವೈದ್ಯರ ಪ್ರಕಾರ ಇದು ಪೂರ್ಣವಾಗಿ ಹೋಗಬೇಕೆಂದರೆ ಕನಿಷ್ಠ ಐದು ಬಾರಿ ಮುಕ್ಕಳಿಸಬೇಕು. ಸಮಯವೇ ಇಲ್ಲವೆಂದಾದರೆ ಮೂರು ಬಾರಿಯಾದರೂ ಚೆನ್ನಾಗಿ ಮುಕ್ಕಳಿಸಬೇಕು.
ಟೂಥ್ ಪೇಸ್ಟ್ ಬಾಯಿಯಲ್ಲಿ ನೊರೆಬರುವ ಜೊತೆಗೇ ಸುಲಭವಾಗಿ ಜಾರುವಂತಾಗಲು sodium lauryl sulphate ಎಂಬ ರಾಸಾಯನಿಕವನ್ನು ಸೇರಿಸಲಾಗುತ್ತದೆ. ಈ ರಾಸಾಯನಿಕ ಬಾಯಿಯಲ್ಲು ಹುಣ್ಣು, ಚರ್ಮದಲ್ಲಿ ತುರಿಕೆ ಉಂಟುಮಾಡುವ ಜೊತೆಗೇ ಹೊಟ್ಟೆ ಸೇರಿದರೆ ಹಾರ್ಮೋನುಗಳನ್ನೇ ಏರುಪೇರು ಮಾಡುವ ಅಪಾಯವಿದೆ.
ಕೆಲವು ಟೂಥ್ ಪೇಸ್ಟ್ ಗಳಲ್ಲಿ Diethanolamine ಎಂಬ ರಾಸಾಯನಿಕವಿದೆ. ಇದು ಬುರುಗು ಹೆಚ್ಚಿಸಲು ನೆರವಗುತ್ತದೆ. ಬುರುಗಿನ ಜೊತೆಗೇ ಇದು ಯಕೃತ್, ಮೂತ್ರಪಿಂಡಗಳ ಕ್ಯಾನ್ಸರ್ ಮತ್ತು ಹಾರ್ಮೋನುಗಳಲ್ಲಿ ಏರುಪೇರಿಗೂ ಕಾರಣವಾಗುತ್ತದೆ.
DEA ಎಂಬ ರಾಸಾಯನಿಕವು ಟೂತ್ಪೇಸ್ಟ್ನಲ್ಲಿ ನೊರೆ ಬರಲು ಈ ರಾಸಾಯನಿಕ ಬಳಸಲಾಗುತ್ತದೆ. 1998ರ ಅಧ್ಯಯನದಲ್ಲಿ, ಆಂಟಿಫ್ರೀಜ್ ಮತ್ತು ಬ್ರೇಕ್ ದ್ರವದಲ್ಲಿ ಕಂಡುಬರುವ ಡೈಥನೋಲಮೈನ್ (DEA), ಸ್ಥಳೀಯವಾಗಿ ಅನ್ವಯಿಸಿದಾಗ ಪ್ರಾಣಿಗಳಲ್ಲಿನ ಕ್ಯಾನ್ಸರ್ಗೆ ಸಂಬಂಧಿಸಿದೆ. ಅದೇ ಅಧ್ಯಯನವು ಡಿಇಎ-ಪ್ರೇರಿತ ಯಕೃತ್ತಿನ ಕೋಲೀನ್ ಕೊರತೆಯನ್ನು ಕಂಡುಹಿಡಿದಿದೆ, ಇದು ಅನೇಕ ಹಾರ್ಮೋನುಗಳಲ್ಲಿ ಪ್ರಮುಖ ಸಂಯುಕ್ತವಾಗಿದೆ. ಪರಿಣಾಮವಾಗಿ, ಉಪಭೋಗ್ಯ ವಸ್ತುಗಳಲ್ಲಿ ಇದನ್ನು ತಪ್ಪಿಸುವುದು ಉತ್ತಮ.
ಎಲ್ಲಾ ಟೂತ್ಪೇಸ್ಟ್ಗಳ ಮೇಲೂ ಕೆಂಪು, ಹಸಿರು, ಕಪ್ಪು, ನೀಲಿ ಬಣ್ಣದ ಮಾಪನಗಳಿರುತ್ತವೆ. ಈ ಮಾಪನಗಳ ಹಿಂದಿರುವ ಅರ್ಥವನ್ನು ತಿಳಿದುಕೊಂಡರೆ ಸಾಕು. ಕೆಂಪು ಬಣ್ಣದ ಗುರುತು ಇದ್ದರೆ ಅದು ನೈಸರ್ಗಿಕ ಹಾಗೂ ಕೆಮಿಕಲ್ ಮಿಶ್ರಿತ ಎಂದರ್ಥ, ನೀಲಿ ಗುರುತು ಇದ್ದರೆ ಅದು ನೈಸರ್ಗಿಕ ಮತ್ತು ಔಷಧಿ ಗುಣ ಹೊಂದಿದೆ ಎಂದರ್ಥ, ಹಸಿರು ಬಣ್ಣದ ಗುರುತು ಇದ್ದರೆ ಅದು ಸಂಪೂರ್ಣ ನೈಸರ್ಗಿಕ ಎಂದರ್ಥ ಇನ್ನು ಟೂತ್ಪೇಸ್ಟ್ ಕಪ್ಪು ಬಣ್ಣದ ಗುರುತು ಹೊಂದಿದ್ದರೆ ಅದು ಸಂಪೂರ್ಣ ಕೆಮಿಕಲ್ನಿಂದ ಮಾಡಲಾಗಿದೆ ಎಂದರ್ಥ.