ಇಡೀ ವಿಶ್ವವೇ ತುದಿಗಾಲಲ್ಲಿ ನಿಂತು ಕಾಯುತ್ತಿರುವ ಭಾರತದ ಲೋಕಸಭೆ ಚುನಾವಣೆಯು ನಿರ್ಣಾಯಕ ಹಂತಕ್ಕೆ ತಲುಪಿದೆ. 2024ರ ಲೋಕಸಭೆ ಚುನಾವಣೆಯ ಏಳನೇ ಹಾಗೂ ಅಂತಿಮ ಹಂತದ ಮತದಾನದ ಶುರುವಾಗಿದೆ. ಅಂತಿಮ ಹಂತದಲ್ಲಿ ಒಟ್ಟು ಏಳು ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶ ಚಂಡೀಗಢ ಸೇರಿದಂತೆ 57 ಲೋಕಸಭಾ ಕ್ಷೇತ್ರಗಳಿಗೆ ಮತದಾನ ನಡೆಯುತ್ತಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಮತಗಟ್ಟೆಗಳ ಬಿಗಿ ಬಂದೋಬಸ್ತ್ ನಿಯೋಜಿಸಲಾಗಿದೆ.

- ಪಂಜಾಬ್ 13 ಕ್ಷೇತ್ರಗಳು
- ಹಿಮಾಚಲ ಪ್ರದೇಶ 04 ಕ್ಷೇತ್ರಗಳು
- ಉತ್ತರ ಪ್ರದೇಶ 13 ಕ್ಷೇತ್ರಗಳು
- ಪಶ್ಚಿಮ ಬಂಗಾಳ 09 ಕ್ಷೇತ್ರಗಳು
- ಬಿಹಾರ 08 ಕ್ಷೇತ್ರಗಳು
- ಒಡಿಶಾ 06 ಕ್ಷೇತ್ರಗಳು
- ಜಾರ್ಖಂಡ್ 03 ಕ್ಷೇತ್ರಗಳು
ಇದರೊಂದಿಗೆ ಒಡಿಶಾದ 42 ಮತ್ತು ಹಿಮಾಚಲ ಪ್ರದೇಶದ ಆರು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯ ಮತದಾನವೂ ಇಂದೇ ನಡೆಯಲಿದೆ. ಭಾರತದಲ್ಲಿ ಮೂರನೇ ಬಾರಿಗೆ ಬಿಜೆಪಿಯನ್ನು ಅಧಿಕಾರಕ್ಕೆ ತರಲು ಪಣತೊಟ್ಟಿರುವ ಮೋದಿ, ಅಬ್ಬರದ ಪ್ರಚಾರ ನಡೆಸಿದ್ರು. ಕೊನೆ ಹಂತದ ಬಹಿರಂಗ ಪ್ರಚಾರಕ್ಕೆ ತೆರೆ ಬೀಳ್ತಿದ್ದಂತೆ ಪ್ರಧಾನಿ ಮೋದಿ ಕನ್ಯಾಕುಮಾರಿಗೆ ತೆರಳಿ, ಸ್ವಾಮಿ ವಿವೇಕಾನಂದರು ಧ್ಯಾನ ಮಾಡಿದ್ದ ಸ್ಥಳದಲ್ಲಿ 45 ಗಂಟೆಗಳ ಧ್ಯಾನ ಕೈಗೊಂಡಿದ್ದಾರೆ. ಇವತ್ತು ಮಧ್ಯಾಹ್ನ ಅವರು ಧ್ಯಾನವನ್ನು ಮುಕ್ತಾಯ ಮಾಡಲಿದ್ದಾರೆ.